Recent Posts

Sunday, January 19, 2025
ರಾಜಕೀಯ

ಕದ್ರಿ ಕೈ ಬಟ್ಟಲ್ ಪರಿಸರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲೋಬೊರಿಂದ ಮತಯಾಚನೆ – ಕಹಳೆ ನ್ಯೂಸ್

ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ , ಹಾಲಿ ಶಾಸಕ ಜೆ.ಆರ್. ಲೋಬೋರವರು ಕದ್ರಿ ಕೈ ಬಟ್ಟಲ್ ಪರಿಸರದಲ್ಲಿರುವ ಡಾಕ್ಟರ್ ಕಾಲನಿ ಮತ್ತು ಇನ್ನಿತರ ಪ್ರದೇಶಗಳಿಗೆ ತೆರಳಿ ಮತಯಾಚನೆ ನಡೆಸಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜೆ.ಆರ್ ಲೋಬೊ, ಬಹಳಷ್ಟು ಕೆಲಸ ಕಾರ್ಯಗಳು ಈ ಪ್ರದೇಶದಲ್ಲಿ ಕರ್ನಾಟಕ ಸರಕಾರ ಮತ್ತು ಮಹಾನಗರಪಾಲಿಕೆಯ ವತಿಯಿಂದ ನಡೆದಿದೆ. ಜನರು ಬಹಳ ಸಂತುಷ್ಟವಾಗಿದ್ದಾರೆ. ಅವರಿಗೆ ನಗರದ ಅಭಿವೃದ್ಧಿ ಮುಖ್ಯ. ಅವರು ಬಹಳ ನಂಬಿಕೆಯಿಂದ ಮತವನ್ನು ಕಾಂಗ್ರೆಸ್ ಪಕ್ಷಕ್ಕೆ ಹಾಕುತ್ತಾರೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಕಾರ್ಪೋರೇಟರ್ ಡಿ.ಕೆ.ಅಶೋಕ್ ಕುಮಾರ್, ಗೋಪಾಲ ಶೆಟ್ಟಿ, ಮರಿಯಮ್ಮ ತೋಮಸ್, ಟಿ.ಕೆ ಸುಧೀರ್, ಮೋಹನ್ ಕೊಪ್ಪಳ, ಫ್ರಾನ್ಸಿಸ್, ರಮಾನಂದ ಪೂಜಾರಿ, ಲಿಯಾಕತ್ ಆಲಿ, ತನ್ವೀರ್, ಕೃತಿನ್ ಕುಮಾರ್, ಶಂಶುದ್ದೀನ್ ಮೊದಲಾದವರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು