ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರಿಂದ ವಿನೂತನ ಪ್ರಯತ್ನ ಸ್ವಾತಂತ್ರ್ಯ ಅಮೃತ ಸಂಭ್ರಮದ ಪ್ರಯುಕ್ತ ಸಂಗ್ರಾಮ ಸ್ಮರಣೆ- ಬಲಿದಾನ ಸಂಸ್ಮರಣೆ ಕಾರ್ಯಕ್ರಮ- ಕಹಳೆ ನ್ಯೂಸ್
ಪುತ್ತೂರು: ಸ್ವಾತಂತ್ರ್ಯ ಅಮೃತ ಸಂಭ್ರಮದ ಪ್ರಯುಕ್ತ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಮತ್ತು ಉಪನ್ಯಾಸಕರ ಸಹಕಾರದಿಂದ ಸಂಗ್ರಾಮ ಸ್ಮರಣೆ- ಬಲಿದಾನ ಸಂಸ್ಮರಣೆ ಎಂಬ ಕಾರ್ಯಕ್ರಮವು ಯುಟ್ಯೂಬ್‍ನಲ್ಲಿ ಬಿತ್ತರಗೊಳ್ಳಲಿದ್ದು, ಈ ಕಾರ್ಯಕ್ರಮವು ಆಗಸ್ಟ್ 15 ರಂದು ಸಂಜೆ ಐದು ಗಂಟೆಗೆ ಪ್ರಸಾರವಾಗಲಿದೆ. ಇದು ಭಾರತ ಸ್ವಾತಂತ್ರ್ಯ ಸಂಗ್ರಾಮದ ಹೋರಾಟ ಬಲಿದಾನಗಳ ಕಲಾತ್ಮಕ ಮತ್ತು ಸೃಜನಶೀಲ ಪ್ರಸ್ತುತಿಯಾಗಿದೆ.
ಹಾಡುಗಾರಿಕೆಯಲ್ಲಿ ವಿದ್ಯಾರ್ಥಿಗಳಾದ ಹೇಮಸ್ವಾತಿ ಕುರಿಯಾಜೆ ಮತ್ತು ಶ್ರೇಯಾ ಎ, ಚೆಂಡೆಮದ್ದಳೆಯಲ್ಲಿ ಅಂಬಾತನಯ ಅರ್ನಾಡಿ, ಲಕ್ಷ್ಮೀಶ ಭಟ್, ದೇವಿಕಾ ಕುರಿಯಾಜೆ, ಅಮೋಘ ಶಂಕರ್, ಚಕ್ರತಾಳದಲ್ಲಿ ನವೀನ್ ಕೃಷ್ಣ, ಕೀಬೋರ್ಡ್ ನಲ್ಲಿ ಅಂಜಲಿ, ಶೃಂಗದಲ್ಲಿ ಅನ್ವಿತ ,ಸ್ವಾತಂತ್ರ್ಯ ಹೋರಾಟಗಾರರ ನಿರೂಪಕಿಯಾಗಿ ಎಸ್ ಭಾರ್ಗವಿ, ಸನ್ಮಯಾ ಐ.ಕೆ, ಕೃತಿ ಕೆ ತಮ್ಮ ಸಹಕಾರವನ್ನು ನೀಡಿರುತ್ತಾರೆ. ಈ ಕಾರ್ಯಕ್ರಮದ ಸಾಹಿತ್ಯ ಮತ್ತು ನಿರ್ದೇಶನವನ್ನು ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕ ಶ್ರೀಧರ ವಿ ಶೆಟ್ಟಿಗಾರ್ ,ಸಮನ್ವಯಕಾರರಾಗಿ ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕ ಅಜಯಶಾಸ್ತ್ರೀ, ಶ್ರೀವತ್ಸ ಮತ್ತು ವಾಣಿಜ್ಯ ವಿಭಾಗದ ಉಪನ್ಯಾಸಕ ದೇವಿಪ್ರಸಾದ್ ಮತ್ತು ಸಂಕಲನಕಾರರಾಗಿ ಪದವಿ ಕಾಲೇಜಿನ ವಿಕಸನ ಸ್ಟುಡಿಯೋದ ತಂತ್ರಜ್ಞರಾದ ಸಂತೋಷ್ ನಿರ್ವಹಿಸಿರುತ್ತಾರೆ. ಇದರ ಜೊತೆಗೆ ವಿವೇಕಾನಂದ ಪದವಿ ಕಾಲೇಜಿನ ವಿಕಸನ ಸ್ಟುಡಿಯೋ ಈ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರವನ್ನು ನೀಡಿದೆ.
ನಿಗದಿಪಡಿಸಲಾದ ಸಮಯದಲ್ಲಿ https://www.youtube.com/channel/UCGG9Kn0J1X_jS01NJswlLTQ ಲಿಂಕ್ ಓಪನ್ ಮಾಡುವ ಮೂಲಕ ಈ ಕಾರ್ಯಕ್ರಮವನ್ನು ವೀಕ್ಷಿಸಲು ಅವಕಾಶವಿದೆ. ಅದೇ ರೀತಿ ಯುಟ್ಯೂಬ್‍ನಲ್ಲಿ vpuc Puttur ಎಂದು ಸರ್ಚ್ ಮಾಡಿದರೂ ಆಯ್ಕೆ ಲಭ್ಯವಿರುತ್ತದೆ.