Recent Posts

Tuesday, January 21, 2025
ಸುದ್ದಿ

ಲ್ಯಾಂಪ್ಸ್ ಸಹಕಾರ ಸಂಘದ ವತಿಯಿಂದ ಕಾಲಭೈರವೇಶ್ವರ ಸಿದ್ಧಮುನಿ ಕ್ಷೇತ್ರ ಬಟ್ಟಲುಕೆರೆ ಕಾಫಿನಡ್ಕ ಅರಸಿನಮಕ್ಕಿದಲ್ಲಿ ಸಸಿಗಳನ್ನು ನೆಡುವ ಮತ್ತು ವಿತರಿಸುವ ಕಾರ್ಯಕ್ರಮ – ಕಹಳೆನ್ಯೂಸ್

ಬೆಳ್ತಂಗಡಿ: ಪರಿಶಿಷ್ಟ ವರ್ಗದ ದೊಡ್ಡ ಪ್ರಮಾಣದ ವಿವಿಧೋದ್ಧೇಶ ಸಹಕಾರ ಸಂಘ ,(ನಿ.) ಲ್ಯಾಂಪ್ಸ್ ಸಹಕಾರ ಸಂಘದ ಬೆಳ್ತಂಗಡಿ ಇದರ ವತಿಯಿಂದ ಸಸಿಗಳನ್ನು ನೆಡುವ ಮತ್ತು ವಿತರಿಸುವ ಕಾರ್ಯಕ್ರಮವು ಕಾಲಭೈರವೇಶ್ವರ ಸಿದ್ಧಮುನಿ ಕ್ಷೇತ್ರ ಬಟ್ಟಲುಕೆರೆ ಕಾಫಿನಡ್ಕ ಅರಸಿನಮಕ್ಕಿದಲ್ಲಿ ಆಯೋಜಿಸಲಾಗಿತ್ತು. ಕ್ಷೇತ್ರದ ಅರ್ಚಕರಾದ ಪರದಾ ಶಂಕರ ದಾಮ್ಲೆ ವಿಶೇಷ ಪ್ರಾರ್ಥನೆ ಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬಳಿಕ ಸಸಿ ವಿತರಿಸಿ ಮಾತನಾಡಿದ ಲ್ಯಾಂಪ್ಸ್ ಅಧ್ಯಕ್ಷರಾದ ಲಿಂಗಪ್ಪ ನಾಯ್ಕ ಉರುವಾಲು ಪ್ರಕೃತಿಯೇ ದೇವರು ಎಂದು ಆರಾಧಿಸಿಕೊಂಡು ಬರುತ್ತಿದ್ದ ನಮ್ಮ ಹಿರಿಯರು ಪ್ರಕೃತಿಗೆ ಸ್ಥಾನಮಾನವನ್ನು ನೀಡಿದವರು. ಆದರೆ ನಾವಿಂದು ನಮ್ಮ ಸ್ವಾರ್ಥಕ್ಕಾಗಿ ಪ್ರಕೃತಿಯನ್ನು ನಾಶ ಮಾಡಿ ನಮ್ಮ ವಿನಾಶದತ್ತ ಹೋಗುತ್ತಿದ್ದೇವೆ. ಇದರಿಂದ ಪಾರಾಗಲು ನಾವು ಗಿಡಗಳನ್ನು ನೆಟ್ಟು ಪ್ರಕೃತಿಯನ್ನು ಉಳಿಸಿ ಬೆಳೆಸೋಣ ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಈ ಕಾರ್ಯಕ್ರಮದಲ್ಲಿ ಕ್ಷೇತ್ರದ ಕಾರ್ಯದರ್ಶಿ ಮೋಹನ ನಾಯ್ಕ, ಆನಂದ ನಾಯ್ಕ ಅರಸಿನಮಕ್ಕಿ ಹಾಗೂ ಆಡಳಿತ ಮಂಡಳಿ ಸದಸ್ಯರುಗಳಾದ ರುಕ್ಮಯ ಕುಲಾಲ್, ತುಂಗಾ ಗೌಡ, ಆನಂದ ಗೌಡ, ಶಶಿಕಲಾ ಹಾಗೂ ಲ್ಯಾಂಪ್ಸ್ ಕಾರ್ಯದರ್ಶಿಗಳಾದ ನೀನಾಕುಮಾರ್, ಲ್ಯಾಂಪ್ಸ್ ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗ ಹಾಗೂ ಅಧಿಕ ಸಂಖ್ಯೆಯಲ್ಲಿ ಕ್ಷೇತ್ರದ ಭಕ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.