Recent Posts

Monday, January 20, 2025
ಸುದ್ದಿ

ನಾಳೆ ಸಿಎಂ ಬೊಮ್ಮಾಯಿ ಕರಾವಳಿ ಜಿಲ್ಲೆಗಳಿಗೆ ಪ್ರವಾಸ-ಕಹಳೆ ನ್ಯೂಸ್

ಮಂಗಳೂರು: ಬಸವರಾಜ ಬೊಮ್ಮಾಯಿ ಸಿಎಂ ಆದ ಬಳಿಕ ನಾಳೆ ಮೊದಲ ಬಾರಿಗೆ ಕರಾವಳಿ ಪ್ರವಾಸ ಕೈಗೊಂಡಿದ್ದಾರೆ. ಕೊರೊನಾ ಭೀತಿ ಹಿನ್ನೆಲೆಯಲ್ಲಿ ಕೇರಳ ರಾಜ್ಯದ ಗಡಿ ಪ್ರದೇಶದಲ್ಲೂ ಪರಿಶೀಲನೆ ನಡೆಸಲಿದ್ದಾರೆ. ನಾಳೆ ಬೆಳಗ್ಗೆ 9.50ಕ್ಕೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನದ ಮೂಲಕ ಆಗಮಿಸಲಿದ್ದು, 10.50ಕ್ಕೆ ಬಜ್ಪೆಯಲ್ಲಿನ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯಲಿದ್ದಾರೆ. 11.30ಕ್ಕೆ ದ.ಕ. ಜಿಲ್ಲಾ ಕೋವಿಡ್-19 ನಿಯಂತ್ರಣ ಕುರಿತಂತೆ ಜಿಲ್ಲಾಡಳಿತದೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ 2.30 ಕ್ಕೆ ಸಭೆ ಮುಗಿಸಿ ಉಡುಪಿಗೆ ತೆರಳಲಿರುವ ಬೊಮ್ಮಾಯಿಯವರು, ಸಂಜೆ 4ಗಂಟೆಗೆ ಉಡುಪಿ ಜಿಲ್ಲಾ ಕೋವಿಡ್-19 ನಿಯಂತ್ರಣ ಕುರಿತಂತೆ ಜಿಲ್ಲಾಡಳಿತದೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ. ಸಂಜೆ 7ಕ್ಕೆ ಅಲ್ಲಿಂದ ಹೊರಟು ರಾತ್ರಿ 8ಕ್ಕೆ ಮಂಗಳೂರು ತಲುಪಲಿದ್ದಾರೆ. ರಾತ್ರಿ ಮಂಗಳೂರಿನಲ್ಲಿಯೇ ವಾಸ್ತವ್ಯವಿರಲಿರುವ ಸಿಎಂ ಆ.13ರಂದು ಬೆಳಗ್ಗೆ 8ಗಂಟೆಗೆ ಕೇರಳ ರಾಜ್ಯದ ತಲಪಾಡಿ ಗಡಿಭಾಗದ ಚೆಕ್ ಪೋಸ್ಟ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಅಲ್ಲಿಂದ ಮಂಗಳೂರು ಮಾರ್ಗವಾಗಿ ಆಗಮಿಸಿ ಬೆಳಗ್ಗೆ 11.30ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನದ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು