Recent Posts

Monday, January 20, 2025
ಬಂಟ್ವಾಳ

ಬಂಟ್ವಾಳ ಸೋರ್ಣಾಡು ಡೀಸೆಲ್ ಕಳವು: ಆರು ಆರೋಪಿಗಳ ಬಂಧನ- ಕಹಳೆ ನ್ಯೂಸ್

ಬಂಟ್ವಾಳ: ಸೋರ್ಣಾಡು ಸಮೀಪ ಅರಳ ಗ್ರಾಮದ ಅರ್ಬ ನಿವಾಸಿ ಐವನ್ ಪಿಂಟೊ ಎಂಬುವರ ಜಮೀನಿನಲ್ಲಿ ಹಾದು ಹೋಗಿರುವ ಮಂಗಳೂರು-ಬೆಂಗಳೂರು ನಡುವಿನ ತೈಲ ಸರಬರಾಜು ಸಂಸ್ಥೆಗೆ ಸೇರಿದ ಡೀಸೆಲ್ ಪೂರೈಸುವ ಪೈಪ್ ಲೈನ್ ಗೆ ಕನ್ನ ಕೊರೆದು ಡೀಸೆಲ್ ಕಳವು ಮಾಡುವ ದಂಧೆಗೆ ಸಂಬಂಧಿಸಿದಂತೆ ಗ್ರಾಮಾಂತರ ಠಾಣೆ ಪೊಲೀಸರು ಆರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಇವರಿಂದ ಲಕ್ಷಾಂತರ ಮೌಲ್ಯದ ಡೀಸೆಲ್ ಕ್ಯಾನ್ ವಶಪಡಿಸಿಕೊಂಡಿದ್ದಾರೆ. ಇನ್‍ಸ್ಪೆಕ್ಟರ್ ಟಿ.ಡಿ.ನಾಗರಾಜ್ ಮತ್ತು ಎಸ್‍ಐ ಪ್ರಸನ್ನ ಎಂ. ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಪ್ರಮುಖ ಆರೋಪಿಯಾದ ಐವನ್ ಪಿಂಟೊ ಸಹಿತ ಹಲವರನ್ನು ವಶಕ್ಕೆ ಪಡೆದಿದ್ದಾರೆ. ದಂಧೆಯಲ್ಲಿ ಪಾಲ್ಗೊಂಡ ಹಲವಾರು ಮಂದಿ ತಲೆಮರೆಸಿ ಕೊಂಡಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು