Saturday, November 16, 2024
ಅಂಕಣ

ಕೃತಿಕಾ ಗಣೇಶ್‍ರವರ ಸಾಧನೆಯ ಪಯಣ-ಕಹಳೆ ನ್ಯೂಸ್

ಸಾಧಿಸಲು ಮೆಟ್ಟಿಲು ಸಾವಿರಾರಿದ್ದರು ಸಾಧಿಸುವ ಛಲ ಪರಿಶ್ರಮ ಗುರಿ ನಮ್ಮಲ್ಲಿರಬೇಕು, ಕೇವಲ ಒಂದು ಕ್ಷೇತ್ರದಲ್ಲಿ ಇದ್ದುಕೊಂಡು ಸಾಧಿಸುವವರು ಹಲವು ಮಂದಿ ಹೌದು ಸ್ನೇಹಿತರೇ ಒಂದು ಕ್ಷೇತ್ರದಲ್ಲಿ ಸಾಧಿಸುವುದಕ್ಕಿಂತ ಹಲವಾರು ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಸಾಧಿಸುವುದು ಒಂದು ಕಲೆ. ಅಂತಹ ಸಾಧನೆಯನ್ನು ಮಾಡಿದವರು ಕೃತಿಕಾ ಗಣೇಶ್.

ಇವರು ಮೂಲತಃ ಪುತ್ತೂರಿನವರು. ತನ್ನ ಚಿಕ್ಕ ವಯಸ್ಸಿನಲ್ಲಿಯೇ ಕಲೆ ಮತ್ತು ಸಾಂಸ್ಕ್ರತಿಕ ಕ್ಷೇತ್ರದಲ್ಲಿ ಅಪಾರ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು. ಇವರಿಗೆ ಕಲೆ ಎಂಬುದು ಮೂಲದಿಂದಲೇ ಬೆಳೆದು ಬಂದದ್ದು ಕಾರಣ ಅವರ ತಂದೆ ಯಕ್ಷಗಾನ ಹೆಜ್ಜೆಯನ್ನು ಅನುಸರಿಸುತ್ತಾ ಮತ್ತು ಅವರಿಂದಲೇ ಸಂಪೂರ್ಣ ಯಕ್ಷಗಾನ ತರಬೇತಿಯನ್ನು ಪಡೆಯುವ ಮೂಲಕ ನೃತ್ಯ ಲೋಕಕ್ಕೆ ಹೆಜ್ಜೆ ಇಟ್ಟರು. 5ನೇ ವಯಸ್ಸಿನಿಂದಲೇ ಇವರ ಪುಟ್ಟ ಹೆಜ್ಜೆಯನ್ನು ಪ್ರದರ್ಶಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕೃತಿಕಾ ಗಣೇಶ್‍ರವರಲ್ಲಿ ಅಡಗಿರುವ ನೃತ್ಯದ ಈ ಮಹಾನ್ ಪ್ರತಿಭೆಯನ್ನು ಗುರುತಿಸಿದ ಅವರ ಪೋಷಕರು ಶಾಸ್ತ್ರೀಯ ಸಂಗೀತ ಕಲಿಕೆಗಾಗಿ ಹಿರಿಯ ನೃತ್ಯ ಗುರು ಕರ್ನಾಟಕ ಕಲಾತಿಲಕ ವಿದ್ವಾನ್ ಶ್ರೀ ಉಲ್ಲಾಲ್ ಮೋಹನ್ ಕುಮಾರ್ ಅವರ ಬಳಿ ಸಂಗೀತ ಕಲಿಯಲು ತೊಡಗಿದರು ಹಾಗೆಯೇ ತನ್ನ 13ನೇ ವಯಸ್ಸಿನಲ್ಲಿಯೇ ನಾಟಕ ಕ್ಷೇತ್ರಕ್ಕೂ ಸೇರಿಕೊಂಡರು. ತನ್ನ ಚಿಕ್ಕ ವಯಸ್ಸಿನಲ್ಲಿಯೇ ಅನೇಕ ಪ್ರಸಿದ್ದ ಸ್ಥಳಗಳಲ್ಲಿ ತನ್ನ ಪ್ರದರ್ಶನಗಳನ್ನು ನೀಡಲು ಪ್ರಾರಂಭಿಸಿದರು ಕೇರಳ ಸರಕಾರ ಆಯೋಜಿಸಿದ ಬಾಲಾಕೋತ್ಸವದಲ್ಲಿ ಕಲಾತಿಲಕ ಎಂಬ ಪ್ರಶಸ್ತಿಗೆ ಭಾಜನರಾದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇವರು ಜೀ ಕನ್ನಡದಲ್ಲಿ ಪ್ರಾಸರವಾಗುತ್ತಿದ್ದ ಪ್ರಸಿದ್ದ ರಿಯಾಲಿಟಿ ಶೋ “ಸರಿಗಮಪ” ದಲ್ಲಿ ಅತ್ಯುತ್ತಮ ಸ್ಫರ್ಧಿಗಳಲ್ಲಿ ಒಬ್ಬರು. ಹಾಗೆಯೇ 150 ಕ್ಕೂ ಹೆಚ್ಚು ನೃತ್ಯ ನಾಟಕದಲ್ಲಿ ಅಭಿನಯಸಿದ್ದಾರೆ. ಭಾರತದ ಪ್ರಸಿದ್ದ ಗಾಯಕಿ ಯಸ್. ಜಾನಕಿಯೊಂದಿಗೆ ವಸಂತೋತ್ಸವ, ಸುವರ್ಣ ವಾಹಿನಿ ನಡೆಸಿಕೊಟ್ಟ ಡಾ. ಎಸುದಾಸ್ ರವರ “ಹೃದಯರಾಗ”, “ಶಿವಚರಿತಾಮೃತಂ” ಮೊದಲಾದ ಅತ್ಯುತ್ತಮ ಧಾರಾವಾಹಿಗಳ ಶೀರ್ಷಿಕೆ ಗೀತೆಗೆ ನೃತ್ಯ ಮಾಡಿದರು.
ಮುಂಬೈ, ಚೆನೈ ಹೀಗೆ ಹಲವಾರು ಕಡೆಗಳಲ್ಲಿ ನೃತ್ಯ ಪ್ರದರ್ಶಿಸಿದ್ದ ಹಿರಿಮೆ ಇವರದ್ದು. 2010ರಲ್ಲಿ ಸಿಂಗಾಪುರದಲ್ಲಿ ನಡೆದ ಡಾ. ಸಂಜಯ್ ಶಾಂತರಾಮ್ ಅವರರೊಂದಿಗೆ ಒಂದು ಕಾರ್ಯಗಾರವನ್ನು ನಿರ್ವಹಿಸಿದರು. ರಾಷ್ಟೀಯ ವಾಹಿನಿಯಾದ ಚಂದನದಲ್ಲಿ ಹಲವಾರು ಬಾರಿ ತನ್ನ ನೃತ್ಯ ಪ್ರದರ್ಶನವನ್ನು ನೀಡಿದ್ದಾರೆ.ನೃತ್ಯ ನೃತ್ಯಾತಿ ಡ್ಯಾನ್ಸ್ ಫ್ಯಸಿಟ್ವಿಲ್ 2015 ಎಂಬ ಕಾರ್ಯಕ್ರಮದಲ್ಲಿ ನೃತ್ಯವಿಲಾಸಿನ್ ಎಂಬ ಪದಕ ಪ್ರದಾನ ಮಾಡಲಾಯಿತು. ಕಾಲಾಪರ್ವ ಡ್ಯಾನ್ಸ್ ಫ್ಯಸಿಟ್ವಿಲ್ 2019 ಕಾಲಾಯನ ಟ್ರಸ್ಟ್‍ನಿಂದ “ನಾಟ್ಯಕಲಾಪ್ರವೀಣೆ” ಎಂಬ ಪ್ರಶಸ್ತಿ, ಹೀಗೆ ಹಲವಾರು ಪ್ರಶಸ್ತಿಗಳನ್ನು ತಮ್ಮ ಮಡಿಲಿಗೇರಿಸಿಕೊಂಡ ಕೃತಿತಾ ಗಣೇಶ್,ಕೇವಲ ನೃತ್ಯಗಾರ್ತಿ ಮಾತ್ರವಲ್ಲ ಇವರು ತನ್ನ ನೃತ್ಯದ ಮೂಲಕ ಜನರ ಮನವನ್ನು ಗೆದ್ದದ್ದು ಮಾತ್ರವಲ್ಲದೆ ಇವರು ಕಂಠದ ಮೂಲಕವು ಜನರ ಮನಗೆದ್ದರು ಎಂದರೆ ತಪ್ಪಾಗಲಾರದು.

ಡಬಿಂಗ್ ಕ್ಷೇತ್ರದಲ್ಲೂ ಸೈ ಎನಿಸಿಕೊಂಡ ಕೃತಿಕಾ ಗಣೇಶ್ ಕೆಲವು ವಾಣಿಜ್ಯತ್ಮಾಕ ಜಾಹೀರಾತುಗೆ, ವಾಯ್ಸ್ ಓವರ ನೀಡಿದ್ದಾರೆ. ಅದು ಮಾತ್ರವಲ್ಲದೇ ಆಕಾಶವಾಣಿ, ಕಲರ್ಸ್ ಸೂಪರ್‍ನಲ್ಲಿ “ಡ್ಯಾಸಿಂಗ್ ಸ್ಟಾರ್” ಹಾಗೆಯೇ ಜೀ ಕನ್ನಡದಲ್ಲಿ ಪ್ರಸಾರವಾಗುವ “ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್”ಗೆ ತನ್ನ ವಾಯ್ಸ್ ಓವರ ನೀಡಿದ್ದ ಹಿರಿಮೆ ಇವರದ್ದು. ಪ್ರಸುತ್ತ ದಿನಗಳಲ್ಲಿ “ನೇತಾಜಿ ಸುಭಾಷ್ ಚಂದ್ರ ಬೋಸ್” ಧಾರಾವಾಹಿಗೆ ವಾಯ್ಸ್ ಓವರ ನೀಡುತ್ತಿದ್ದಾರೆ.

ಇವರು ಡಬಿಂಗ್ ಕ್ಷೇತ್ರದಲ್ಲೂ ಮಾತ್ರವಲ್ಲದೇ ನಟನೆಯ ವಿಚಾರದಲ್ಲಿಯೂ ಸೈ ಎನಿಸಿಕೊಂಡಿದ್ದಾರೆ. ಕನಕದಾಸ, ಬದುಕು, ರಂಗೇಗೌಡ , ಒಂದೂರಲ್ಲಿ ರಾಜ ರಾಣಿ, ಜಸ್ಟ್ ಮಾತ್ ಮಾತಲ್ಲಿ, ಲಕ್ಮೀಬಾರಮ್ಮ, ಪತ್ತೆದಾರಿ ಪ್ರತಿಭಾ, ಶಾ0ತಂ ಪಾಪಂ, ಇವಳೇ ವೀನಾಪಾಣೀ ಹಾಗೆಯೇ ಮರಳಿ ಬಂದಳು ಸೀತೆ, ಹಾಗೂ ಕಸ್ತೂರಿ ವಾಹಿನಿಯಲ್ಲಿ ಏಟು ಎದುರೇಟು ಎಂಬ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಬಹುಮುಖ ಪ್ರತಿಭೆ ಕೃತಿಕಾ ಗಣೇಶ್‍ರವರ ಈ ಸಾಧನೆ ನಮ್ಮರಿಗೂ ಸ್ವೂರ್ತಿ ಯಾಗಲಿ ಎಂಬುದೇ ನಮ್ಮ ಆಸೆ.

ಕವಿತಾ
ತೃತೀಯ ಪತ್ರಿಕೋದ್ಯಮ
ವಿವೇಕಾನಂದ ಕಾಲೇಜು ಪುತ್ತೂರು