Recent Posts

Sunday, January 19, 2025
ಬೆಳ್ತಂಗಡಿ

ಬಂದಾರು ಗ್ರಾಮ ಪಂಚಾಯತ್ ಕಂದಾಯಇಲಾಖೆ ಮತ್ತು ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ಬೈಪಾಡಿ ಪ್ರೌಢಶಾಲೆಯಲ್ಲಿ ಪಿಂಚಣಿ ಅದಾಲತ್ ಕಾರ್ಯಗಾರ- ಕಹಳೆ ನ್ಯೂಸ್

ಬಂದಾರು: ಕಂದಾಯಇಲಾಖೆ ಮತ್ತು ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ಬೂತ್-3 ಬೈಪಾಡಿ ಗ್ರಾಮಸ್ಥರಿಗೆ ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವದ ಅಂಗವಾಗಿ ಬೈಪಾಡಿ ಪ್ರೌಢಶಾಲಾ ವಠಾರದಲ್ಲಿ ವಿವಿಧ ಜನಪರ ಕಾರ್ಯಕ್ರಮಗಳಲ್ಲಿ ಒಂದಾದ ಪಿಂಚಣಿ ಅದಾಲತ್ ಕಾರ್ಯಕ್ರಮದ ಅಡಿಯಲ್ಲಿ ಸಂಧ್ಯಾಸುರಕ್ಷಾ, ವಿಧವಾ ವೇತನ, ಮನಸ್ವಿನಿ ಯೋಜನೆ ಮುಂತಾದ ಪಿಂಚಣಿ ಯೋಜನೆಗಳ ಮಾಹಿತಿ ಮತ್ತು ಅರ್ಜಿ ಸಲ್ಲಿಸಲು ಅದಾಲತ್ ಕಾರ್ಯಾಗಾರ ಹಾಗೂ ವನಮಹೋತ್ಸವ ಪ್ರಯುಕ್ತ ಸಸಿ ವಿತರಣೆ ಕಾರ್ಯಕ್ರಮ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಪರಮೇಶ್ವರಿ ಕೆ. ಗೌಡ, ಉಪಾಧ್ಯಕ್ಷರಾದ ಶ್ರೀ ಗಂಗಾಧರ ಪೂಜಾರಿ, ಸದಸ್ಯರಾದ ಶ್ರೀ ಮೋಹನ್ ಗೌಡ, ಶ್ರೀಮತಿ ಭಾರತಿ, ಶ್ರೀಮತಿ ಅನಿತಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೋಹನ್ ಬಂಗೇರ, ಗ್ರಾಮ ಕರಣಿಕರಾದ ರಫೀಕ್ ಮುಲ್ಲಾ, ಬೈಪಾಡಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಬಾಲಕೃಷ್ಣ, ಅರಣ್ಯ ಪಾಲಕ ಭರತ್, ಅರಣ್ಯ ರಕ್ಷಕ ಜಗದೀಶ್, ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ಮೋಹನ್ ಬಂಗೇರ, ಪ್ರತೀಕ್ ರಾಜ್, ಗ್ರಾಮ ಸಹಾಯಕ ಕೇಶವ ಗೌಡ, ಹಾಗೂ ಮಾಜಿ ತಾಲೂಕ ಪಂಚಾಯತ್ ಸದಸ್ಯರಾದ ಮಹಾಬಲ ಗೌಡ ಮತ್ತಿತ್ತರರು ಉಪಸ್ಥಿತರಿದ್ದರು.