Sunday, January 19, 2025
ಅಂಕಣ

‘ಕನಸು ಕ್ರಿಯೆಷನ್ಸ್’ ತಂಡದಿ0ದ ನಿರ್ಮಾಣವಾಗಲಿದೆ ಎಚ್ಚರ” ಕಿರುಚಿತ್ರ – ಕಹಳೆ ನ್ಯೂಸ್

ಕಲೆ ಎಂಬುದು ಎಲ್ಲರಲ್ಲೂ ಅಡಗಿರುವಂತದು.ಅಂತ ಕಲೆಗೆ ಒಂದು ವೇದಿಕೆ ಸಿಕ್ಕಾಗ ಮಾತ್ರ ಅವನ ಪ್ರತಿಭೆಯನ್ನು ಹೊರಹಾಕಲು ಸಾಧ್ಯ. ಅದೇ ರೀತಿ ಒಬ್ಬ ಕಲಾವಿದ ದೊಡ್ಡ ಮಟ್ಟದಲ್ಲಿ ಹೆಸರು ಮಾಡಬೇಕಾದರೆ ಅವನ ಸಣ್ಣ ಸಣ್ಣ ಪ್ರಯತ್ನಗಳು ಇದರ ಯಶಸ್ಸಿಗೆ ಕಾರಣವಾಗುತ್ತದೆ. ಈ ಕಾರಣದಿಂದ ‘ಕನಸು ಕ್ರಿಯೆಷನ್ಸ್’ ಎಂಬ ತಂಡವನ್ನು ರಚಿಸಿಕೊಂಡು ಹಲವಾರು ಸಣ್ಣ ಕಲಾವಿದರ ಪ್ರತಿಭೆಗೆ ಕಿರುಚಿತ್ರದ ಮೂಲಕ ಪ್ರೊತ್ಸಾಹ ನೀಡಿ ಹೆಮ್ಮೆಗಳಿಸಿದೆ. ಜನರ ಪ್ರೀತಿ ಗಳಿಸಿಕೊಂಡು ಇದೀಗ “ಎಚ್ಚರ” ಎಂಬ ಕಿರುಚಿತ್ರದ ಕಡೆ ಈ ತಂಡ ಮುಖಮಾಡಿದೆ. ದೀಕ್ಷಿತ್ ಪೂಜಾರಿ ನಿರ್ಮಾಪನೆ ಮತ್ತು ಸಹನಿರ್ದೇಶನದಲ್ಲಿ ಕೀರ್ತನ್ ರೈ ಇವರ ಕಥೆ ಮತ್ತು ನಿರ್ದೇಶನ ಹಾಗೂ ಲೋಹಿತ್ ಪೂಜಾರಿ ಸಹನಿರ್ದೇಶನದಲ್ಲಿ, ಪ್ರಭು ವಿವೇಕ್ ರ ಉತ್ತಮ ಛಾಯಾಗ್ರಹಣದಲ್ಲಿ ಮೂಡಿಬರಲಿದೆ ಈ ‘ಎಚ್ಚರ’ ಕಿರುಚಿತ್ರ.ಚಿತ್ರಿಕರಣವು ಪುತ್ತೂರಿನ ಆಸುಪಾಸಿನಲ್ಲಿ ನಡೆದಿದ್ದು ಈ ಕಿರುಚಿತ್ರದ ಪೋಸ್ಟರ್ ಬಿಡುಗಡೆಯನ್ನು ಕಾಮಿಡಿ ಖಿಲಾಡಿ ಖ್ಯಾತಿಯ ಸುರಾಜ್ ರವರು ನಡೆಸಿದರು. ಅದಲ್ಲದೇ ಎಚ್ಚರ ಕಿರುಚಿತ್ರದ ಟೈಟಲ್ ಸಾಂಗ್ ಶ್ರೇಯಸ್ ಬಲ್ಲಾಳ್ ಹಾಡಿದ್ದು, ಒಂದು ದಿನದಲ್ಲಿ 10ಸಾವಿರ ವೀಕ್ಷಕರು ವೀಕ್ಷಿಸಿದ್ದಾರೆ. ಹಾಗೂ ಹೆಚ್ಚು ಮೆಚ್ಚುಗೆಯನ್ನು ಪಡೆದುಕೊಂಡಿದೆ. ಈ ಟೈಟಲ್ ಸಾಂಗ್ ಕಿರುಚಿತ್ರದ ನೋಡುವಿಕೆಗೆ ಹಾತೊರೆದು ಕಾಯುವಂತೆ ಮಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಚಿತ್ರದಲ್ಲಿ ಹಿರಿಯ ರಂಗ ಭೂಮಿ ಕಲಾವಿದ ಹಾಗೂ ಚಲನ ಚಿತ್ರ ನಟ ಶಿವಕುಮಾರ್ ರೈ , ರಂಗ ಭೂಮಿ ಕಲಾವಿದ ಹಾಗೂ ಚಲನ ಚಿತ್ರ ನಟ ಅನಿಲ್ ರೈ ಪೆರಿಗೇರಿ, ತುಳು, ಕನ್ನಡ, ಅರೆಭಾಷೆ ರಂಗಭೂಮಿ ಕಲಾವಿದೆ ಸುಶ್ಮಿತಾ ಶೈನಿ ಹಾಗೂ ಕರ್ನಾಟಕದಲ್ಲೇ ಮನೆ ಮಾತಾಗಿರುವ “ಧ್ವನಿ ಮಾಯೆ” ಕಲಾವಿದೆ ಸಾಯಿ ಶ್ರುತಿ, ರಂಗ ಭೂಮಿ ಹಾಗೂ ಚಲನ ಚಿತ್ರ ನಟ ನಾಗೇಶ್, ವಿನೋದ್ ರೈ ಗುತ್ತು, ಶ್ರೇಯಸ್ ಬಲ್ಲಾಳ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿ ಕೊಂಡಿದ್ದು ಸುಮಾರು 25 ಇತರೆ ಕಲಾವಿದರು ವಿವಿಧ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅದರಲ್ಲು ಕಾಲೇಜು ವಿದ್ಯಾರ್ಥಿಗಳೇ ಹೆಚ್ಚು.
ಚಿತ್ರಿಕರಣವು ಈಗಾಗಲೇ ಪೂರ್ಣಗೊಂಡಿದ್ದು ಅತೀ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.
ಚೈತ್ರಾ ಪುರ
ಪತ್ರಿಕೋದ್ಯಮ ವಿದ್ಯಾರ್ಥಿನಿ
ವಿವೇಕಾನಂದ ಕಾಲೇಜು ಪುತ್ತೂರು

ಜಾಹೀರಾತು
ಜಾಹೀರಾತು
ಜಾಹೀರಾತು