Wednesday, November 20, 2024
ದಕ್ಷಿಣ ಕನ್ನಡಪುತ್ತೂರುರಾಜಕೀಯರಾಜ್ಯ

ಪುತ್ತೂರು‌ ಶಾಸಕ ಸಂಜೀವ ಮಠಂದೂರು ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾದ ಮುಳಿಯ ಫೌಂಡೇಶನ್ ನಿಯೋಗ | ” ಜೈವಿಕ ತಡೆಗೋಡೆ ” ಯಾಗಿ ಪರಿಣಮಿಸಲು ದಕ್ಷಿಣ ಕನ್ನಡ ಜಿಲ್ಲೆಗೆ ವಾರಕ್ಕೆ ಕನಿಷ್ಠ 1 ಲಕ್ಷ ವ್ಯಾಕ್ಸಿನ್ ಒದಗಿಸಿ – ಮನವಿಗೆ ಸಿಎಂ. ಸ್ಪಂದನೆ – ತಕ್ಷಣ ಸಭೆಯಲ್ಲಿ ಆದೇಶ – ಕಹಳೆ ನ್ಯೂಸ್

ಪುತ್ತೂರು: ಗಡಿ ಭಾಗವಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ಕೋವಿಡ್ ಲಸಿಕೆಯ ವಿತರಣೆ ಪ್ರಮಾಣ ಹೆಚ್ಚಿಗೆ ಮಾಡಲು ಪ್ರಥಮ ಆದ್ಯತೆ ದಕ್ಷಿಣ ಕನ್ನಡ ಜಿಲ್ಲೆಗೆ ಕೊಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಭರವಸೆ ನೀಡಿದ್ದಾರೆ ಎಂದು ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಪುತ್ತೂರು ಶಾಸಕರು ಮತ್ತು ಮುಳಿಯ ಫೌಂಡೇಶನ್ ನಿಯೋಗ ದಕ್ಷಿಣ ಕನ್ನಡ ಜಿಲ್ಲೆಗೆ ವಾರಕ್ಕೆ ಕನಿಷ್ಠ ೧ಲಕ್ಷ ಲಸಿಕೆಗಳನ್ನು ಒದಗಿಸಿದಲ್ಲಿ ನಮ್ಮ ಜಿಲ್ಲೆ ಜೈವಿಕ ತಡೆಗೋಡೆ ಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಮನವಿ ಮಾಡಿದ್ದರು. ಈ ಮನವಿಗೆ ಸ್ಪಂಧಿಸಿದ ಮುಖ್ಯಮಂತ್ರಿಗಳು ಕೋವಿಡ್ ನಿಯಂತ್ರಣ ಕುರಿತು ನಡೆದ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕೋವಿಡ್ ವರದಿಯನ್ನು ಪಡೆದು ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ಆದಷ್ಟು ಲಸಿಕೆ ವಿತರಣೆ ಹೆಚ್ಚಿಗೆ ಮಾಡಬೇಕು. ದಕ್ಷಿಣ ಕನ್ನಡ, ಉಡುಪಿ, ಮೈಸೂರು, ಹಾಸನ, ಕೊಡಗು, ಬೆಂಗಳೂರ ಗ್ರಾಮಾಂತರ, ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಹೆಚ್ಚಿನ ಲಸಿಕೆ ವಿತರಣೆ ಮತ್ತು ಕೋವಿಡ್ ಪರೀಕ್ಷೆಯನ್ನು ಅತೀ ಹೆಚ್ಚು ಮಾಡಬೇಕೆಂದರು. ಗಡಿ ಭಾಗದಲ್ಲಿ ೧೦ ಕಿ.ಮೀ ವ್ಯಾಪ್ತಿಯಲ್ಲಿ ಕೋವಿಡ್ ಪರೀಕ್ಷೆ ಮತ್ತು ಲಸಿಕೆ ಪೂರ್ಣಗೊಳಿಸಲು ಸಂಬಂಧಿಸಿದ ಇಲಾಖೆಗೆ ತಿಳಿಸಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮುಳಿಯ ಫೌಂಡೇಶನ್‌ನ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮುಳಿಯ ಫೌಂಡೇಶನ್ ಮನವಿಯಲ್ಲಿ ಏನಿತ್ತು….!?

ಜಾಹೀರಾತು
ಜಾಹೀರಾತು
ಜಾಹೀರಾತು

ನಮ್ಮ ದಕ್ಷಿಣ ಕನ್ನಡ ಜಿಲ್ಲೆಯು ಕೇರಳ, ಕರ್ನಾಟಕ ಗಡಿ ಪ್ರದೇಶದಲ್ಲಿದ್ದು, ಸದ್ಯ ಸರಕಾರದ ನಿಯಮಾವಳಿಗಳನ್ನು ಪಾಲನೆ ಮಾಡುತ್ತಿದ್ದೇವೆ. ಆದರೆ, ನಮ್ಮ ಜಿಲ್ಲೆಯಲ್ಲಿ ಸದ್ಯ ಕೋಡ್ ಪ್ರಕರಣಗಳು ದಿನವೊಂದಕ್ಕೆ ೨೦೦ ರಿಂದ ೩೦೦ ರರ ಸರಾಸರಿಯಲ್ಲಿದ್ದು, ವ್ಯಾಕ್ಸಿನೇಷನ್ ಪ್ರಮಾಣ ಸಾಕಷ್ಟು ಇಲ್ಲದಿರುವುದರಿಂದ, ಜಿಲ್ಲೆ ಸಂಕಷ್ಟ ಎದುರಿಸಬೇಕಾಗಿದೆ. ಇದುವರೆಗೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಒಟ್ಟು ೧೨,೯೬,೩೮೯ ಲಸಿಕೆಗಳಾಗಿವೆ(ಮೊದಲನೇ ಡೋಸ್ ೯,೮೭,೦೯೬೪೩,೦೯,೨೯೩ ಎರಡನೇ ಲಸಿಕೆ) ಜಿಲ್ಲಾಡಳಿತದ ಅಂಕಿ ಅಂಶಗಳ ಪ್ರಕಾರ ೬೦+ ವಯಸ್ಕರಿಗೆ ಮೊದಲನೇ ಡೋಸ್ ೯೭.೧೧% ಎರಡನೇ ಡೋಸ್ ೫೬.೧೯% ಮತ್ತು ೪೫ ರಿಂದ ೫೯ ವಯಸ್ಕರಿಗೆ ಮೊದಲ ಡೋಸ್ ಶೇ.೭೦.೩೪ ಎರಡನೇ ಡೋಸ್ ೪೦,೫೦ ಆಗಿದೆ. ೧೮ ರಿಂದ ೪೪ ನೇ ವಯಸ್ಕರಿಗೆ ಮೊದಲ ಡೋಸ್ ಕೇವಲ ಶೇ.೩೭.೯೯ ಎರಡನೇ ಡೋಸ್ ಶೇ.೯.೫೨ ಲಸಿಕೆ ದೊರೆತಿದೆಯಷ್ಟೆ.
ಈ ಸಂದರ್ಭದಲ್ಲಿ ತಾವು ನಮ್ಮ ಜಿಲ್ಲೆಗೆ ಭೇಟಿ ನೀಡಿ ಕೋವಿಡ್ ಸ್ಥಿತಿ ಗತಿಗಳ ಕುರಿತು ಪರಿಶೀಲನಾ ಸಭೆ ನಡೆಸಿರುವುದು ಶ್ಲಾಘನೀಯ. ಗಡಿ ಜಿಲ್ಲೆಯಾದ ದಕ್ಷಿಣ ಕನ್ನಡ ರಾಜ್ಯಕ್ಕೆ ಕೋವಿದನ್ನು ತಡೆಗಟ್ಟುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಈ ಪ್ರದೇಶದಲ್ಲಿ ಶೇ. ೧೦೦ ವ್ಯಾಕ್ಸಿನೇಷನ್ ಆದಲ್ಲಿ ಅದು ಕೋವಿಡ್ ಹರಡುವಿಕೆಯನ್ನು ತಡೆಯಲು ಉಪಯುಕ್ತವನಿಸುತ್ತದೆ. ಆದ್ದರಿಂದ ವಾರಕ್ಕೆ ಕನಿಷ್ಠ ೧,೦೦,೦೦೦ ಲಸಿಕೆಗಳನ್ನು ಒದಗಿಸಿದಲ್ಲಿ ನಮ್ಮ ಜಿಲ್ಲೆ ಜೈವಿಕ ತಡೆಗೋಡೆ ಯಾಗಿ ಕಾರ್ಯನಿರ್ವಹಿಸುತ್ತದೆ.
ವ್ಯಾಕ್ಸಿನೇಷನ್ ಇಲ್ಲದೆ ಲಾಕ್ ಡೌನ್ ಮಾಡಿದರೆ ಹರಡುವಿಕೆಯನ್ನು ತಡೆಯಲು ಕಷ್ಟಸಾಧ್ಯವಾದ್ದರಿಂದ, ಸಂಪೂರ್ಣ ಲಾಕ್ ಡೌನ್, ವೀಕೆಂಡ್ ಕರ್ಫ್ಯೂ ಬದಲು ಸಂಪೂರ್ಣ ವ್ಯಾಕ್ಸಿನೇಷನ್ ಮಾಡಿದರೆ ಒಳಿತು ಎಂಬುದು ನಮ್ಮ ಅಭಿಮತ. ಆದ್ದರಿಂದ ಸದ್ಯ ನಮ್ಮ ಜಿಲ್ಲೆಗೆ ಅಧಿಕ ಸಂಖ್ಯೆಯಲ್ಲಿ ವ್ಯಾಕ್ಸಿನ್ ಆವಶ್ಯಕತೆ ಇದ್ದು, ತಾವು ಈ ನಿಟ್ಟಿನಲ್ಲಿ ಗಮನ ಹರಿಸಿ, ತಕ್ಷಣ ಹೆಚ್ಚಿನ ವ್ಯಾಕ್ಸಿನ್ ನೀಡಬೇಕಾಗಿ ಈ ಮೂಲಕ ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ ಎಂದು ಮುಳಿಯ ಫೌಂಡೇಶನ್‌ನ ಅಧ್ಯಕ್ಷ ಕೇಶವ ಪ್ರಸಾದ್ ಮಳಿಯ ಅವರು ಮನವಿಯಲ್ಲಿ ವಿನಿಂತಿಸಿದ್ದಾರೆ.