Recent Posts

Sunday, January 19, 2025
ಸುದ್ದಿ

ಮಂಗಳೂರು ಮಹಾನಗರ ಪಾಲಿಕೆಯ ಮಣ್ಣಗುಡ್ಡ ವಾರ್ಡಿನ ಮೇಯರ್ ಬಂಗ್ಲೆಯ ಬಳಿ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಶಾಸಕ ವೇದವ್ಯಾಸ್ ಕಾಮತ್- ಕಹಳೆ ನ್ಯೂಸ್

ಮಂಗಳೂರು : ಮಹಾನಗರ ಪಾಲಿಕೆಯ ಮಣ್ಣಗುಡ್ಡ ವಾರ್ಡಿನ ಮೇಯರ್ ಬಂಗ್ಲೆಯ ಬಳಿ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಶಾಸಕ ವೇದವ್ಯಾಸ್ ಕಾಮತ್, ಮಣ್ಣಗುಡ್ಡೆ ವಾರ್ಡಿನ ಮೇಯರ್ ಬಂಗ್ಲೆಯ ಬಳಿ ಅಭಿವೃದ್ಧಿ ಕಾಮಗಾರಿಗೆ 20 ಲಕ್ಷ ಅನುದಾನ ಬಿಡುಗಡೆಗೊಳಿಸಲಾಗಿದ್ದು ಶೀಘ್ರವೇ ಕಾಮಗಾರಿ ಪ್ರಾರಂಭಿಸಲಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ, ಪಾಲಿಕೆ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಸಂದೀಪ್ ಗರೋಡಿ, ಲೋಕೇಶ್ ಬೊಳ್ಳಾಜೆ, ಲೀಲಾವತಿ ಪ್ರಕಾಶ್, ಶೋಭಾ ರಾಜೇಶ್, ಪಾಲಿಕೆ ಸದಸ್ಯರಾದ ಸಂಧ್ಯಾ ಮೋಹನ್ ಆಚಾರ್, ಬಿಜೆಪಿ ಪ್ರಮುಖರಾದ ವಸಂತ್ ಶೇಟ್, ನಿಖಿಲೇಶ್, ಆನಂದ ನಾಯಕ್, ಧನಲಕ್ಷ್ಮಿ ನಿಖಿಲೇಶ್, ರವೀಂದ್ರ, ದಿವಾಕರ್ ನಾಯಕ್, ತರುಣ್ ಟಾಕರ್, ಚಂದ್ರಕಾಂತ್ ರಾವ್, ಸುಧಾ ರಾವ್, ವೇಣುಗೋಪಾಲ ಶೆಣೈ, ವಸಂತ್ ಜೆ ಪೂಜಾರಿ, ರಾಮಚಂದ್ರ ಭಂಡಾರಿ, ಚೇತನ್ ಕುಂದರ್, ವೆಂಕಟೇಶ್ ಆಚಾರ್ಯ, ಶ್ರೀಧರ್ ಆಚಾರ್ಯ, ಸಂತೋμï ಮುಂತಾದವರು ಉಪಸ್ಥಿತರಿದ್ದರು.

ಜಾಹೀರಾತು

ಜಾಹೀರಾತು
ಜಾಹೀರಾತು