ವೇಣೂರು: ಸುಲ್ಕೇರಿ ಗ್ರಾಮದಲ್ಲಿ ನಿನ್ನೆ ಮಧ್ಯಾಹ್ನ ನಾಪತ್ತೆಯಾಗಿದ್ದ ಎರಡು ವರ್ಷದ ಹೆಣ್ಣು ಮಗು ಇಂದು ಶವವಾಗಿ ಪತ್ತೆಯಾಗಿದೆ. ಬೆಳ್ತಂಗಡಿ ತಾಲೂಕಿನ ಅಳದಂಗಡಿ ಗ್ರಾಮದ ಸುಲ್ಕೇರಿಯ ಜಂತೀಗೋಳಿಯ ಪರಾರಿ ನಿವಾಸಿ ಸುಚಿತ್ರ ಮತ್ತು ಸುಭಾಷ್ ದಂಪತಿಯು ತಮ್ಮ ಎರಡು ವರ್ಷದ ಹೆಣ್ಣು ಮಗು ಧೃತ್ವಿಯೊಂದಿಗೆ ಸುಲ್ಕೇರಿಯ ತವರು ಮನೆಯಲ್ಲಿ ವಾಸವಿದ್ದರು. ನಿನ್ನೆ ಮಧ್ಯಾಹ್ನ ಸುಚಿತ್ರಾ ಅವರು ಮಗುವನ್ನು ಅಜ್ಜನೊಂದಿಗೆ ಮನೆಯಲ್ಲಿ ಬಿಟ್ಟು ತಾಯಿಯೊಂದಿಗೆ ಹುಲ್ಲು ತರಲು ಸನಿಹದ ತೋಟಕ್ಕೆ ಹೋಗಿದ್ದರು. ಹಿಂತಿರುಗಿ ಬರುವಷ್ಟರಲ್ಲಿ ಮಗು ಕಾಣಿಸದೆ ಇರುವುದನ್ನು ಕಂಡು ಹುಡುಕಾಟ ನಡೆಸಿದ್ದರೂ ಮಗುವಿನ ಸುಳಿವು ಪತ್ತೆಯಾಗಿಲ್ಲ. ಆದ್ರೆ ಮನೆಯಿಂದ 100 ಮೀಟರ್ ಅಂತರದಲ್ಲಿ ಹೊಳೆಯೊಂದು ಹರಿಯುತ್ತಿದ್ದು, ಮಗು ಆ ಕಡೆಗೆ ಏನಾದರೂ ಹೋಗಿರಬಹುದೇ ಎನ್ನುವ ಶಂಕೆ ಮೂಡಿತ್ತು. ಈ ಹಿನ್ನಲೆಯಲ್ಲಿ ತಡರಾತ್ರಿವರೆಗೂ ಸ್ಥಳೀಯರು, ಆಗ್ನಿಶಾಮಕ ದಳ ಸಿಬ್ಬಂದಿ, ಪೊಲೀಸರು ಸ್ಥಳೀಯ ಪ್ರದೇಶ ಹಾಗೂ ಹೊಳೆಯಲ್ಲಿ ಶೋಧಿಸಿದರೂ ಮಗು ಪತ್ತೆಯಾಗಿಲ್ಲ. ರಾತ್ರಿಯಾದ ಕಾರಣ ಶೋಧ ಕಾರ್ಯಚರಣೆ ಸ್ಥಗಿತಗೊಳಿಸಿದ ಅಗ್ನಿಶಾಮಕ ಸಿಬ್ಬಂದಿಗಳು, ಇಂದು ಮುಂಜಾನೆ ಹುಡುಕಾಟ ಮುಂದುವರೆಸಿದ್ದು, ಮನೆಯಿಂದ ಸ್ವಲ್ಪ ದೂರದಲ್ಲಿರುವ ಹೊಳೆಯಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ.
You Might Also Like
ನ.14ರಂದು ಧರ್ಮಸ್ಥಳದಲ್ಲಿ ಶ್ರೀ ಕ್ಷೇ.ಧ.ಗ್ರಾ.ಯೋ. ಸ್ವ- ಸಹಾಯ ಸಂಘಗಳ ಸದಸ್ಯರಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರವರಿಂದ ಲಾಭಾಂಶ ವಿತರಣಾ ಕಾರ್ಯಕ್ರಮ – ಕಹಳೆ ನ್ಯೂಸ್
ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ರಿ.) ನ ಸ್ವ- ಸಹಾಯ ಸಂಘಗಳ ಸದಸ್ಯರಿಗೆ ಲಾಭಾಂಶ ವಿತರಣಾ ಕಾರ್ಯಕ್ರಮವು ನ.14ರಂದು ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದಲ್ಲಿ...
ಬಂದಾರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ (ನಿ.) ಇದರ ರಜತ ಮಹೋತ್ಸವ ಪ್ರಯುಕ್ತ ನ.14ರಂದು ಬಂದಾರಿನಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರ ಮತ್ತು ಸಾಮಾನ್ಯ ಪರೀಕ್ಷೆ – ಕಹಳೆ ನ್ಯೂಸ್
ಬೆಳ್ತಂಗಡಿ : ಅಮೃತವಾಹಿನಿ ಬಂದಾರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ (ನಿ.) ಇದರ ರಜತ ಮಹೋತ್ಸವ ಪ್ರಯುಕ್ತ ನ.14ರಂದು ಬಂದಾರಿನ ಸಂಘದ ವಠಾರದಲ್ಲಿ ಕೆ ವಿ...
ರೆಖ್ಯ: ಹಿಂದೂ ರಾಷ್ಟ್ರದ ಘೋಷಣೆಯೊಂದಿಗೆ ಹಿಂದೂ ರಾಷ್ಟ್ರ ಜಾಗೃತಿ ಸಭೆ ಸಂಪನ್ನ ; ಹಿಂದೂಗಳ ಸಂಘರ್ಷದಿAದ ಹಿಂದೂ ರಾಷ್ಟ್ರದ ಸ್ಥಾಪನೆಯು ಸಾಧ್ಯ – ಶ್ರೀ. ಚಂದ್ರ ಮೊಗೇರ-ಕಹಳೆ ನ್ಯೂಸ್
ರೆಖ್ಯ:ಹಿಂದೂ ರಾಷ್ಟ್ರದ ವಿಚಾರ, ಹಿಂದೂ ರಾಷ್ಟ್ರದ ಬೇಡಿಕೆಯನ್ನು ಇಡುವುದು ಪ್ರತಿಯೊಂದು ಹಿಂದೂವಿನ ಅನಿವಾರ್ಯತೆ ಆಗಿದೆ . ಹಿಂದುಗಳಿಗೆ ತಮ್ಮ ಹಬ್ಬವನ್ನು ಆಚರಿಸಲು ಕೂಡ ಅಡಚಣೆ ಬರುತ್ತಿದ್ದು -...
ಧರ್ಮಸ್ಥಳಕ್ಕೆ ನ.9ರಂದು (ನಾಳೆ) ಕಂಚಿ ಕಾಮಕೋಟಿ ಪೀಠಾಧಿಪತಿ ಪುರಪ್ರವೇಶ – ಕಹಳೆ ನ್ಯೂಸ್
ಧರ್ಮಸ್ಥಳ: ಕಂಚಿ ಕಾಮಕೋಟಿ ಪೀಠಾಧಿಪತಿ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಶಂಕರಾಚಾರ್ಯ ಸ್ವಾಮೀಜಿಯವರು ನ.9ರಂದು ಸಂಜೆ 6 ಗಂಟೆಗೆ ಶ್ರೀಕ್ಷೇತ್ರ ಧರ್ಮಸ್ಥಳ ಪುರಪ್ರವೇಶ ಮಾಡಲಿದ್ದಾರೆ. ಮಹಾದ್ವಾರದಿಂದ ಭವ್ಯ...