ನವಚೇತ ತೋಟಗಾರಿಕಾ ರೈತ ಉತ್ಪಾದಕರ ಕಂಪನಿ ಕಲ್ಲೇರಿ ಮತ್ತು ಕೃಷಿ ವಿಜ್ಞಾನ ಕೇಂದ್ರ ಮಂಗಳೂರು, ತೋಟಗಾರಿಕಾ ಇಲಾಖೆ ಬೆಳ್ತಂಗಡಿ ಇದರ ಸಂಯುಕ್ತ ಆಶ್ರಯದೊಂದಿಗೆ ಇಂದು ಆಫ್ರಿಕಾನ್ ಬಸವನ ಹುಳದ ಮಾಹಿತಿ ಕಾರ್ಯಾಗಾರ ಕಲ್ಲೇರಿ ಬಾಪೂಜಿ ಕೇಂದ್ರಲ್ಲಿ ನಡೆಯಿತು. ನವಚೇತನದ ಅಧ್ಯಕರಾದ ಲಿಂಗಪ್ಪ ನಾಯ್ಕ ಇವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತ ರೈತರು ಕೃಷಿಯ ಜೊತೆ ಪರಿಸರಕ್ಕೆ ಒತ್ತು ನೀಡಬೇಕು ಮುಂದಿನ ದಿನಗಳಲ್ಲಿ ನಾವೆಲ್ಲರೂ ಒಟ್ಟು ಸೇರಿ ಈ ಸಂಸ್ಥೆಯನ್ನು ಬೆಳೆಸೋಣ ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಾದ ಚಂದ್ರಶೇಖರ್ ಇವರು ಇಲಾಖೆಯ ಸವಳತ್ತುಗಳ ಬಗ್ಗೆ ತಿಳಿಸಿದರು ಕೆ.ವಿ.ಕೆ ಹಿರಿಯ ವಿಜ್ಞಾನಿ ಡಾ.ಟಿ.ಜೆ ರಮೇಶ್ ಮತ್ತು ಸಂಪನ್ಮೂಲ ವ್ಯಕ್ತಿಯಾಗಿ ಕೇದಾರನಾಥ್ ಕೆ.ವಿ.ಕೆ ಮಂಗಳೂರು ಇವರು ಆಫ್ರಿಕನ್ ಬಸವನಹುಳು ಹತೋಟಿಯ ಬಗ್ಗೆ ಮಾಹಿತಿ ನೀಡಿದರು
ಕಾರ್ಯಕ್ರಮದಲ್ಲಿ ತಣ್ಣೀರುಪಂತ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಫಾತಿಮಾ ಇಶರತ್, ಕಂಪೆನಿ ಉಪಾಧ್ಯಕ್ಷರಾದ ಪುಂದರ ಗೌಡ ಎನ್, ಕಂಪೆನಿಯ ಮುಖ್ಯ ಕಾರ್ಯನಿರ್ವಾಹನಾಧಿಕಾರಿಯದ ನಾರಾಯಣ ಶೆಟ್ಟಿ ಸೇರಿದಂತೆ ಅಧಿಕ ಸಂಖ್ಯೆಯಲ್ಲಿ ಫಲಾನುಭವಿಗಳು ಉಪಸ್ಥಿತರಿದ್ದರು.