Recent Posts

Monday, January 20, 2025
ಬಂಟ್ವಾಳ

ಹಿಂದು ಜಾಗರಣ ವೇದಿಕೆ,ಬಂಟ್ವಾಳ ತಾಲೂಕು ವಾಮದಪದವು ವಲಯದ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನ ಆಚರಣೆ-ಕಹಳೆ ನ್ಯೂಸ್

ಬಂಟ್ವಾಳ: ಹಿಂದು ಜಾಗರಣ ವೇದಿಕೆ,ಬಂಟ್ವಾಳ ತಾಲೂಕು ವಾಮದಪದವು ವಲಯದ ವತಿಯಿಂದ ಮೂರ್ಜೆ, ಮೂಡುಪಡುಕೊಡಿ, ಪಿಲಾತಬೆಟ್ಟು, ಪಿಲಿಮೊಗರು ಮತ್ತು ನೈನಾಡು ಸಹಬಾಗಿತ್ವದಲ್ಲಿ ವಿಷ್ಣು ಮೂರ್ತಿ ದೇವಸ್ಥಾನ ಪಾಂಗಲ್ಪಾಡಿಯಲ್ಲಿ ಅಖಂಡ ಭಾರತ ಸಂಕಲ್ಪ ದಿನವನ್ನು ಆಚರಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ದಿಕ್ಸೂಚಿ ಭಾಷಣವನ್ನು ಮನ್ಮಥ ಶೆಟ್ಟಿ ಪುತ್ತೂರು ಮಾಡಿದರು. ಊರ ಹಿರಿಯರ ನೆಲೆಯಲ್ಲಿ ದೇವಪ್ಪ ಶೆಟ್ಟಿ ಕುಂಟೆಜಾಲು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭೂ ಸೇನೆಯ ನಿವೃತ್ತ ಸೈನಿಕ ಸುಧೀರ್ ಶೆಟ್ಟಿ ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ವಲಯ ಅಧ್ಯಕ್ಷ ದಿನೇಶ್ ಮೂರ್ಜೆ, ಶಂಕರ ಶೆಟ್ಟಿ ಬೆದ್ರಮಾರ್, ಕಿರಣ್ ಮೂರ್ಜೆ, ನವಿನ್ ಕಕ್ಕಿಬೆಟ್ಡು ಮತ್ತು ಪುನಿತ್ ಕೊಡಂಬೆಟ್ಟು, ದಯನಂದ ಎರ್ಮೆನಾಡು ಮತ್ತು ಹರೀಶ್ ಕುಮೆರ್ ನೈನಾಡು, ಹಿಂ.ಜಾ.ವೇ.ಘಟಕದ ಅಧ್ಯಕ್ಷ ಕಾರ್ಯದರ್ಶಿ ಪದಾಧಿಕಾರಿಗಳು, ರಾಷ್ಟ್ರೀಯ ಸ್ವಯಂಸೇವಕ ಸಂಘಟನೆ ಮತ್ತು ಬಾಜಾಪಾದ ಪ್ರಮುಖರು ಊರ ಹಿರಿಯರು ಮತ್ತಿತರರು ಉಪಸ್ಥಿತರಿದ್ದರು