Saturday, November 16, 2024
ಬೆಳ್ತಂಗಡಿ

ವಿದ್ಯುತ್ ವಿತರಣಾ ಕಂಪನಿ ಖಾಸಗೀಕರಣವನ್ನು ವಿರೋಧಿಸಿ ನಾಳೆ ಬೆಳ್ತಂಗಡಿ ಮೆಸ್ಕಾಂ ಕಚೇರಿಯಲ್ಲಿ ರಾಷ್ಟ್ರ ವ್ಯಾಪ್ತಿ ಮುಷ್ಕರ-ಕಹಳೆ ನ್ಯೂಸ್

ಮೆಸ್ಕಾಂ ಮತ್ತು ಇತರ ಎಸ್ಕಾಂಗಳನ್ನು ಖಾಸಗೀಕರಣ ಮಾಡಲು ಕೇಂದ್ರ ಸರಕಾರ ಪುಯತ್ನ ಪಡುತ್ತಿದ್ದು ಇದರ ವಿರುದ್ಧ ಮತ್ತು 2003 ನೇ ಇಸವಿಯ ಕಾಯಿದೆಗೆ ತಿದ್ದುಪಡಿ ತರುವುದರ ವಿರುದ್ಧ ದೇಶಾದ್ಯಂತ ವಿದ್ಯುತ್ ನೌಕರರ ಮುಷ್ಕರ ನಾಳೆ ನಡೆಯಲಿದೆ. ಈ ಹಿನ್ನಲೆಯಲ್ಲಿ ನಾಳೆ ಬೆಳ್ತಂಗಡಿ ಮತ್ತು ಉಜಿರೆ ಮೆಸ್ಕಾಂ ಕಚೇರಿಯಲ್ಲಿ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದ್ದು, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಹಾಗೂ ಅಧಿಕಾರಿಗಳ ಒಕ್ಕೂಟ ಮಂಗಳೂರು ವತಿಯಿಂದ ನಾಳೆ ಬೆಳಿಗ್ಗೆ 8.30 ರಿಂದ ಸಂಜೆ 5.30 ರವರೆಗೆ ಮೆಸ್ಕಾಂ ಮತ್ತು ಕೆಪಿಟಿಸಿಎಲ್ ನ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು, ಲೈನ್ ಮೇನ್‍ಗಳು ಕೆಲಸ ನಿರ್ವಹಿಸದೆ ಕಚೇರಿಯ ಮುಂಭಾಗದಲ್ಲಿ ಧರಣಿ ನಡೆಸಲಿದ್ದಾರೆ. ಇನ್ನು ತಂತಿ ತುಂಡಾಗಿ ಸಾರ್ವಜನಿಕರಿಗೆ ಅಪಾಯವಾಗುವಂತಹ ಅತ್ಯಂತ ತುರ್ತು ಸಂದರ್ಭದಲ್ಲಿ ಮಾತ್ರ ಅದರ ದುರಸ್ತಿ ಮಾಡುತ್ತಾರೆ ಹೊರತು ಇತರ ನಿರ್ವಹಣಾ ಕಾರ್ಯದಲ್ಲಿ ಭಾಗಿಯಾಗುವುದಿಲ್ಲ. ಆದರೆ ವಿದ್ಯುತ್ ಸರಬರಾಜಿಗೆ ಯಾವುದೇ ಅಡೆತಡೆ ಇರುವುದಿಲ್ಲ. ಏನಾದರೂ ದುರಸ್ತಿ ಕಾರ್ಯ ಇದ್ದರೆ ಸಂಜೆಯವರೆಗೆ ಸ್ಪಂದಿಸದೇ ಇರಲು ಸಿಬ್ಬಂದಿಗಳು ನಿರ್ಧಾರಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು