Friday, November 15, 2024
ಬೆಂಗಳೂರುರಾಜಕೀಯರಾಜ್ಯಸುದ್ದಿ

ಕೋಟಾರಿಗೆ ಸಮಾಜ ಕಲ್ಯಾಣ, ಹಿಂದುಳಿದ ವರ್ಗ ಕಲ್ಯಾಣ,ಎಸ್ ಅಂಗಾರರಿಗೆ ಬಂದರು, ಒಳನಾಡು ಸಾರಿಗೆ ಮತ್ತು ಮೀನುಗಾರಿಕೆ ಹಾಗೂ ಸುನಿಲ್ ಕುಮಾರ್ ಗೆ ಇಂಧನ ಮತ್ತು ಕನ್ನಡ ಮತ್ತು ಸಂಸ್ಕೃತಿ | ಬಸವರಾಜ ಬೊಮ್ಮಾಯಿ ಸಂಪುಟ : ಯಾವ ಸಚಿವರಿಗೆ ಯಾವ ಖಾತೆ? – ಕಹಳೆ ನ್ಯೂಸ್

ಬೆಂಗಳೂರು, ಆಗಸ್ಟ್ 7: ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟ ವಿಸ್ತರಣೆಯಾಗಿದ್ದು, ಭಾರಿ ಕುತೂಹಲ ಕೆರಳಿಸಿದ್ದ ಖಾತೆ ಹಂಚಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಆರಗ ಜ್ಞಾನೇಂದ್ರ ಅವರಿಗೆ ಗೃಹ ಹಾಗೂ ಸುನಿಲ್ ಕುಮಾರ್‌ಗೆ ಇಂಧನ ಖಾತೆ ನೀಡುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ರಾಜಭವನದಲ್ಲಿ ಕಳೆದ ಬುಧವಾರ ಮಧ್ಯಾಹ್ನ 2.15ಕ್ಕೆ ನಡೆದ ಸರಳ ಸಮಾರಂಭದಲ್ಲಿ ನೂತನ ಸಚಿವರ ಗೌಪ್ಯತಾ ವಿಧಿ, ಪ್ರತಿಜ್ಞೆ ಪ್ರಮಾಣ ವಚನ ಸ್ವೀಕಾರ ನಡೆಯಿತು. ಭಾರಿ ಬೇಡಿಕೆ, ಒತ್ತಡ ಕಂಡು ಬಂದರೂ ಡಿಸಿಎಂ ಹುದ್ದೆ ಸೃಷ್ಟಿಸದಿರಲು ಹೈಕಮಾಂಡ್ ನಿರ್ಧರಿಸಿದೆ. ಶುಕ್ರವಾರದಂದೇ ಸಚಿವರ ಖಾತೆ ಹಂಚಿಕೆ ಪಟ್ಟಿ ಪ್ರಕಟ ಮಾಡುವ ಬಗ್ಗೆ ಸುಳಿವು ನೀಡಿದ್ದ ಸಿಎಂ ಬೊಮ್ಮಾಯಿ ಸಂಜೆ ಸಿದ್ದಗಂಗಾ ಮಠಕ್ಕೆ ತೆರಳಿ ರಾತ್ರಿ ಆರ್ .ಟಿ ನಗರ ನಿವಾಸಕ್ಕೆ ಹಿಂದಿರುಗಿದರು. ಸಿಎಂ ಬೊಮ್ಮಾಯಿ ಜೊತೆಗೆ ಮುರುಗೇಶ್ ನಿರಾಣಿ, ಸೋಮಣ್ಣ, ಸುಧಾಕರ್ ಪ್ರಯಾಣಿಸಿದರೆ, ಮತ್ತೆ ಕೆಲವು ಮುಖಂಡರು ಸಿಎಂ ನಿವಾಸದ ಬಳಿ ಕಾಯುತ್ತಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಹೈಕಮಾಂಡ್ ಅಣತಿಯಂತೆ 6 ಹೊಸಬರು, ಅನುಭವವುಳ್ಳರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. ಪ್ರಮುಖವಾಗಿ ಮುಂಬರುವ ಬಿಬಿಎಂಪಿ ಚುನಾವಣೆ ಮೇಲೆ ಬಿಜೆಪಿ ಕಣ್ಣಿರಿಸಿಕೊಂಡು ಬೆಂಗಳೂರಿನ ಶಾಸಕರಿಗೆ ಮಣೆ ಹಾಕಲಾಗಿದೆ. 2023ರ ವಿಧಾನಸಭೆ ಚುನಾವಣೆಗೆ ಸಿದ್ಧತೆ ಆರಂಭವಾಗಿದ್ದು, ಜಾತಿವಾರು ಲೆಕ್ಕಾಚಾರದಂತೆ ಕೂಡಾ ಲಿಂಗಾಯತ, ದಲಿತ, ಹಿಂದುಳಿತ ವರ್ಗಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗಿದೆ. ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿ ಸೇರಿದಂತೆ 18 ಸಚಿವರು ಪದವಿ ಶಿಕ್ಷಣವನ್ನು ಮುಗಿಸಿದ್ದರೆ, ಉಳಿದ 12 ಸಚಿವರಲ್ಲಿ ಪಿಯುಸಿ, ಎಸ್‌ಎಸ್‌ಎಲ್‌ಸಿ ಅಥವಾ ಅದಕ್ಕಿಂತ ಕಡಿಮೆ ಶಿಕ್ಷಣವನ್ನು ಪಡೆದಿದ್ದಾರೆ.

“ಪಕ್ಷ ನಮ್ಮ ಮೇಲೆ ನಂಬಿಕೆಯಿಟ್ಟು ಯಾವುದೇ ಖಾತೆ ನೀಡಿದರೂ ಸಮರ್ಥವಾಗಿ ನಿಭಾಯಿಸುತ್ತೇವೆ” ಎಂಬುದು ಈ ದಿನ ಹೆಚ್ಚಾಗಿ ಕೇಳಿ ಬಂದ ಹೇಳಿಕೆ. ಪ್ರಭು ಚೌವ್ಹಾಣ್, ಬಿ.ಸಿ ಪಾಟೀಲ್ ಬಿಟ್ಟರೆ ಮಿಕ್ಕವರು ಯಾರೂ ಕೂಡಾ ಇಂಥದ್ದೇ ಖಾತೆ ಬೇಕು ಎಂದು ವರಾತ ಹಿಡಿದಿರಲಿಲ್ಲ. ಡಾ. ಸುಧಾಕರ್ ಹಾಗೂ ಡಾ. ಅಶ್ವಥ್ ನಾರಾಯಣ್ ನಡುವೆ ಆರೋಗ್ಯ ಖಾತೆ ಹಾಗೂ ವೈದ್ಯಕೀಯ ಶಿಕ್ಷಣ ಖಾತೆಗಾಗಿ ಪೈಪೋಟಿ ಇದೆ ಎಂಬ ಸುದ್ದಿ ಇದ್ದಿದ್ದು ನಿಜ. ಆರ್ ಅಶೋಕ ಅವರು ಗೃಹ ಖಾತೆ ಸಹವಾಸವೇ ಬೇಡ ಎಂದಿದ್ದು ಬಿಟ್ಟರೆ ಮಿಕ್ಕವರು ಕೊಟ್ಟ ಖಾತೆ ನಿಭಾಯಿಸುತ್ತೇವೆ ಎಂದು ಹೇಳಿದ್ದರು.

 

ಸಚಿವರು-ಕ್ಷೇತ್ರ-ಖಾತೆ

1. ಬಸವರಾಜ ಬೊಮ್ಮಾಯಿ-ಮುಖ್ಯಮಂತ್ರಿ, DPAR, ಹಣಕಾಸು, ಗೃಹ, ಗುಪ್ತಚರ (ಗೃಹ ಖಾತೆಯಿಂದ), ಸಂಪುಟ ವ್ಯವಹಾರ, ಬೆಂಗಳೂರು ಅಭಿವೃದ್ಧಿ ಹಾಗೂ ಮಿಕ್ಕ ಎಲ್ಲಾ ಖಾತೆಗಳು

2. ವಿ ಸೋಮಣ್ಣ- ಗೋವಿಂದರಾಜನಗರ-ವಸತಿ

3. ಶಂಕರ್ ಪಾಟೀಲ್ ಮುನೇನಕೊಪ್ಪ-ನವಲಗುಂದ-ಜವಳಿ, ಸಕ್ಕರೆ

4. ಜೆ.ಸಿ ಮಾಧುಸ್ವಾಮಿ- ಚಿಕ್ಕನಾಯಕನಹಳ್ಳಿ-ಸಣ್ಣ ನೀರಾವರಿ, ಕಾನೂನು, ಸಂಸದೀಯ ವ್ಯವಹಾರ

5. ಮುರುಗೇಶ್ ನಿರಾಣಿ-ಬೀಳಗಿ- ಬೃಹತ್ ಹಾಗೂ ಮಧ್ಯಮ ಕೈಗಾರಿಕೆ

6. ಸಿ. ಸಿ ಪಾಟೀಲ-ನರಗುಂದ-ಲೋಕೋಪಯೋಗಿ

7. ಬಿ.ಸಿ ಪಾಟೀಲ್-ಹಿರೇಕೆರೂರು-ಕೃಷಿ

8. ಉಮೇಶ್ ಕತ್ತಿ-ಹುಕ್ಕೇರಿ- ಅರಣ್ಯ, ಆಹಾರ, ಪಡಿತರ ವಿತರಣೆ, ಗ್ರಾಹಕ ವ್ಯವಹಾರ

9. ಶಶಿಕಲಾ ಜೊಲ್ಲೆ- ನಿಪ್ಪಾಣಿ-ಮುಜರಾಯಿ, ಹಜ್ ಮತ್ತು ವಕ್ಫ್

10. ಆರ್ ಅಶೋಕ-ಪದ್ಮನಾಭನಗರ-ಕಂದಾಯ(ಮುಜರಾಯಿ ಹೊರತುಪಡಿಸಿ)

11. ಎಸ್ ಟಿ ಸೋಮಶೇಖರ್-ಯಶವಂತಪುರ-ಸಹಕಾರ

12. ಡಾ. ಸಿ. ಎನ್ ಅಶ್ವಥ ನಾರಾಯಣ-ಮಲ್ಲೇಶ್ವರ- ಉನ್ನತ ಶಿಕ್ಷಣ, ಐಟಿ-ಬಿಟಿ

13. ಆರಗ ಜ್ಞಾನೇಂದ್ರ- ತೀರ್ಥಹಳ್ಳಿ-ಗೃಹ(ಗುಪ್ತಚರ ಹೊರತುಪಡಿಸಿ)

14. ಕೆ ಗೋಪಾಲಯ್ಯ-ಮಹಾಲಕ್ಷ್ಮಿ ಲೇಔಟ್-ಅಬಕಾರಿ

15. ಡಾ. ಸುಧಾಕರ್-ಚಿಕ್ಕಬಳ್ಳಾಪುರ-ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ

16. ಕೆ. ಸಿ ನಾರಾಯಣ ಗೌಡ- ಕೆ. ಆರ್ ಪೇಟೆ-ಕ್ರೀಡೆ, ಯುವಜನ, ಕೌಶಲ್ಯಾಭಿವೃದ್ಧಿ, ರೇಷ್ಮೆ

17. ಬೈರತಿ ಬಸವರಾಜ್- ಕೆ. ಆರ್ ಪುರ-ನಗರಾಭಿವೃದ್ಧಿ

18: ಕೆಎಸ್ ಈಶ್ವರಪ್ಪ-ಶಿವಮೊಗ್ಗ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್

19. ಗೋವಿಂದ ಕಾರಜೋಳ-ಮುಧೋಳ- ಮಧ್ಯಮ ಹಾಗೂ ಮಧ್ಯಮ ಜಲ ಸಂಪನ್ಮೂಲ

20. ಹಾಲಪ್ಪ ಆಚಾರ್- ಯಲಬುರ್ಗಿ-ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ, ಹಿರಿಯ ನಾಗರಿಕರ ಸಬಲೀಕರಣ

21. ಆನಂದ್ ಸಿಂಗ್-ಹೊಸಪೇಟೆ-ಪ್ರವಾಸೋದ್ಯಮ, ಪರಿಸರ

22 ಕೋಟಾ ಶ್ರೀನಿವಾಸ ಪೂಜಾರಿ- ಎಂಎಲ್‌ಸಿ-ಸಮಾಜ ಕಲ್ಯಾಣ, ಹಿಂದುಳಿದ ವರ್ಗ ಕಲ್ಯಾಣ

23. ಪ್ರಭು ಚೌವಾಣ್- ಔರಾದ್-ಪಶು ಸಂಗೋಪಣೆ

24 ಸುನಿಲ್ ಕುಮಾರ್- ಕಾರ್ಕಳ-ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ

25 ಬಿ. ಸಿ ನಾಗೇಶ್- ತಿಪಟೂರು- ಪ್ರಾಥಮಿಕ ಶಿಕ್ಷಣ ಹಾಗೂ ಸಕಾಲ

26. ಎಸ್ ಅಂಗಾರ- ಸುಳ್ಯ-ಬಂದರು, ಒಳನಾಡು ಸಾರಿಗೆ ಮತ್ತು ಮೀನುಗಾರಿಕೆ

27. ಬಿ ಶ್ರೀರಾಮುಲು-ಮೊಳಕಾಲ್ಮೂರು-ಸಾರಿಗೆ, ಎಸ್ ಟಿ ಅಭಿವೃದ್ಧಿ

28. ಶಿವರಾಂ ಹೆಬ್ಬಾರ್- ಯಲ್ಲಾಪುರ-ಕಾರ್ಮಿಕ

29. ಮುನಿರತ್ನ- ಆರ್ ಆರ್ ನಗರ-ತೋಟಗಾರಿಕೆ, ಯೋಜನೆ ಹಾಗೂ ಸಾಂಖ್ಯಿಕ

30. ಎಂ. ಟಿ. ಬಿ ನಾಗರಾಜ್-ಸಣ್ಣ ಕೈಗಾರಿಕೆ, ಸಾರ್ವಜನಿಕ ವಲಯ ಕೈಗಾರಿಕೆ

ಬೊಮ್ಮಾಯಿ ಸಂಪುಟಕ್ಕೆ ಆಯ್ಕೆಯಾದವರ ಪೈಕಿ 8 ಲಿಂಗಾಯತ, 7 ಒಬಿಸಿ, 7 ಒಕ್ಕಲಿಗ, 3 ದಲಿತ, 1 ಎಸ್ ಟಿ ಮತ್ತು ಒಬ್ಬ ಮಹಿಳೆಗೆ ಸ್ಥಾನ ಕಲ್ಪಿಸಲಾಗಿದೆ. ಯಡಿಯೂರಪ್ಪ ಸಂಪುಟದಲ್ಲಿದ್ದ ಜಗದೀಶ್ ಶೆಟ್ಟರ್, ಆರ್. ಶಂಕರ್, ಸಿ. ಪಿ. ಯೋಗೇಶ್ವರ್, ಅರವಿಂದ ಲಿಂಬಾವಳಿ, ಶ್ರೀಮಂತ ಪಾಟೀಲ್, ಎಸ್. ಸುರೇಶ್ ಕುಮಾರ್ ಹಾಗೂ ಲಕ್ಷ್ಮಣ ಸವದಿ ಅವರನ್ನು ಸಂಪುಟದಿಂದ ಕೈಬಿಡಲಾಗಿದೆ. ರಾಜ್ಯ ಸರ್ಕಾರದಲ್ಲಿ ಒಟ್ಟು 34 ಶಾಸಕರು ಸಚಿವರಾಗಬಹುದು. ಇಂದು 29 ಮಂದಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಈ ಬಗ್ಗೆ ರಾಜ್ಯಪಾಲರಿಗೆ ಅಧಿಕೃತವಾಗಿ ಪತ್ರ ಮೂಲಕ ತಿಳಿಸಲಾಗಿತ್ತು. ಆದರಂತೆ, 29 ಮಂದಿ ಶಾಸಕರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಉಳಿದಿರುವ 4 ಸ್ಥಾನಗಳನ್ನು ಕಾಯ್ದಿರಿಸಲು ಬಿಜೆಪಿ ಹೈಕಮಾಂಡ್ ತೀರ್ಮಾನ ಮಾಡಿದೆ.