Recent Posts

Sunday, January 19, 2025
ಪುತ್ತೂರು

ಕಣಿಯೂರಲ್ಲಿ ವಿದ್ಯುತ್ ಶಾಕ್ ಹೊಡೆದ್ದು ಒರ್ವ ವ್ಯಕ್ತಿ ಸಾವು – ಕಹಳೆ ನ್ಯೂಸ್

ಕಣಿಯೂರು : ವಿದ್ಯುತ್ ಶಾಕ್ ಹೊಡೆದ್ದು ಒರ್ವ ವ್ಯಕ್ತಿ ಸಾವನ್ನಪ್ಪಿದ ಘಟನೆ, ಕಣಿಯೂರು ಗ್ರಾಮದ ಪೋಯ್ಯ ಎಂಬಲ್ಲಿ ನಡೆದಿದೆ. ಸಾವನ್ನಪ್ಪಿದ ವ್ಯಕ್ತಿಯನ್ನು ಕಣಿಯೂರು ಗ್ರಾಮದ ಪೋಯ್ಯ ಮನೆಯ ನಾಣ್ಯಪ್ಪ ಪೂಜಾರಿ ಎಂದು ಗುರುತಿಸಿಲಾಗಿದೆ. ನಿನ್ನೆ ರಾತ್ರಿ ಜೋರಾಗಿ ಸುರಿದ ಗಾಳಿ ಮಳೆಯಿಂದಾಗಿ, ವಿದ್ಯುತ್ ತಂತಿ ತುಂಡಾಗಿ ಬಿದ್ದಿತು. ಬೆಳಿಗ್ಗೆ ತೋಟದ ಕಡೆಗೆ ಹೊರಟ್ಟಿದ ವ್ಯಕ್ತಿ, ತಂತಿಯನ್ನು ನೋಡದೆ, ತಂತಿಯನ್ನು ತುಳಿದ ಕಾರಣ, ಘಟನೆ ಸಂಭವಿಸಿದೆ. ಘಟನ ಸ್ಥಳಕ್ಕೆ ಮೆಸ್ಕಾಂ ಇಲಾಖೆಯವರು ಭೇಟಿ ನೀಡಿದ್ದು, ಉಪ್ಪಿನಂಗಡಿ ಪೊಲೀಸ್ ಠಾಣಾ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು