Monday, January 20, 2025
ಸುದ್ದಿ

ತೊಡಿಕಾನದಲ್ಲಿ ತಿಂಗಳಿನಿಂದ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡು: ಆನೆ ಹಾವಳಿಗೆ ಶಾಶ್ವತ ಪರಿಹಾರ ನೀಡುವಂತೆ ಸ್ಥಳೀಯರಿಂದ ಮನವಿ-ಕಹಳೆ ನ್ಯೂಸ್

ಸುಳ್ಯ: ತೊಡಿಕಾನ ಗ್ರಾಮದ ಹಲವು ಪ್ರದೇಶಗಳಲ್ಲಿ ಆನೆಗಳ ಹಿಂಡೊಂದು ಕಳೆದ ಒಂದು ತಿಂಗಳಿನಿಂದ ಬೀಡು ಬಿಟ್ಟಿದ್ದು ನೂರಾರು ಎಕರೆ ಕೃಷಿ ತೋಟವನ್ನು ನಾಶ ಮಾಡಿದೆ. ರಾತ್ರಿಯಿಡೀ ರೈತರ ತೋಟದಲ್ಲಿ ದಾಂಧಲೆ ನಡೆಸುವ ಆನೆಯ ಹಿಂಡು ಬೆಳಗಾಗುತ್ತಿದ್ದಂತೆ ಕಾಡಿನತ್ತ ತೆರಳಿ ಕಣ್ಮರೆಯಾಗುತ್ತಿದೆ. ತಿಂಗಳ ಹಿಂದೆಯೇ ತೊಡಿಕಾನದ ಕಾಡೊಳಗೆ ಪ್ರವೇಶ ಮಾಡಿರುವ ಬರೋಬ್ಬರಿ ಹತ್ತು ಆನೆಗಳಿರುವ ಹಿಂಡು ಈಗಾಗಲೇ ಸಾಕಷ್ಟು ಕೃಷಿ ನಾಶ ಮಾಡಿದೆ. ದೇವರಗುಂಡಿ, ಗುಂಡಿಗದೆ ಕಲ್ಲಂಬಳ, ದೊಡ್ಡಡ್ಕ, ಅಡ್ವಡ, ಪತ್ತಾಜೆ ಭಾಗದ ಬಹುತೇಕ ರೈತರ ತೋಟಗಳು ಆನೆ ಧಾಳಿಗೆ ನಾಶವಾಗಿದೆ.. ಇನ್ನು ಬೆಳ್ಳಂಬೆಳಗೆ ಹಾಗೂ ಸಂಜೆಯಾಗುತ್ತಲೇ ರಸ್ತೆಯಲ್ಲೂ ಕಾಣಿಸಿಕೊಳ್ಳುವುದರಿಂದ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸಬೇಕಾಗಿದೆ. ಅರಣ್ಯ ಇಲಾಖೆಯವರು ಹಲವು ಬಾರಿ ಆನೆಗಳನ್ನು ಕಾಡಿಗೆ ಅಟ್ಟಲು ಪ್ರಯತ್ನ ಪಟ್ಟರೂ ಆನೆಗಳು ಮತ್ತೆ ಊರಿನತ್ತಲೇ ಬರುತ್ತಿದೆ. ಸಧ್ಯ ಅರಣ್ಯ ಇಲಾಖೆ ಹಾಗೂ ಜನಪುತಿನಿಧಿಗಳು ರೈತರ ಸಂಕಷ್ಟಕ್ಕೆ ಸ್ಪಂದಿಸಿ, ಆನೆ ಹಾವಳಿಗೆ ಶಾಶ್ವತ ಪರಿಹಾರವನ್ನು ನೀಡಬೇಕಿದೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

     

ಜಾಹೀರಾತು
ಜಾಹೀರಾತು
ಜಾಹೀರಾತು