Saturday, November 16, 2024
ಬಂಟ್ವಾಳ

2 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಸೇತುವೆ ಮತ್ತು ಕಿಂಡಿ ಅಣೆಕಟ್ಟು ನ್ನು ಉದ್ಘಾಟನಾ ಕಾರ್ಯಕ್ರಮ – ಕಹಳೆ ನ್ಯೂಸ್

ಬಂಟ್ವಾಳ: ಶಾಸಕ ನಿಧಿಯಿಂದ 2 ಕೋಟಿ ವೆಚ್ಚದಲ್ಲಿ ಎರ್ಮೆನಿಲೆ ಎಂಬಲ್ಲಿ ನಿರ್ಮಾಣವಾದ ಸೇತುವೆ ಮತ್ತು ಕಿಂಡಿ ಅಣೆಕಟ್ಟು ನ್ನು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಸ್ಥಳೀಯರಾದ ದೈವನರ್ತಕ ಶೇಖರ ಪರವ ಅವರ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಶಾಸಕರು ಈ ಭಾಗದ ಹಲವಾರು ವರ್ಷಗಳ ಬೇಡಿಕೆಗೆ ಅನುಗುಣವಾಗಿ ಅಭಿವೃದ್ಧಿ ಕಾಮಗಾರಿ ಯನ್ನು ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಇದರ ಪ್ರಯೋಜನ ಪಡೆದು ಗ್ರಾಮದ ಅಭಿವೃದ್ಧಿ ಗಾಗಿ ಎಲ್ಲರ ಸಹಕಾರ ಬೇಕು ಎಂದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅದ್ಯಕ್ಷ ರೇಶ್ಮಾಶಂಕರಿ, ಉಪಾಧ್ಯಕ್ಷ ನಾಗೇಶ್ ಶೆಟ್ಟಿ, ಮಾಜಿಅಧ್ಯಕ್ಷ ರವೀಶ್ ಕರ್ಕಳ , ಮಾಜಿ ತಾ.ಪಂ.ಸದಸ್ಯ ಮಾದವ ಮಾವೆ , ಗ್ರಾಮ ಪಂಚಾಯತ್ ಸದಸ್ಯ ರಾದ ಜಯಂತ್ ಪೂರ್ಲಪ್ಪಾಡಿ, ಜಯಲಕ್ಷ್ಮಿ ಕೆ ಮಾಜಿ ತಾ.ಪಂ.ಸದಸ್ಯೆ ಧರ್ಮಾವತಿ ಪಿ.ಬಿ, ಗೋಪಾಲಜೋಗಿ , ಶಶಿಕಾಂತ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.

 

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು