Sunday, January 19, 2025
ರಾಜಕೀಯ

ಬೆಳ್ತಂಗಡಿ ಕಾಂಗ್ರೆಸ್ ನಲ್ಲಿ ಮನೆ ಒಂದು ಮೂರು ಬಾಗಿಲು ; ಮೂರು ಬಣಗಳ ಮೂರೂಬಿಟ್ಟವರು – ಕಹಳೆ ನ್ಯೂಸ್

ಬೆಳ್ತಂಗಡಿ : ರಾಜಕೀಯದಲ್ಲಿ ಯುವ ನಾಯಕತ್ವದರೂವರಿ ದೊರೆತ ಮೇಲೆ ಒಂದಿಲ್ಲೊಂದು ರೀತಿಯಲಿ ತೀವ್ರ ಪೈಪೋಟಿಯ ಮಧ್ಯೆ ಕಾಂಗ್ರೆಸ್ಸಿನಲ್ಲಿ ಸೋಲಿನ ಭೀತಿ ಕಾಡತೊಡಗಿದೆ.

ತಾಲೂಕಿನ ಕಾಂಗ್ರೆಸ್ ಎಂಬ ಪಕ್ಷ ಒಂದು ಆದರೂ ಅದರೊಳಗೆ ಮೂರು ಬಣಗಳು ಹುಟ್ಟಿ ತೀವ್ರ ಮುಖಭಂಗವಾಗುವ ಸಾಧ್ಯತೆಗಳು ದಟ್ಟವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

1 ). ಮೂಲ ಕಾಂಗ್ರೆಸ್ಸಿಗ ಹರೀಶ್ ಕುಮಾರ್ ಬಣ :

ಜಾಹೀರಾತು
ಜಾಹೀರಾತು
ಜಾಹೀರಾತು

ತಾಲೂಕಿನ ಪಕ್ಷ ಸಂಘಟನೆ, ಪಕ್ಷದ ಬೆಳವಣಿಗೆಗೆ ಅವಿರತವಾಗಿ ದುಡಿಯುತಿರುವ ಮೂಲ ಕಾಂಗ್ರೆಸ್ಸಿಗ ಹರೀಶ್ ಕುಮಾರ್ ಅವರು ಇಂದು ತಾಲೂಕಿನಲಿ ಸ್ವಪಕ್ಷೀಯರಿಂದಲೇ ಮೂಲೆ ಗುಂಪಾಗಿ ಉಳಿದಿದ್ದಾರೆ. ಕಾಂಗ್ರೆಸ್ಸಿನ ಮೂಲವೆಂದರೆ ಅದು ಹರೀಶ್ ಕುಮಾರ್ ಆದರಿಂದು ಪಕ್ಷದೊಳಗೆಯೇ ಮೂಲ ಕಾಂಗ್ರೆಸ್ಸಿಗರ ಜೊತೆ ನಿಂತು ಬೇರೆಯೇ ಬಣವಾಗಿ ನಿಂತು ಬಿಟ್ಟಿದ್ದಾರೆ !! ಮೂಲ ಕಾಂಗ್ರೆಸ್ಸಿಗರಿಗೆ ಕಾಂಗ್ರೆಸ್ ಪಕ್ಷದಲಿ ಬೆಲೆಯಿಲ್ಲ – ಸ್ವ ಪಕ್ಷೀಯರ ಮೇಲೆಯೇ ಪಕ್ಷ ನಿಷ್ಠೆ ತೋರಿಸುತಿಲ್ಲ ಎಂಬ ನೋವು ಅವರಲಿ ಕಾಡತೊಡಗಿದೆ.

2) ಪಕ್ಷದಿಂದ ಪಕ್ಷಕೆ ಹಾರುತಿರುವ ವಸಂತ ಬಂಗೇರರ ಬಣ :
ವಸಂತ ಬಂಗೇರರು ಆದಿಯಲ್ಲಿ, ಬಿಜೆಪಿ ಜೊತೆ ಕೈ ಜೋಡಿಸಿ – ಗೆದ್ದು ಬಂದು ನಂತರ ಜೆಡಿಎಸ್‌ ಮುಂದೆ ಕಾಂಗ್ರೆಸ್ಸಿಗೆ ಜಿಗಿದು ಒಮ್ಮೆ ಕಾಂಗ್ರೆಸ್ ಪಕ್ಷದಲಿಯೂ ಸೋಲನುಭವಿಸಿ – ಕಳೆದ 10 ವರ್ಷಗಳ ಅವಧಿಯಿಂದ ಕಾಂಗ್ರೆಸ್ ಶಾಸಕರಾಗಿರುವ ವಸಂತ ಬಂಗೇರರ ಬಣ ಇನ್ನೊಂದು. ಪಕ್ಷ ಕೇವಲ ವಸಂತ ಬಂಗೇರರಿಗೆಯೇ ಮಣೆ ಹಾಕುತಿರುವುದು ಮೂಲ ಕಾಂಗ್ರೆಸ್ಸಿಗರ ಅಸಮಧಾನಕೆ ಕಾರಣವಾಗಿದೆ. ಮೂಲ ಕಾಂಗ್ರೆಸ್ಸ್ ಬಣವು ಈ ಬಾರಿ ಆದರೂ, ತಮ್ಮ ಪಕ್ಷ ಮೂಲ ಕಾಂಗ್ರೆಸ್ಸಿಗರ ಮೇಲೆ ಕರುಣೆ ತೋರಬಹುದೆಂದು ಕೊಂಡು ಹುರುಪಿನಲ್ಲಿತ್ತಾದರೂ ವಸಂತ ಬಂಗೇರರಿಗೆ ಮತ್ತೆ ಅಭ್ಯರ್ಥಿ ಸ್ಥಾನ ನೀಡಿದಾಗ ನಿರಾಸೆಯಾಗಿ ಮೂಲ ಕಾಂಗ್ರೆಸ್ ಬಣ ಮತ್ತೆ ಮೂಲೆ ಗುಂಪಾಯಿತು. ಈ ರೀತಿ ಎರಡನೇ ಬಣವಾಗಿ ತಾಲೂಕಿನ ಕಾಂಗ್ರೆಸ್ ಪಕ್ಷದಲಿ ಮೂಡಿರುವುದು.

3) ಕಾಂಗ್ರೆಸ್ ನಿಂದ ಬಿಜೆಪಿ – ಮತ್ತೆ ಬಿಜೆಪಿ ಯಿಂದ ಕಾಂಗ್ರೆಸ್ ಪ್ರವಾಸ ಮಾಡಿರುವ ಗಂಗಾಧರ ಗೌಡ’ರ ಬಣ :

ಇದು ಮೂರನೇ ಬಣವಾಗಿ ಚುನಾವಣೆಯ ಹೊಸ್ತಿಲಲಿ ರಚನೆಗೊಂಡ ಬಣ !! ಇವರು ಕಾಂಗ್ರೆಸ್ಸಿಗೆ ಕಾಲಿಡುತ್ತಿದ್ದಂತೆ ಪಕ್ಷದೊಳಗಿನ ಕಚ್ಚಾಟ ಬಿರುಸುಗೊಂಡಿದೆ ಎಂದರೆ ತಪ್ಪಾಗದು.. ಪ್ರಸ್ತುತ ಶಾಸಕರಾಗಿರುವ ವಸಂತ ಬಂಗೇರ ಹಾಗೂ ಮೂಲ ಕಾಂಗ್ರೆಸ್ಸಿಗ ಗಂಗಾಧರ ಗೌಡರ ಮುನಿಸು ಗಂಗಾಧರ ಗೌಡರು ಪಕ್ಷ ತೊರೆಯುವಂತೆ ಮಾಡಿದ್ದು ಇಡೀ ತಾಲೂಕಿಗೆ ತಿಳಿದ ವಿಷಯ !! ಇದೀಗ ಗಂಗಾಧರ ಗೌಡರ ಮತ್ತೆ ಕಾಂಗ್ರೆಸ್ ಪ್ರವೇಶದಿಂದಾಗಿ ವಸಂತ ಬಂಗೇರರಿಗೆ ಅಸಮಧಾನವುಂಟಾಗಿದೆ ಎಂಬ ಗುಸು – ಗುಸು ಸದ್ದಿಲ್ಲದೆ ಮನೆ ಮಾಡಿದೆ. ವಸಂತ ಬಂಗೇರ’ರ ಇದು ಕೊನೆಯ ಚುನಾವಣೆ ಮುಂದಿನ ಚುನಾವಣೆಯಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ತಾನು ಸ್ಪರ್ಧಿಸಬೇಕೆಂಬ ಹಂಬಲದಿಂದ ಗಂಗಾಧರ ಗೌಡ’ರು ಕಾಂಗ್ರೆಸ್ ಕಾಲಿಟ್ಟಿದ್ದಾರೆ ಎಂಬ ದಟ್ಟವಾದ ಸಂಶಯದಲಿ ಉಳಿದ ಮುಂದಿನ ಅಭ್ಯರ್ಥಿ ಆಕಾಂಕ್ಷಿಗಳು ಇವರ ವಿರುದ್ಧವೇ ಷಡ್ಯಂತ್ರ ಹೂಡುವರೇ ? ಎಂಬ ಪ್ರಶ್ನಾರ್ಥಕ ಸಂಶಯವೂ ಮನ ಮಾಡಿದೆ.

ಅಂತು, ತಾಲೂಕಿನ ಕಾಂಗ್ರೆಸ್ ಇದೀಗ ಮುಖ್ಯವಾಗಿ ಮೂರು ಭಾಗ ಕೊಂಡಿದ್ದು ಅದರೊಳಗೆ ಮತ್ತೆ ಯುವ ಕಾಂಗ್ರೆಸ್ಸಿನಲಿ 2 ಗುಂಪುಗಳು ನಿರ್ಮಾಣವಾಗಿದ್ದೂ ತಿಳಿದಿದೆ !! ಸೋಲಿನ ಭಯ ಮನೆ ಮಾಡಿರುವ ಕಾಂಗ್ರೆಸ್ ಅಲ್ಲೋಲ – ಕಲ್ಲೋಲವಾಗಿ ಛಿಧ್ರವಾಗುತಿದೆ… !! ಚುನಾವಣೆಗೆ ಇನ್ನು ಕೆಲವೇ ದಿನಗಳು ಉಳಿದಿರುವಾಗ, ಪಕ್ಷದೊಳಗೆ ಕತ್ತಿ ಮಸೆಯುವವರ ಸಂಖ್ಯೆ ಹೆಚ್ಚಾಗಿದ್ದು, ಕಾಂಗ್ರೆಸ್ ಸೋಲಿನ ಕದ ತಟ್ಟುತ್ತಿರುವುದು ಬೆಳ್ತಂಗಡಿಗೆ ನವೋಲ್ಲಾಸವಾದರೆ – ಪಕ್ಷಕ್ಕೆ ಮಾತ್ರ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಏನೇ ಆಗಲಿ ಕಾಂಗ್ರೆಸ್ಸಿನ ಈ ಮೂರು ಬಣಗಳು ಮತ್ತುಳಿದ ಎರಡು ಬಣಗಳ ನಡುವಿನ ಕಚ್ಚಾಟವು ಕಾಂಗ್ರೆಸ್ ಸೋಲಿಗೆ ಮುನ್ನುಡಿ ಬರೆಯಬಹುದೆಂಬ ಲೆಕ್ಕಚಾರ ತಾಲೂಕಿನಲ್ಲಿ ಮನೆ ಮಾಡಿದೆ.