Recent Posts

Monday, January 20, 2025
ಸುದ್ದಿ

ಸಭೆಗೆ ತಡವಾಗಿ ಬಂದ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಸಚಿವ ಸುನಿಲ್ ಕುಮಾರ್-ಕಹಳೆ ನ್ಯೂಸ್

ಉಡುಪಿ: ಸಭೆಗೆ ಲೇಟಾಗಿ ಬಂದ ಅಧಿಕಾರಿಯನ್ನು ಇಂಧನ ಇಲಾಖೆ ಸಚಿವರು ಸಭೆಯ ಮಧ್ಯದಲ್ಲಿ ಹೊರಕ್ಕೆ ಕಳುಹಿಸಿದ ಘಟನೆ ಕಾರ್ಕಳದಲ್ಲಿ ನಡೆದಿದೆ.  ಕಾರ್ಕಳ ಮತ್ತು ಹೆಬ್ರಿ ತಾಲೂಕು ಪಂಚಾಯತ್ ಸಭೆ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ಅಧ್ಯಕ್ಷತೆಯಲ್ಲಿ ಕಾರ್ಕಳ ತಾ.ಪಂ ಸಾಮಥ್ರ್ಯ ಸೌಧದಲ್ಲಿ ನಡೆಯಿತು. ಸಭೆಯ ಆರಂಭದ ವೇಳೆ ಜಲಜೀವನ್ ಮಿಷನ್ ಯೋಜನೆಗೆ ಸಂಬಂಧಿಸಿದ ಮಾಹಿತಿಯನ್ನು ಸಚಿವರು ಇಲಾಖೆಗೆ ಕೇಳಿದರು. ಈ ವೇಳೆ ಇಲಾಖೆಗೆ ಸಂಬಂಧಿಸಿದ ಅಧಿಕಾರಿಯು ಸಭೆಯಲ್ಲಿ ಹಾಜರಿರಲಿಲ್ಲ. ಇದರಿಂದ ಗರಂ ಆದ ಸಚಿವರು ಸಭೆಯನ್ನು ಮುಂದುವರೆಸಿದರು. ಸಭೆ ನಡೆದು ತುಂಬಾ ಹೊತ್ತಾದ ಬಳಿಕ ಆಗಮಿಸಿದ ಜಲಜೀವನ್ ಇಲಾಖೆಗೆ ಸಂಬಂಧಿಸಿದ ಅಧಿಕಾರಿ ಸಭಾಂಗಣ ಒಳಗೆ ಬರುವುದನ್ನು ಕಂಡ ಸಚಿವರು ಅಲ್ಲಿಂದಲೇ ಹೊರಗೆ ಹೋಗುವಂತೆ ಸೂಚಿಸಿದರು. ಸಭೆ ಮುಗಿದ ಬಳಿಕ ಸಭಾಂಗಣದಿಂದ ಹೊರಬರುವ ವೇಳೆಗೆ ಹೊರಗೆ ನಿಂತಿದ್ದ ಅಧಿಕಾರಿಯನ್ನು ಸಚಿವರು ತರಾಟೆಗೆ ತೆಗೆದುಕೊಂಡಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು