Monday, January 20, 2025
ಪುತ್ತೂರು

ಕಬಕ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಂಚರಿಸಲಿರುವ ಸ್ವಾತಂತ್ರ್ಯ ರಥಕ್ಕೆ ತಡೆ ಒಡ್ಡಿದ ಎಸ್ ಡಿ.ಪಿ.ಐ ಕಾರ್ಯಕರ್ತರಿಬ್ಬರ ಬಂಧನ- ಕಹಳೆ ನ್ಯೂಸ್

ಕಬಕ: ಕಬಕ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಂಚರಿಸುತ್ತಿದ್ದ ಸ್ವಾತಂತ್ರ‍್ಯ ರಥಕ್ಕೆ ಕಬಕ ಗ್ರಾಮ ಪಂಚಾಯತ್ ವಠಾರದಲ್ಲಿ ಗ್ರಾ.ಪಂ. ಅಧ್ಯಕ್ಷ ವಿನಯ ಕುಮಾರ್ ಕಲ್ಲೇಗ ಅವರು ಚಾಲನೆ ನೀಡಿ ಜೈಕಾರ ಹಾಕುತ್ತಿದ್ದಂತೆಯೇ, ಎಸ್.ಡಿ.ಪಿ.ಐ. ಕಾರ್ಯಕರ್ತರು ಧಿಕ್ಕಾರ ಕೂಗಿ ಸ್ವಾತಂತ್ರ‍್ಯ ರಥಕ್ಕೆ ತಡೆ ಒಡ್ಡಿದ್ದಾರೆ. ಸ್ವಾತಂತ್ರ‍್ಯ ರಥ ತಡೆದು ವೀರ ಸಾವರ್ಕರ್ ಫೋಟೋ ಬದಲು ಟಿಪ್ಪು ಸುಲ್ತಾನ್ ಫೋಟೋ ಅಳವಡಿಸುವಂತೆ ಆಗ್ರಹಿಸಿದ ಎಸ್ ಡಿ.ಪಿ.ಐ ಕಾರ್ಯಕರ್ತರಿಬ್ಬರನ್ನು ಪುತ್ತೂರು ಪೋಲಿಸರು ಬಂಧಿಸಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು