Recent Posts

Monday, January 20, 2025
ಸುದ್ದಿ

ಕಲರ್ಸ್ ಕನ್ನಡದ ಎದೆ ತುಂಬಿ ಹಾಡುವೆನು ರಿಯಾಲಿಟಿ ಶೋಗೆ ಮಂಗಳೂರಿನ ಸಂದೇಶ್ ನೀರುಮಾರ್ಗ ಆಯ್ಕೆ-ಕಹಳೆ ನ್ಯೂಸ್

ಮಂಗಳೂರು: ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಸವಿ ನೆನಪಿಗಾಗಿ ಕಲರ್ಸ ಕನ್ನಡ ವಾಹಿನಿ ಮುನ್ನಡೆಸಿ ಕೊಂಡು ಬರುತ್ತಿರುವ ಪ್ರತಿಷ್ಟಿತ ರಿಯಾಲಿಟಿ ಶೊ ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಅಡಿಷನ್‍ನಲ್ಲಿ ಮಂಗಳೂರಿನ ಗೋಪಾಲಕೃಷ್ಣ ಮತ್ತು ನಳಿನಾಕ್ಷಿ ಇವರ ಪುತ್ರ ಸಂದೇಶ್ ನೀರುಮಾರ್ಗ ಇವರು ತೀರ್ಪು ಗಾರರ ಮನಗೆದ್ದು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದಾರೆ. ಸಂದೇಶ್ ನೀರುಮಾರ್ಗ ಅವರು ಜೀವನ ನಿರ್ವಹಣೆಗಾಗಿ ಆಟೋ ಚಾಲಕನಾಗಿ ದುಡಿಯುತ್ತ, ಸಮಯ ಸಿಕ್ಕಾಗ ಮದುವೆ ಹಾಗೂ ಇನ್ನಿತರ ಸಮಾರಂಭ ರಸಮಂಜರಿ ಕಾರ್ಯಕ್ರಮಗಳನ್ನು ನಡೆಸಿಕೊಂಡು, ಹಲವಾರು ಕಡೆಗಳಲ್ಲಿ ಭಜನಾ ತರಬೇತಿಗಳನ್ನು ನೀಡುತ್ತಾ ಬಂದಿದ್ದಾರೆ. ಸಧ್ಯ ಅದ್ಬುತ ಕಂಠಸಿರಿಯೊಂದಿಗೆ ಭಕ್ತಿ ಗಾಯನದಲ್ಲಿ ಹೊಸ ಛಾಪನ್ನೇ ಮೂಡಿಸಿದ ಯುವ ಗಾಯಕ ಸಂದೇಶ್ ನೀರುಮಾರ್ಗ ತುಳುನಾಡಿನ ಹಲವಾರು ಭಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಜಿಂಕೆ ಅಂದ ಹೊತ್ತು ನಿಂತೋಳೆ ಹಾಡಿನ ಸಾಹಿತ್ಯವನ್ನು ಬರೆದು ತಾನೇ ಹಾಡಿ ಲಕ್ಷಗಟ್ಟಲೆ ಅಭಿಮಾನಿಗಳನ್ನು ಕೂಡ ಸಂಪಾದಿಸಿದ್ದಾರೆ. ಇನ್ನು ಸುಬ್ರಮಣ್ಯ ಭಜನಾ ಮಂಡಳಿಯ ಸದಸ್ಯರಾಗಿ ದೇವರ ಮೇಲೆ ನಂಬಿಕೆಯಿಟ್ಟು ಹಾಡಿದ ಭಜನೆಗಳು ಇಂದು ಸಂದೇಶ್ ನೀರುಮಾರ್ಗ ಅವರ ಕೈಹಿಡಿದಿದ್ದು, ಅತಿದೊಡ್ಡ ವೇದಿಕೆಯಲ್ಲಿ ಹಾಡುವ ಅವಕಾಶ ಒದಗಿ ಬಂದಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು