ಕರಾವಳಿಯ ಮೂವರಿಗೆ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ; ಕೋಟ + ಅಂಗಾರ + ಸುನಿಲ್ ಇನ್..! – ಕಹಳೆ ನ್ಯೂಸ್
ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರಿಗೆ ಕೊನೆಗೂ ಸಚಿವನಾಗುವ ಭಾಗ್ಯ ಕೂಡಿ ಬಂದಿದ್ದು, ಬೊಮ್ಮಾಯಿ ನೂತನ ಸಂಪುಟದಲ್ಲಿ ಸಚಿವರಾಗಿ ಆಯ್ಕೆಯಾಗಿದ್ದಾರೆ. ಯವನಾಯಕತ್ವ,ಹಿಂದುತ್ವ,ಅಭಿವೃಧ್ಧಿ ಈ ಮೂರು ಪ್ರಮುಖ ವಿಷಯಗಳ ಆಧಾರವನ್ನಿಟ್ಟು ರಾಜಕಾರಣ ಜೀವನದಲ್ಲಿ ಹೊಸ ಸಂಚಲನ ಸೃಷ್ಟಿ ಮಾಡಿದ್ದ ಅಧ್ಬುತ ಕೆಲಸಗಾರ ಕಾರ್ಕಳ ಕ್ಷೇತ್ರದ ಜನಪ್ರೀಯ ಶಾಸಕರಾದ ವಿ.ಸುನೀಲ್ ಕುಮಾರ್
ಕರಾವಳಿ ಭಾಗದ ಪ್ರಭಾವಿ ಮುಖಂಡನಾಗಿರುವ ಸುನಿಲ್ ಕುಮಾರ್, ಈ ಹಿಂದೆಯೇ ಸಚಿವರಾಗಬೇಕಿತ್ತು. ಆದರೆ, ಕಾರಣಾಂತರಗಳಿ0ದ ಸಚಿವ ಸ್ಥಾನ ಸಿಕ್ಕಿರಲಿಲ್ಲ. ವಿಧಾನಸಭೆ ಚುನಾವಣೆಗೆ ಇನ್ನು ಕೇವಲ ಒಂದೂವರೆ ವರ್ಷ ಬಾಕಿ ಇರುವುದರಿಂದ ಹಾಗೂ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ ಅವರಿಗೆ ಸಚಿವ ಸ್ಥಾನ ನೀಡಲು ಹೈಕಮಾಂಡ್ ಅಸ್ತು ಎಂದಿದೆ ಎನ್ನಲಾಗಿದೆ. ಹಿಂದುತ್ವ ಪರ ನಿಲುವು, ಸ್ಪಷ್ಟ ಭಾಷಣಕಾರನಾಗಿ ಜನರ ನಾಡಿ ಮಿಡಿತ ಅರಿಯುವ ನಾಯಕನಾಗಿ ಸುನೀಲ್ ಕುಮಾರ್ ಹೈ ಕಮಾಂಡ್ ಹಾಗೂ ಬಿ.ಎಸ್ ಯಡಿಯೂರಪ್ಪ ಎರಡೂ ಕಡೆಯಿಂದಲೂ ಅವಿರೋಧವಾಗಿ ಆಯ್ಕೆ ಆಗಿದ್ದಾರೆ ಎನ್ನಲಾಗುತ್ತಿದೆ. ಆರ್.ಎಸ್.ಎಸ್ ನಾಯಕರ ಬೆಂಬಲ ಜತೆಗೆ ಸಮುದಾಯದ ಬಲವೂ ಇರುವುದರಿಂದ ಕರಾವಳಿ ಭಾಗದಲ್ಲಿ ಪಕ್ಷ ಸಂಘಟನೆಗೆ ಸೂಕ್ತ ಆಯ್ಕೆ ಎಂಬ ಮಾತು ಕೇಳಿಬಂದಿದೆ. ಪ್ರಾದೇಶಿಕ ಸಮತೋಲನ ಹಾಗೂ ಜಾತಿ ಸಮೀಕರಣದ ವಿಟ್ಟಿನಿಂದಲೂ ಶಾಸಕ ಸುನಿಲ್ ಗೆ ಸಚಿವ ಸ್ಥಾನ ಒಲಿದು ಬಂದಿದೆ ಎಂದು ಹೇಳಲಾಗುತ್ತಿದೆ. ಕರಾವಳಿ ಭಾಗದಲ್ಲಿ ಎಸ್.ಅಂಗಾರ ಅವರನ್ನು ಮಂತ್ರಿಯಾಗಿ ಮುಂದುವರಿಸಲಾಗಿದ್ದು, ಸರಳ ರಾಜಕಾರಣಿ ಕೋಟ ಶ್ರೀನಿವಾಸ್ ಪೂಜಾರಿ ಅವರು ಬೊಮ್ಮಾಯಿ ಸಂಪುಟ ಉಸ್ತುವಾರಿ ಸಚಿವರಾಗಿಯೂ ಮುಂದುವರಿಸಲಾಗಿದೆ.