Sunday, January 19, 2025
ದಕ್ಷಿಣ ಕನ್ನಡಯಕ್ಷಗಾನ / ಕಲೆಸಂತಾಪಸುದ್ದಿ

ಅಭಿನವ ವಾಲ್ಮೀಕಿ, ಶ್ರೇಷ್ಠ ಯಕ್ಷಗಾನ ಕಲಾವಿದ, ಖ್ಯಾತ ಭಾಗವತ, ಸಾಹಿತಿ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಇನ್ನಿಲ್ಲ – ಕಹಳೆ ನ್ಯೂಸ್

ಮಂಗಳೂರು : ಅಲ್ಪಕಾಲಿಕ ಅನಾರೋಗ್ಯದಿಂದ ಬಳಲುತ್ತಿದ್ದ ಯಕ್ಷಗಾನ ರಂಗದ ಶ್ರೇಷ್ಠ ಕಲಾವಿದ, ಖ್ಯಾತ ಭಾಗವತ, ಸಾಹಿತಿ ಅಭಿನವ ವಾಲ್ಮೀಕಿ ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ಇಹಲೋಕ ತ್ಯಜಿಸಿದ್ದಾರೆ.

ಯಕ್ಷಗಾನ ರಂಗ ಹಾಗೂ ಸಾರಸ್ವತ ಲೋಕಕ್ಕೆ ಪೂಂಜರ ಅಗಲುವಿಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಟೀಲು ಮೇಳದಲ್ಲಿ ಸುಧೀರ್ಘ ತಿರುಗಾಟ ನಡೆಸಿದ ಪೂಂಜರು ತಮ್ಮ ಅನಾರೋಗ್ಯದ ಮಧ್ಯದಲ್ಲೂ ಯಕ್ಷಗಾನಕ್ಕೆ ಸಂಬಂಧಿಸಿದ ಸಾಹಿತ್ಯಗಳನ್ನು ಬರೆದುಕೊಡುತ್ತಿದ್ದರು. ಹಾಗೂ ಕಳೆದ ಒಂದು ತಿಂಗಳ ಹಿಂದೆಯಷ್ಟೇ ಕಹಳೆ ನ್ಯೂಸ್ ವಾಹಿನಿಯಲ್ಲಿ ಪ್ರಸಾರವಾದ ಕೋವಿಡ್ ಕೇರ್ – Positive Talk ಕಾರ್ಯಕ್ರಮದ 75 ನೇ ಸಂಚಿಕೆಯ ಕಾರ್ಯಕ್ರಮಕ್ಕೆ ಪೂಜ್ಯ ಎಡನೀರು ಕೇಶವಾನಂದಭಾರತಿ ಶ್ರೀಗಳ ಸಂಸ್ಮರಣೆಯ ಕುರಿತ ಹಾಡುನ್ನು ಖ್ಯಾತ ಭಾಗವತರಾದ ದಿನೇಶ ಅಮ್ಮಣ್ಣಾಯರಿಗೆ ರಚಿಸಿಕೊಟ್ಟಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು