Recent Posts

Monday, January 20, 2025
ಪುತ್ತೂರು

ಕ್ಯಾನ್ಸರ್ ಜಾಗೃತಿ- 3 ದಿನಗಳ ಆನ್‍ಲೈನ್ ಸಂವಾದ- ಕಹಳೆ ನ್ಯೂಸ್

ಪುತ್ತೂರು: ಕ್ಯಾನ್ಸರ್ ಜಾಗೃತಿ 3 ದಿನಗಳ ಆನ್‍ಲೈನ್ ಸಂವಾದ ಆಗಸ್ಟ್ 13, 14 ಮತ್ತು 16 ರಂದು Zoom App ನಲ್ಲಿ ನಡೆಯಲಿದ್ದು, ಮುಳಿಯ ಫೌಂಡೇಷನ್, ಆಕಾಂಶ ಚಾರಿಟೇಬಲ್ ಟ್ರಸ್ಟ್ ಮಾರ್ಗದರ್ಶನದೊಂದಿಗೆ ಸೀಡ್ಸ್ ಆಫ್ ಹೋಪ್ ಮತ್ತು ಜೆಸಿಐ ಪುತ್ತೂರಿನ ಸಹಯೋಗದೊಂದಿಗೆ, 3 ದಿನಗಳ ಆನ್‍ಲೈನ್ ಸಂವಾದ ಕಾರ್ಯಕ್ರಮವು “SAKHYAM” ನಡೆಯಲಿದೆ. ಇದು ಕ್ಯಾನ್ಸರ್ ಸಂಬಂಧಿತ ವಿಷಯಗಳ ಬಗ್ಗೆ ತಿಳಿಸಿಕೊಡುವ ಬಗೆಗಿನ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮವಾಗಿದ್ದು, ಕ್ಯಾನ್ಸರ್ ಸರ್ವೈವರ್ ಮತ್ತು ಸಮಾಜ ಸೇವಕಿಯಾಗಿರುವ ಅಂಚಲ್ ಶರ್ಮಾರವರು “ಮೀಲ್ಸ್ ಆಫ್ ಹಾಪಿನೆಸ್ಸ್”ನ ಬಗ್ಗೆ ಆನ್‍ಲೈನ್ ಸಂವಾದದಲ್ಲಿ ಮಾತನಾಡಲಿದ್ದಾರೆ.
ಆನ್‍ಲೈನ್ ಸಂವಾದದಲ್ಲಿ ಮಾತನಾಡಲಿರುವ ವಿಷಯಗಳು:
1. ಆಕೆಯ ಜೀವನ ಕಥೆ ಮತ್ತು ಕ್ಯಾನ್ಸರ್ ವಿರುದ್ಧ ಹೋರಾಡಲು ಅವರು ತೆಗೆದುಕೊಂಡ ಮುಖ್ಯವಾದ ಅಂಶಗಳು.
2. ಕ್ಯಾನ್ಸರ್ ರೋಗಿಗಳನ್ನು ಪ್ರೇರೇಪಿಸುವುದು.
ಸಮಯ: ಸಂಜೆ 5:00 ರಿಂದ 6:30 ರವರೆಗೆ

ಜಾಹೀರಾತು
ಜಾಹೀರಾತು
ಜಾಹೀರಾತು


ದಿನ 2
ಡಾ. ಗುರುಪ್ರಸಾದ್ ಭಟ್, ಆಂಕಾಲಜಿಸ್ಟ್ ಕಿಮ್ಸ್, ಮಂಗಳೂರು
ಆನ್‍ಲೈನ್ ಸಂವಾದದಲ್ಲಿ ಮಾತನಾಡಲಿರುವ ವಿಷಯಗಳು:
1. ರೋಗನಿರ್ಣಯ, ಹಂತಗಳು, ಪೂರ್ವಭಾವಿ ಕ್ಯಾನ್ಸರ್ ಚಿಕಿತ್ಸೆ ಕ್ಯಾನ್ಸರ್ ತಡೆಗಟ್ಟಲು ಮುನ್ನೆಚ್ಚರಿಕೆಗಳು ರೋಗಲಕ್ಷಣಗಳ ಪ್ರಕಾರ ವೈದ್ಯರನ್ನು ಭೇಟಿ ಮಾಡಲು ಸರಿಯಾದ ಸಮಯ
ಸಮಯ: ಸಂಜೆ 5:00 ರಿಂದ 6:30 ರವರೆಗೆ

ಜಾಹೀರಾತು
ಜಾಹೀರಾತು
ಜಾಹೀರಾತು


ದಿನ 3
ಡಾ. ರವಿಚಂದ್ರ ಕಾರ್ಕಳ, ಮನೋವೈದ್ಯ ಯೆನೆಪೋಯ ಆಸ್ಪತ್ರೆ ಮಂಗಳೂರು
ಆನ್‍ಲೈನ್ ಸಂವಾದದಲ್ಲಿ ಮಾತನಾಡಲಿರುವ ವಿಷಯಗಳು:
1. ಕ್ಯಾನ್ಸರ್ ರೋಗಿಗಳೊಂದಿಗೆ ಹೇಗೆ ಮಾತನಾಡಬೇಕು ಮತ್ತು ಅನುಭೂತಿಸಬೇಕು.
2. ಕ್ಯಾನ್ಸರ್ ಗೆಲ್ಲಲು ಬಲವಾದ ಇಚ್ಛಾಶಕ್ತಿಯನ್ನು ನಿರ್ಮಿಸುವುದು
ಸಮಯ: ಸಂಜೆ 2:00 ರಿಂದ 3:30 ರವರೆಗೆ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ