Recent Posts

Sunday, January 19, 2025
ರಾಜಕೀಯ

ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿದ ನಟಿ ಭಾವನಾ! – ಕಹಳೆ ನ್ಯೂಸ್

ಸಿನಿಮಾ ಟಾಕ್​ : ನಟಿ ಭಾವನಾ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​ ಯಡಿಯೂರಪ್ಪರನ್ನು ಭೇಟಿ ಮಾಡಿ ತೀವ್ರ ಕುತೂಹಲ ಕೆರಳಿಸಿದ್ದಾರೆ.

ಕೈ ಪಕ್ಷದ ಅಭ್ಯರ್ಥಿ ನಟಿ  ಭಾವನಾ ಇದೀಗ ಬಿಎಸ್​ ವೈ ನಿವಾಸಕ್ಕೆ  ಭೇಟಿ ಮಾಡಿದ್ದರ ಹಿಂದೆ ಬಿಜೆಪಿ ಸೇರುವ ಲಕ್ಷಣಗಳಿವೆ.  ಈ ಹಿಂದೆ  ಭಾವನಾ ಚಿತ್ರದುರ್ಗದಿಂದ ಕಾಂಗ್ರೆಸ್​ ಪಕ್ಷದ  ಟಿಕೆಟ್​ ಅಭ್ಯರ್ಥಿಯಾಗಿದ್ದರು, ಟಿಕೆಟ್​ಗಾಗಿ ಇನ್ನಿಲ್ಲದ ಕಸರತ್ತು ಕೂಡ ನಡೆಸಿದ್ದರು. ಕೋಟೆನಾಡಿನ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್​ಗಾಗಿ  ಪ್ರಯತ್ನ  ಭಾವನಾ ಇದೀಗ ಬಿಎಸ್​ವೈ ಅವರನ್ನು ಭೇಟಿ ಮಾಡಿ ರಾಜಕೀಯ ವಲಯದಲ್ಲಿ  ಮತ್ತಷ್ಟು ಅನುಮಾನಗಳು ಮೂಡುವಂತೆ  ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಇನ್ನು ಭಾವನಾ ಕಾಂಗ್ರೆಸ್​ನಿಂದ ಬಿಜೆಪಿಗೆ  ಸೇರುವ ಸಾಧ್ಯತೆಇದೆ. ಬಿಎಸ್​ವೈರೊಂದಿಗೆ, ಭಾವನಾ  ಸುಮಾರು 30 ನಿಮಿಷಗಳ ಕಾಲ ಚರ್ಚೆ ನಡೆಸಿದ್ದಾರೆ ಎಂದು  ತಿಳಿದು ಬಂದಿದೆ.  ಇಂದು ಬೆಳಗ್ಗೆ ಬಿಸ್​ವೈ ಅವರೊಂದಿಗೆ ಮಾತುಕತೆ ನಡೆಸಿ  ಭಾವನಾಗೆ ಯಡಿಯೂರಪ್ಪ ಬಿಜೆಪಿಗೆ ಸೇರಲು ಸಮ್ಮತಿ ಸೂಚಿಸಿದ್ದಾರೆ  ಎನ್ನಳಾಗಿದೆ.  ಇನ್ನು ರಾಜ್ಯ ಬಿಜೆಪಿ ಉಸ್ತುವಾರಿ   ಮುರಳಿಧರರಾವ್​ರೊಂದಿಗೂ ಕೂಡ ಭಾವನಾ ಮಾತುಕತೆ ನಡೆಸಿದ್ದಾರೆ. ಒಟ್ಟಾರೆ ಭಾವನಾ  ಶೀಘ್ರದಲ್ಲೇ ಬಿಜೆಪಿ ಸೇರಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು