ಶ್ರೀರಾಮಸೇನೆ ನೀರುಮಾರ್ಗ ಪ್ರಖಂಡ ವ್ಯಾಪ್ತಿಯಲ್ಲಿ ಸರಣಿ ಕಳ್ಳತನ ಹಿನ್ನಲೆ, ಶ್ರೀರಾಮಸೇನೆ ಮಂಗಳೂರು ಜಿಲ್ಲಾ ವತಿಯಿಂದ ಮಂಗಳೂರು ಜಿಲ್ಲಾಧಿಕಾರಿಗೆ ಮನವಿ – ಕಹಳೆ ನ್ಯೂಸ್
ಮಂಗಳೂರು: ಶ್ರೀರಾಮಸೇನೆ ನೀರುಮಾರ್ಗ ಪ್ರಖಂಡ ವ್ಯಾಪ್ತಿಯಲ್ಲಿ ಸುಮಾರು ಹತ್ತು ವರ್ಷದಿಂದ ಸರಣಿ ಕಳ್ಳತನ ಆಗುತ್ತಲೇ ಇರುವ ಹಿನ್ನಲೆಯಲ್ಲಿ, ಜೈ ಶ್ರೀರಾಮ್ ಶ್ರೀರಾಮಸೇನೆ ಮಂಗಳೂರು ಜಿಲ್ಲಾ ವತಿಯಿಂದ ಮಂಗಳೂರು ಜಿಲ್ಲಾಧಿಕಾರಿಗೆ ಮನವಿ ನೀಡಲಾಯಿತು. ಜುಲೈ.20 ರ ನಡುರಾತ್ರಿ ಸ್ಥಳೀಯ ಆರಾಧ್ಯ ಕೇಂದ್ರವಾದ ಶ್ರೀ ಸುಬ್ರಹ್ಮಣ್ಯ ಭಜನಾ ಮಂಡಳಿಯಲ್ಲಿ ಕಳ್ಳತನ ನಡೆದಿದ್ದು, ದೇವಾಲಯವನ್ನು ಅಪವಿತ್ರಗೊಳಿಸಲಾಗಿದೆ. ಇದು ಊರ ಶ್ರದ್ಧಾಭಕ್ತಿಯ ಬಂಧುಗಳಿಗೆ ಬಹಳ ನೋವನ್ನುಂಟು ಮಾಡಿದ್ದು, ಹಿಂದುಗಳ ಭಾವನೆಗೆ ಧಕ್ಕೆಯಾಗಿದೆ. ಆದ್ದರಿಂದ ಈ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ತಕ್ಷಣ ಬಂಧಿಸಬೇಕೆಂದು, ಜಿಲ್ಲಾಧಿಕಾರಿಯವರಿಗೆ ಜೈ ಶ್ರೀರಾಮ್ ಶ್ರೀರಾಮಸೇನೆ ಮಂಗಳೂರು ಜಿಲ್ಲಾ ವತಿಯಿಂದ ಮನವಿಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ಪ್ರದೀಪ್ ಮೂಡುಶೆಡ್ಡೆ, ಜಿಲ್ಲಾ ಕಾರ್ಯದರ್ಶಿ ಕಿಶೋರ್ ಸನಿಲ್, ಶ್ರೀರಾಮಸೇನೆ ನೀರುಮಾರ್ಗ ಪ್ರಖಂಡದ ಅಧ್ಯಕ್ಷ ರಾಘವೇಂದ್ರ ಪೂಜಾರಿ ನೀರುಮಾರ್ಗ, ಪ್ರಕಾಶ್ ಸನಿಲ್ ನೀರುಮಾರ್ಗ, ಮೋಹನ್ ಕೋಟ್ಯಾನ್ ನೀರುಮಾರ್ಗ, ಕೀರ್ತಿರಾಜ್ ನೀರುಮಾರ್ಗ, ಉಪಸ್ಥಿತರಿದ್ದರು.