ಎಸ್.ಎಸ್.ಎಲ್.ಸಿ ಟಾಪರ್ ವಿದ್ಯಾರ್ಥಿಗಳಿಗೆ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಉಚಿತ ಶಿಕ್ಷಣ-ಕಹಳೆ ನ್ಯೂಸ್
ಪುತ್ತೂರು; 2020-21 ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿವಿಧ ಪ್ರೌಢಶಾಲೆಗಳಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ ಟಾಪರ್ ಗಳಾಗಿ ಹೊರಹೊಮ್ಮಿದ ವಿದ್ಯಾರ್ಥಿಗಳನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ವತಿಯಿಂದ ಅಭಿನಂದಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಮಹೇಶ ನಿಟಿಲಾಪುರ ವಿದ್ಯಾರ್ಥಿಗಳಿಗೆ ಶಾಲು ಹೊದಿಸಿ ಅಭಿನಂದಿಸಿದರು.
ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ಮನಸ್ವಿ ಭಟ್(623 ಅಂಕ), ಆಶ್ರಯ ಪಿ(621 ಅಂಕ), ಶ್ರೀರಾಮಭಟ್(615 ಅಂಕ), ಕ್ಷತಿ ಕಶ್ಯಪ್(615 ಅಂಕ), ದೈವಿಕ್ ರಾಜೇಶ್(615 ಅಂಕ), ದೀಪ್ತಿಲಕ್ಷ್ಮಿ (615 ಅಂಕ), ವಿವೇಕಾನಂದ ಕನ್ನಡ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ಜಾಹ್ನವಿ ವಿ ಶೆಟ್ಟಿ(614 ಅಂಕ), ಪವಿತ್ರ ಭಟ್ ಕೆ(608 ಅಂಕ), ವಿಟ್ಲ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಬಿ.ಎಸ್ ಭಾರ್ಗವಿ(623 ಅಂಕ), ಸುದಾನ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಜಿ. ದೇವ ದರ್ಶನ್(612), ರಾಮಕೃಷ್ಣ ಪ್ರೌಢ ಶಾಲೆಯ ಇಶೀತ್ ವಿಲಾಸ್(623 ಅಂಕ), ಮಂಜುನಾಥ್ ಎಸ್(615 ಅಂಕ), ವೇದಾಕ್ಷ (615 ಅಂಕ), ಬೆಟ್ಟಂಪಾಡಿ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಅಶ್ವಿತ್, ವರ್ಷಿಣಿ, ಬೆಟ್ಟಂಪಾಡಿ ನವೋದಯ ಕನ್ನಡ ಮಾಧ್ಯಮ ಪ್ರೌಢ ಶಾಲೆಯ ಲವನೀತ, ಸೈಂಟ್ ರೀಟಾ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಶ್ರೇಯಸ್(623 ಅಂಕ), ಬಾಳಿಲದ ವಿದ್ಯಾಬೋಧಿನಿ ಪ್ರೌಢ ಶಾಲೆಯ ಕೃತಿಕಾ ಪಿ(611 ಅಂಕ), ಪುಣಚದ ಶ್ರೀ ದೇವಿ ಪ್ರೌಢ ಶಾಲೆಯ ದೀಕ್ಷಾ ಕೆ(607 ಅಂಕ), ಸುಳ್ಯದ ಸ್ನೇಹಾ ಪ್ರೌಢ ಶಾಲೆಯ ತುಷಾರ್ ಕುಮಾರ್ (590 ಅಂಕ), ಉಪ್ಪಿನಂಗಡಿ ಸೈಂಟ್ ಮೇರಿ ಪ್ರೌಢ ಶಾಲೆಯ ಅಕಾಂಕ್ಷ ಕೆ(573 ಅಂಕ), ಒಡಿಯೂರಿನ ಗುರುದೇವ ಪ್ರೌಢ ಶಾಲೆಯ ದೀಪಶ್ರೀ(619 ಅಂಕ), ಮಾಣಿ ಬಾಲ ವಿಕಾಸ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಮೇಘಾ ಎಂ(603 ಅಂಕ), ಸಾತ್ವಿಕ ಎಂ(601 ಅಂಕ), ಆಶಿತಾ ಎನ್(601 ಅಂಕ), ಕನ್ಯಾನದ ಸರಸ್ವತಿ ವಿದ್ಯಾಲಯದ ವರ್ಷಿತಾ ಶೆಟ್ಟಿಗಾರ್ (599 ಅಂಕ), ಧರ್ಮತಡ್ಕ ದುರ್ಗಾಪರಮೇಶ್ವರಿ ಪ್ರೌಢ ಶಾಲೆಯ ಸ್ಪೂರ್ತಿ ಲಕ್ಷ್ಮಿ, ರಾಮಕುಂಜ ಪ್ರೌಢ ಶಾಲೆಯ ಆಶಿಶ್ ಕುಮಾರ್ (615 ಅಂಕ), ಈಶ್ವರಮಂಗಲದ ಗಜಾನನ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಶರಣ್ಯ ರೈ(611 ಅಂಕ), ಕಲ್ಲಂಗಳ ಸರಕಾರಿ ಪ್ರೌಢ ಶಾಲೆಯ ಶ್ರೀಕೃಷ್ಣ ಉಪಾದ್ಯಾಯ(600 ಅಂಕ), ಹಿರೆಬಂಡಾಡಿಯ ಸರಕಾರಿ ಪ್ರೌಢ ಶಾಲೆಯ ಗಣ್ಯಶ್ರೀ(584 ಅಂಕ), ಅಳಿಕೆ ಸತ್ಯಸಾಯಿ ಪ್ರೌಢ ಶಾಲೆಯ ಶರಣ್ಯ ಆರ್(623 ಅಂಕ), ಸಿಂಧೂರ (621 ಅಂಕ), ಉಪ್ಪಿನಂಗಡಿ ಶ್ರೀರಾಮ ಪ್ರೌಢ ಶಾಲೆಯ ಸಿಂಚನ್( 605 ಅಂಕ) ,ಕೊಡಗಿನ ಮೊರಾರ್ಜಿ ದೇಸಾಯಿ ವಸತಿ ಪ್ರೌಢ ಶಾಲೆಯ ಕುಸುಮ ಸಿ. ಎನ್(613 ಅಂಕ), ಬಂಟ್ವಾಳದ ಎಸ್.ವಿ.ಎಸ್ ಪ್ರೌಢ ಶಾಲೆಯ ವರ್ಷಿತ್ ಜೆ(623 ಅಂಕ), ಪಾಣೆಮಂಗಳೂರಿನ ಎಸ್. ಎಲ್ ಎನ್.ಪಿ ಪ್ರೌಢ ಶಾಲೆಯ ನಿತೀನ್ ಕೆ( 604 ಅಂಕ) ಸಾಧನೆಯ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸಲಾಯಿತು, ಸುಮಾರು 38 ಸಾಧಕ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ಪ್ರಾಂಶುಪಾಲ ಮಹೇಶ ನಿಟಿಲಾಪುರ ಘೋಷಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರಾದ ದೇವಿಚರಣ್, ಭೀಮ ಭಾರಧ್ವಾಜ್, ಆದಿತ್ಯಶರ್ಮಾ,ಚೈತ್ರಾ, ದಯಾಮಣಿ, ಹರ್ಷಿತಾ, ನಳಿನ ಕುಮಾರಿ, ಹರೀಶ ಶಾಸ್ತ್ರೀ, ಜ್ಯೋತಿ ಕುಮಾರಿ, ರತ್ನಾವತಿ, ಪುಪ್ಪಲತಾ, ವಿದ್ಯಾರ್ಥಿಗಳ ಪೋ಼ಷಕರು ಮೊದಲಾದವರು ಉಪಸ್ಥಿತರಿದ್ದರು.
ವಿವಿಧ ಪ್ರೌಢಶಾಲೆಯಲ್ಲಿ ಉತ್ತಮ ಅಂಕಗಳಿಸಿ ಟಾಪರ್ ಗಳಾಗಿ ಹೊರಹೊಮ್ಮಿ ಮುಂದಿನ ದಿನಗಳಲ್ಲಿನ ಅಧ್ಯಯನಕ್ಕಾಗಿ ವಿವೇಕಾನಂದ ಶಿಕ್ಷಣ ಸಂಸ್ಥೆಯನ್ನು ಆಯ್ಕೆ ಮಾಡಿಕೊಂಡದ್ದರಿಂದ ವಿವೇಕಾನಂದ ಪದವಿಪೂರ್ವ ಕಾಲೇಜಿಗೆ ಅಪಾರ ಗೌರವ ಮತ್ತು ಹೆಮ್ಮೆ ತಂದಿದೆ. ಇಂತಹ ಸಂಭ್ರಮವನ್ನು ಮುಂದಿನ ದಿನಗಳಲ್ಲೂ ಎಲ್ಲರೂ ಅನುಭವಿಸುವಂತಾಗಬೇಕು. ವಿವೇಕಾನಂದ ವಿದ್ಯಾಸಂಸ್ಥೆಯು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿದೆ.ನೈತಿಕ ವಿಚಾರಗಳನ್ನು ಮೈಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳಲ್ಲಿ ಆದರ್ಶ, ಸಂಸ್ಕಾರ ಮತ್ತುರಾಷ್ಟ್ರ ಭಕ್ತಿಯನ್ನು ಪ್ರೇರೇಪಿಸುವ ಮೂಲಕ ವಿದ್ಯಾರ್ಥಿಗಳ ಉನ್ನತಿಗೆ ಸಹಾಯ ಮಾಡುತ್ತದೆ. ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಟಾಪರ್‌ಗಳಾಗಿ ಹೊರಹೊಮ್ಮಿದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಒದಗಿಸಲಾಗುತ್ತದೆ. ಹಾಗೆಯೇ ಎಸ್.ಎಸ್.ಎಲ್. ಸಿ ಪರೀಕ್ಷೆಯಲ್ಲಿ 98% ಮತ್ತು ಅದಕ್ಕಿಂತ ಅಧಿಕ ಅಂಕಗಳನ್ನು ಗಳಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುತ್ತದೆ. 97% ರಿಂದ 98% ಅಂಕ ಪಡೆದವರಿಗೆ ಕಾಲೇಜು ಶುಲ್ಕದಲ್ಲಿ ಹತ್ತು ಸಾವಿರ ವಿನಾಯಿತಿ ದೊರಕಲಿದೆ. 95% ರಿಂದ 97% ಅಂಕ ಪಡೆದವರಿಗೆ ಕಾಲೇಜು ಶುಲ್ಕದಲ್ಲಿ ಆರು ಸಾವಿರದಷ್ಟು ವಿನಾಯಿತಿ ದೊರಕಲಿದೆ ಎಂದು ಪ್ರಾಂಶುಪಾಲ ಮಹೇಶ ನಿಟಿಲಾಪುರ ಹೇಳಿದ್ದಾರೆ.