Sunday, January 19, 2025
ಅಂಕಣ

ಭರತನ್ಯಾಟದಲ್ಲಿ ವೈಭಕರಿಸಿದ ಡಾ.ಚೇತನಾ ರಾಧಾಕೃಷ್ಣ- ಕಹಳೆ ನ್ಯೂಸ್

ಎಲ್ಲರಲ್ಲಿಯೂ ಒಂದಲ್ಲಾ ಒಂದು ರೀತಿಯ ಕಲೆ ಇದ್ದೆ ಇರುತ್ತದೆ ತಮ್ಮಲ್ಲಿರುವ ಕಲೆಯನ್ನು ಪ್ರದರ್ಶಿಸಲು ಸರಿಯಾದ ಸಮಯ ಮತ್ತು ವೇದಿಕೆ ಎಲ್ಲರಿಗೂ ಸಿಕ್ಕಿರುವುದಿಲ್ಲ. ಅಂತಹ ಕಲೆಯನ್ನು ಒಲಿಸಿಕೊಳ್ಳಲು ಸತತ ಪರಿಶ್ರಮ, ಛಲ ನಮ್ಮಲ್ಲಿರಬೇಕು. ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವ ಜಾಣ್ಮೆ ಇರಬೇಕು ಅಂತಹ ಕಲೆಯನ್ನು ಒಲಿಸಿಕೊಂಡವರಲ್ಲಿ ಡಾ. ಚೇತನಾ ರಾಧಾಕೃಷ್ಣ ಕೂಡ ಒಬ್ಬರು.

ಇವರು ಭರತನಾಟ್ಯದ ಓರ್ವ ಪ್ರಸಿದ್ದ ಕಲಾವಿದೆ, ಭರತನ್ಯಾಟದ ಶಿಕ್ಷಕಿಯಾಗಿ, ಕಲಾವಿದೆಯಾಗಿ, ನೃತ್ಯ ಸಂಯೋಜಕಿಯಾಗಿ ನಾಟ್ಯಕ್ಷೇತ್ರದಲ್ಲಿ ತನ್ನದೇ ಆಗಿರುವ ಹೆಜ್ಜೆಗುರುತುಗಳ ಮೂಲಕ ಮಿಂಚಿದವರು. ನೃತ್ಯವನ್ನು ತನ್ನ ಜೀವನದ ಒಂದು ಭಾಗವನ್ನಾಗಿ ರೂಪಿಸಿದವರು. ಡಾ.ಚೇತನಾರಾಧಕೃಷ್ಣ ಅವರ ಭರತನಾಟ್ಯದ ಕಲೆ ದೇಶ-ವಿದೇಶಗಳಲ್ಲಿ ಕೂಡ ಪ್ರಸಿದ್ಧಿ. ಹೊಂದಿದೆ. ನಾಡಿನ ಪ್ರತಿಷ್ಠಿತ ವೇದಿಕೆಗಳಲ್ಲಿ ಬೇರೆ ಬೇರೆ ರೀತಿಯ ನೃತ್ಯ ಕಾರ್ಯಕ್ರಮವನ್ನು ನೀಡುತ್ತಲ್ಲೇ ಬಂದಿದ್ದಾರೆ. ಕರ್ನಾಟಕದಲ್ಲಿ ಮಾತ್ರವಲ್ಲದೇ ಹೊರ ರಾಜ್ಯಗಳಲ್ಲಿ ಕೂಡ ತನ್ನ ನಾಟ್ಯದ ಮೂಲಕ ಮಿಂಚಿದವರು. ಅನೇಕ ಸಂಘ ಸಂಸ್ಥೆಗಳಿಂದ ಗೌರವವನ್ನು ಸ್ವೀಕರಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಡಾ.ಚೇತನಾ ರಾಧಾಕೃಷ್ಣ ಕೇವಲ ನಾಟ್ಯಕಲಾವಿದೆ ಮಾತ್ರವಲ್ಲದೆ, ಓರ್ವ ನುರಿತ ನೃತ್ಯ ಸಂಯೋಜಕಿಯೂ ಕೂಡ ಹೌದು. ಇವರು ಅದೆಷ್ಟೋ ಮಕ್ಕಳಿಗೆ ಭರತನಾಟ್ಯವನ್ನು ಕಲಿಸಿಕೊಟ್ಟು ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ಗುರುವಾಗಿರುವುದರ ಜೊತೆಗೆ ಮಕ್ಕಳ ಮೇಲೆ ಇರುವ ಅತಿಯಾದ ಪ್ರೀತಿವಿಶ್ವಾಸ ಮಮತೆ ಇವರ ಈ ಎಲ್ಲಾ ಸಾಧನೆಗೆ ಶಕ್ತಿಯಾಗಿದೆ ಎಂದು ಹೇಳಿದರೆ ತಪ್ಪಗಲಾರದು.

ಜಾಹೀರಾತು
ಜಾಹೀರಾತು
ಜಾಹೀರಾತು

ಇವರ ವಿದ್ಯಾರ್ಥಿಗಳಲ್ಲಿ ಅನೇಕರು ರಾಷ್ಟಮಟ್ಟದ ಕಾರ್ಯಕ್ರಮದಲ್ಲಿ ಕೂಡ ಭಾಗವಹಿಸಿದ್ದಾರೆ. ಜೊತೆಗೆ ವಿದೇಶದಲ್ಲಿರುವ ಭರತನಾಟ್ಯ ಆಸಕ್ತಿಯನ್ನು ಹೊಂದಿರುವ ಮಕ್ಕಳಿಗೂ ನೃತ್ಯ ವಿದ್ಯಾಭ್ಯಾಸವನ್ನು ನೀಡಿರುವ ಗರಿಮೆ ಇವರದ್ದು. ಇವರ ಈ ಎಲ್ಲಾ ಸಾಧನೆಗೆ ಹಿಂದೆ ಬೆನ್ನೆಲುಬಾಗಿ ನಿಂತವರು ಇವರ ಪತಿ ರಾಧಾಕೃಷ್ಣ ಇವರು ಪ್ರಸುತ್ತ ಗುರು ದೇವಾ ಲಲಿತ ಕಲಾ ಅಕಾಡೆಮಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಡಾ. ಚೇತನಾ ರಾಧಾಕೃಷ್ಣರವರು ಪ್ರಸುತ್ತ ಸಂಗೀತ ವಿಶ್ವವಿದ್ಯಾಲಯದಲ್ಲಿ ಗೌರವ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

“ನೃತ್ಯ ಕೇವಲ ಮನರಂಜನೆಯ ಮಾಧ್ಯಮವಲ್ಲ, ಕಲಾವಿದರ ಜೊತೆಗೆ ಸಹೃದಯ ಪ್ರೇಕ್ಷಕರಿಗೂ ನೆಮ್ಮದಿಯ ಭಾವ ತಂದುಕೊಡುವ ಒಂದು ಮಾಧ್ಯಮ. ಈ ಒಂದು ಕಲೆಯನ್ನು ಮೈಗೊಡಿಸಬೇಕಾದರೆ ನೃತ್ಯದ ಮೇಲೆ ಅತಿಯಾದ ನಂಬಿಕೆ, ಶ್ರದ್ಧೆ, ಮುಖ್ಯವಾಗುತ್ತದೆ, ಹೀಗಿರುವಾಗ ಮಾತ್ರ ಓರ್ವ ಉತ್ತಮ ನೃತ್ಯಗಾರನಾಗಲು ಸಾಧ್ಯ” ಎಂದು ನೃತ್ಯವೇ ತನ್ನ ಆರಾದ್ಯ ದೇವರು ಎಂದುಕೊಂಡಿರುವ ಡಾ. ಚೇತನಾ ರಾಧಾಕೃಷ್ಣ ಅವರ ಮನದ ಮಾತಾಗಿದೆ.
ಭರತನ್ಯಾಟ ಎಂಬುದು ಕಲೆಯ ತೊಟ್ಟಿಲು ಈ ನಾಟ್ಯಕ್ಕೆ ಭಾವನೆ ಬಹಳ ಮುಖ್ಯ. ಅನೇಕ ಭಾವನೆಗಳನ್ನು ಈ ನೃತ್ಯದ ಮೂಲಕ ವೀಕ್ಷಕರಿಗೆ ತಲುಪಿಸಬಹುದು. ಭರತನ್ಯಾಟದ ವೈಭವವನ್ನು ವರ್ಣಿಸಲು ಅಸಾಧ್ಯ.ಇಂತಹ ಕಲೆಯು ಡಾ, ಚೇತನಾರಾಧಕೃಷ್ಣ ಅವರ ಅಭಿಮಾನಿಗಳನ್ನು ಸೆಳೆಯುವ ಮೂಲಕ ಜನರ ಮನದಲ್ಲಿ ಅಚ್ಚಲಿಯಾಗಿದ್ದಾರೆ.


ಕವಿತಾ
ತೃತೀಯ ಪತ್ರಿಕೋದ್ಯಮ
ವಿವೇಕಾನಂದ ಕಾಲೇಜು ಪುತ್ತೂರು.