Sunday, January 19, 2025
ಅಂಕಣ

ಬಣ್ಣದ ಲೋಕದಲ್ಲಿ ಚಿತ್ತಾರ ಮೂಡಿಸಿದ ಸುಜಿತ್ ರೈ- ಕಹಳೆ ನ್ಯೂಸ್

ತನ್ನ ಕಲ್ಪನೆಗೆ ಬಿಳಿ ಹಾಳೆಯ ಮೇಲೆ ಕೈ ಚಲಕದಿಂದ ಚಿತ್ತಾರ ಬಿಡಿಸಿ ಜೀವ ತುಂಬುವ ಕಲೆ ಒಬ್ಬ ಕಲಾವಿದನಲ್ಲಿರುತ್ತದೆ. ಕಣ್ಣಲ್ಲಿ ಕಂಡ ಸೌಂದರ್ಯವನ್ನು ತನ್ನ ಕರಗಳ ಮೂಲಕ ಅತ್ಯಂತ ತಾಳ್ಮೆಯಿಂದ ಹಾಗೂ ಪರಿಶ್ರಮದಿಂದ ಆ ಹಾಳೆಗೆ ಬಣ್ಣ ತುಂಬುವುದರ ಮೂಲಕ ಇನ್ನಷ್ಟು ಚಂದಗೊಳಿಸಲು ಪ್ರಯತ್ನಿಸುತ್ತಾನೆ. ಚಿತ್ರಕಲೆಗೆ ತಾಳ್ಮೆ ಎನ್ನುವುದು ಬಹಳ ಮುಖ್ಯವಾದ ಅಂಶ ಒಬ್ಬ ಚಿತ್ರಗಾರ ಎಷ್ಟು ತಾಳ್ಮೆವಹಿಸಿ ಚಿತ್ರಬಿಡಿಸುತ್ತಾನೋ ಅಷ್ಟು ಅಂದವಾಗಿ ಚಿತ್ತಾರ ಮೂಡಿ ಬರುತ್ತದೆ. ತನ್ನನ್ನು ಪರಿಪೂರ್ಣವಾಗಿ ಆ ಚಿತ್ರಕ್ಕೆ ತೊಡಗಿಸಿಕೊಂಡು ತನ್ನ ಕೆಲಸವನ್ನು ನಿರ್ವಹಿಸಬೇಕಾಗುತ್ತದೆ. ಹೀಗೆ ಶ್ರಮ ವಹಿಸಿ ಮೂಡಿದ ಚಿತ್ರದಲ್ಲಿ ಕಲೆಗಾರನ ಸಾರ್ಥಕತೆಯನ್ನು ಕಾಣಬಹುದು. ಅಂತಹ ಚಿತ್ರವನ್ನು ಬಿಡಿಸಿ ಅದರಲ್ಲಿ ಸಾರ್ಥಕತೆಯನ್ನು ಕಾಣುವವರು ಅನೇಕ ಮಂದಿ ಅಂತವರಲ್ಲಿ ಒಬ್ಬರು ಸುಜಿತ್ ರೈ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸುಜಿತ್ ರೈ ಬಾಲ್ಯದಿಂದಲೇ ಚಿತ್ರಕಲೆಯಲ್ಲಿ ಅತ್ಯಂತ ಆಸಕ್ತಿಯನ್ನು ಹೊಂದಿದ್ದರು. ಇವರ ತಂದೆ ಸದಾನಂದ ರೈ, ತಾಯಿ ಪ್ರೇಮ ಯಸ್ ರೈ. ಇವರು ಮೂಲತಃ ಮಾಣಿಯ ಕೊಡಾಜೆಯವರು. ತನ್ನ ಪದವಿ ಪೂರ್ವ ಶಿಕ್ಷಣವನ್ನು ಮಾಣಿಯಲ್ಲಿ ಪೂರ್ಣಗೊಳಿಸಿ ಇವರು ಪ್ರಸುತ್ತ ಮಂಗಳೂರಿನ ಮಹಾಲಸ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ವಿಶುವಲ್ ಆರ್ಟ್ ಎಂಬ ಕೋಸ್‌ನ ಅಂತಿಮ ವರ್ಷದ ವ್ಯಾಸಂಗ ಮಾಡುತ್ತಿದ್ದಾರೆ. ಚಿತ್ರಕಲೆಯಲ್ಲಿ ಇಲ್ಲಿಯವರೆಗೆ ಯಾರು ಮಾಡಿರದ ತನ್ನದೆ ಶೈಲಿಯಲ್ಲಿ ಚಿತ್ರಬಿಡಿಸಬೇಕೆಂಬ ಹಂಬಲದಲ್ಲಿರುವ ಇವರಿಗೆ ಪ್ರಕೃತಿಯ ಸೌಂದರ್ಯವೇ ಸ್ಪೂರ್ತಿ. ಸ್ವೀಡ್ ಆರ್ಟ್, ಪೋಸ್ಟರ್ ಫೀಚರ್ ಹೀಗೆ ಅನೇಕ ರೀತಿಯ ಚಿತ್ರವನ್ನು ಮಾಡುತ್ತಿದ್ದಾರೆ. ಇವರ ಈ ಸಾಧನೆಯನ್ನು ಗುರುತಿಸಿದ “ಉಜ್ಜಯಿನಿ ಕಲಾವತಾರ” ರಾಷ್ವೀಯ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಪಡೆದುಕೊಂಡಿರುತ್ತಾರೆ. ಹಾಗೆಯೇ ಹಲವು ಸಂಸ್ಥೆಗಳಿAದ ಹಲವಾರು ಪ್ರಶಸ್ತಿಗಳನ್ನು ತನ್ನ ಮಡಿಲಿಗೇರಿಸಿಕೊಂಡ ಹೆಮ್ಮೆ ಇವರದ್ದು.


ಚಿತ್ರಕಲೆ ಎಂಬುದು ಎಲ್ಲರಿಗೂ ಒಲಿಯುವುದಿಲ್ಲ, ಕೆಲವರಿಗೆ ಮಾತ್ರ ಆ ಕಲೆಯನ್ನು ಒಲಿಸಿಕೊಳ್ಳುವ ಸಾಮರ್ಥ್ಯವಿರುತ್ತದೆ. ಕಲೆಗಾರನ ಗೃಹಿಕಾ ಶಕ್ತಿಯಿಂದ ಬಣ್ಣವನ್ನು ಹಚ್ಚುವುದರ ಮೂಲಕ ಚಿತ್ರ ಅಂದವಾಗಿ ಮೂಡಿಬರಲು ಸಾಧ್ಯವಾಗುತ್ತದೆ. ಇಂತಹ ಕಲೆಯನ್ನು ಹೊಂದಿರುವ ಸುಜಿತ್ ರೈ ಅನೇಕ ಕಾರ್ಯಕ್ರಮಗಳಲ್ಲಿ ವೇಗ ಚಿತ್ರವನ್ನು ಪ್ರದರ್ಶನ ಮಾಡಿದ್ದಾರೆ. ಇದರಿಂದ ಜನರ ಮನಸ್ಸಿನಲ್ಲಿ ಉತ್ತಮ ಚಿತ್ರಗಾರ ಎಂಬ ಹೆಸರು ಬಂದಿರುವುದು ಅವರಿಗೆ ಒಂದು ಹೆಮ್ಮೆಯ ಸಂಗತಿ. ಒಬ್ಬ ಚಿತ್ರಗಾರನಿಗೆ ಗ್ರಹಿಕಾ ಶಕ್ತಿ ಇರಬೇಕು ಯಾವ ಕಡೆಯಿಂದ ನೋಡಿದರೆ, ಯಾವ ರೀತಿ ಕಾಣುತ್ತದೆ. ಎಂಬ ದೂರದೃಷ್ಟಿ ಇರಬೇಕು, ಆಳವಾಗಿ ವೀಕ್ಷಿಣೆ ಮಾಡುವ ಸಾಮರ್ಥ್ಯವಿರಬೇಕು. ಒಬ್ಬ ಚಿತ್ರಗಾರನಿಗೆ ಸೃಜನಶೀಲತೆ ಎಂಬುದು ಬಹಳ ಮುಖ್ಯವಾದ ಅಂಶ. ತನನ್ನು ಚಿತ್ರಕಲೆಗೆ ಅರ್ಪಿಸಿಕೊಳ್ಳಬೇಕು, ತಾಳ್ಮೆ, ಪರಿಶ್ರಮ, ಹಾಗೂ ಬಣ್ಣಗಳ ಅರಿವಿರಬೇಕು ಈ ಎಲ್ಲಾ ಅಂಶಗಳು ಒಂದೊಳ್ಳೆ ಚಿತ್ರ ಕಲಾವಿದನಿಗೆ ಇರಬೇಕಾದ ಗುಣಗಳು ಎಂದು ಚಿತ್ರಕಲೆಯ ಬಗ್ಗೆ ತನಗೆ ಇರುವ ಅಭಿಪ್ರಾಯಗಳನ್ನು ಹಂಚಿಕೊ0ಡಿದ್ದಾರೆ.
ಎಲ್ಲರಿಗೂ ಒಂದಲ್ಲ ಒಂದು ರೀತಿಯ ಗುರಿ ಅಥವಾ ಆಸೆ ಇದ್ದೆ ಇರುತ್ತದೆ ತಾನು ಈ ಕ್ಷೇತ್ರದ ಮೂಲಕ ಗುರುತಿಸಿಕೊಳ್ಳಬೇಕು, ಜನರ ಮೆಚ್ಚುಗೆಗೆ ಪಾತ್ರರಾಗಬೇಕೆಂಬ ಬಯಕೆ ಸಾಮಾನ್ಯ. ಹಾಗೆಯೇ ಸುಜಿತ್ ರೈ ಕೂಡಾ ತಾನು ರಾಷ್ಟ ಅಂತರಾಷ್ಟೀಯ ಮಟ್ಟದಲ್ಲಿ ಗುರುತಿಸಿಕೊಳ್ಳುಬೇಕೆಂಬ ಗುರಿಯನ್ನೇ ಇಟ್ಟುಕೊಂಡಿದ್ದಾರೆ. ಇವರ ಪ್ರತಿಯೊಂದು ಆಸೆ ಪೂರೈಸಲು ಎಂಬುದೇ ನಮ್ಮ ಆಶಯ.
ಕವಿತಾ
ತೃತೀಯ ಪತ್ರಿಕೋದ್ಯಮ
ವಿವೇಕಾನಂದ ಕಾಲೇಜು ಪುತ್ತೂರು