Sunday, January 19, 2025
ಹೆಚ್ಚಿನ ಸುದ್ದಿ

ವಿಶ್ವ ಹಿಂದೂ ಪರಿಷತ್ ಬಜರಂಗದಳ ಶ್ರೀರಾಮ ಶಾಖೆ ಯೇನೆಕಲ್ಲು ಇದರ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನ ಆಚರಣೆ – ಕಹಳೆ ನ್ಯೂಸ್

ವಿಶ್ವ ಹಿಂದೂ ಪರಿಷತ್ ಬಜರಂಗದಳ ಶ್ರೀರಾಮ ಶಾಖೆ ಯೇನೆಕಲ್ಲು ಇದರ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನ ಆಚರಿಸಲಾಯಿತು. ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿ, ವಿಶೇಷವಾಗಿ ದೇಶ ಸೇವೆ ಮಾಡಿದ ಮಾಜಿ ಸೈನಿಕರಾದ ಸುಬೇದಾರ್ ವಾಸುದೇವ ಬಾನಡ್ಕ, ಭವಾನಿ ಶಂಕರ ಪೂಂಬಾಡಿ, ಹರಿಶ್ಚಂದ್ರ ಪರಮಲೆ ಇವರುಗಳಿಗೆ ಊರಿನ ಹಿರಿಯರಾದ ಶೂರಪ್ಪ ಬಾಲಾಡಿ ಸನ್ಮಾನ ಮಾಡಿ ನಂತರ ಮಾಜಿ ಸೈನಿಕರು ಅವರ ಸೇವಾ ವೃತ್ತಿಯ ಬಗ್ಗೆ ಮತ್ತು ವಿಶ್ವಹಿಂದೂ ಪರಿಷತ್ತಿನ ಕಾರ್ಯವೈಖರಿ ಬಗ್ಗೆ ಮಾತಾಡಿದರು. ಶ್ರೀ ರಾಮ ಶಾಖೆಯ ಅಧ್ಯಕ್ಷರಾದ ಲೋಕೇಶ್ ಅಲ್ಪೆ ವಿಶ್ವ ಹಿಂದೂ ಪರಿಷತ್ತು ಬೆಳೆದು ಬಂದ ಹಾದಿ ಅದರ ದ್ಯೆಯ ಮತ್ತು ಸಿದ್ದಾಂತಗಳ ಬಗ್ಗೆ ಪ್ರತಿಪಾದಿಸಿ, ಅಶೋಕ್ ನೆಕ್ರಾಜೆ ಎಲ್ಲಾ ಪಕ್ಷ ಬೇದ ಮರೆತು ಹಿಂದೂ ಸಂಘಟನೆಯಲ್ಲಿ ಎಲ್ಲರೂ ಜೊತೆಯಾಗಿ ಹಿಂದುತ್ವದ ಕೆಲಸ ಮಾಡಬೇಕು ಎಂದು ಹೇಳಿದರು. ವೇದಿಕೆಯಲ್ಲಿ ಶ್ರೀ ರಾಮ ಶಾಖೆಯ ಪ್ರಧಾನ ಕಾರ್ಯದರ್ಶಿ ಅಭಿನಂದನ್ ಜೀ ಮತ್ತು ಶ್ರೀ ರಾಮ ಶಾಖೆಯ ಸಂಚಾಲಕರಾದ ವಿನ್ಯಾಸ್ ಕೊಟಿಮನೆ ಉಪಸ್ಥಿತರಿದ್ದರು. ಅಶೋಕ್ ಅಂಬೇಕಲ್ಲು ಸ್ವಾಗತಿಸಿ, ಕುಮಾರ್ ಪೈಲಾಜೆ ವಂದಿಸಿ, ಮೋಹಿತ್ ಜೇನುಕೋಡಿ ಇವರು ಕಾರ್ಯಕ್ರಮ ನಿರೂಪಿಸಿದರು. ವಿಶ್ವಹಿಂದೂ ಪರಿಷತ್ ಬಜರಂಗದಳ ಶ್ರೀರಾಮ ಶಾಖೆಯ ಎಲ್ಲಾ ಕಾರ್ಯಕರ್ತ ಬಂಧುಗಳು ಮತ್ತು ಊರಿನ ಹಿರಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ರಾಷ್ಟ್ರಗೀತೆ ಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

ಜಾಹೀರಾತು

ಜಾಹೀರಾತು
ಜಾಹೀರಾತು