ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತಿಲ್ ಕ್ಷೇತ್ರಕ್ಕೆ ಧರ್ಮಸ್ಥಳದ ಹರ್ಷೇಂದ್ರ ಹೆಗ್ಗಡೆಯವರು ಭೇಟಿ-ಕಹಳೆ ನ್ಯೂಸ್
ಪುತ್ತೂರು: ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತಿಲ್ ಕ್ಷೇತ್ರಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರ ಸಹೋದರ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಹರ್ಷೇಂದ್ರ ಹೆಗಡೆ ಅವರು ನಿನ್ನೆ ಭೇಟಿ ನೀಡಿದರು. ಬಳಿಕ ಮರದ ಕತ್ತನೆ ಸತ್ಯಧರ್ಮ ಚಾವಡಿ ವಿನ್ಯಾಸಗಳನ್ನು ವೀಕ್ಷಿಸಿದರು. ಶ್ರೀ ಕ್ಷೇತ್ರ ಗೆಜ್ಜೆಗಿರಿಯ ತುತ್ತ ತುದಿಯ ಶಿಖರಾಗ್ರೆಯಲ್ಲಿರುವ ಕೋಟಿ-ಚೆನ್ನಯ ಮೂಲಸ್ಥಾನ ಗರಡಿಗೆ ಮತ್ತು ಚರ್ಮರ ಗುಡಿ ಸಂದರ್ಶಿಸಿ ಶಿಲಾಮಯವಾಗಿ ನಿರ್ಮಾಣದ ಗರಡಿಯ ಕೆಲಸ ಉತ್ತಮ ಗುಣಮಟ್ಟದಲ್ಲಿದೆ. ದೇಯಿ ಮಾತೆಯ ಮಹಾಸಮಾಧಿ ಕೂಡಿಮಠ, ಧೂಮಾವತಿ ದೈವಸ್ಥಾನ ವೀಕ್ಷಿಸಿ ತಾನು ಕಂಡ ಹಲವು ಉತ್ತಮ ವಾಸ್ತು ಶಿಲ್ಪದ ದೇವಾಲಯಗಳಲ್ಲಿ ಇದೂ ಒಂದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕ್ಷೇತ್ರದ ಮುಂದಿನ ನಿರ್ವಹಣಾ ಕ್ರಮಗಳ ಬಗ್ಗೆ ಸಲಹೆ ಸೂಚನೆಗಳನ್ನ ನೀಡಿದರು. ಬಳಿಕ ಕ್ಷೇತ್ರದ ವತಿಯಿಂದ ಹರ್ಷೇಂದ್ರ ಹೆಗಡೆ ಅವರಿಗೆ ಪ್ರಸಾದ, ಫಲಪುಷ್ಪ ನೀಡಿ ಶಾಲು ಹೊದಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಬಾಲಕನ ಪೂಜಾರಿ ವಿನಯ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು ಕ್ಷೇತ್ರದ ವ್ಯವಸ್ಥಾಪಕರಾದ ದೀಪಕ್ ಕೋಟ್ಯಾನ್ ಮತ್ತು ಸಿಬ್ಬಂದಿ ಒಳಗೆ ಹಷೇರ್ಂದ್ರ ಹೆಗಡೆಯವರನ್ನು ಗೌರವಪೂರ್ವಕವಾಗಿ ಸ್ವಾಗತಿಸಿದರು.