Tuesday, January 21, 2025
ಪುತ್ತೂರು

ಸ್ವಾತಂತ್ರ್ಯ ರಥವನ್ನು ತಡೆದು ಗಲಭೆ ಸೃಷ್ಥಿಸಿದ ಹಿನ್ನೆಲೆ; ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ-ಕಹಳೆ ನ್ಯೂಸ್

ಕಬಕ: ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಸ್ವಾತಂತ್ರ್ಯ ರಥವನ್ನು ತಡೆದು ಗೊಂದಲ ಸೃಷ್ಠಿಸಿದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿ ಹಿಂದು ಸಂಘ ಪರಿವಾರದ ನೂರಾರು ಕಾರ್ಯಕರ್ತರು ಸೇರಿ ಇಂದು ಕಬಕ ಜಂಕ್ಷನ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಶರಣ್ ಪಂಪವೆಲ್ ಎಲ್ಲಕಡೆಯಲ್ಲೂ ವೀರ ಸಾವರ್ಕರ್ ಸ್ವಾತಂತ್ರ್ಯ ರಥೋತ್ಸವ ನಡೆಯಲಿದೆ; ತಡೆಯುವವರು ತಡೆಯಲಿ-ಸಾವಲೋಡ್ಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಪ್ರತಿಭಟನೆಯಲ್ಲಿ ಮುರಳಿಕೃಷ್ಣ ಹಸಂತಡ್ಕ, ಆರ್.ಸಿ. ನಾರಾಯಣ್, ಜಗನ್ನಿವಾಸ್, ಚಿನ್ಮಯ್ ರೈ, ಜೀವಂಧರ್ ಜೈನ್, ಅಜಿತ್ ರೈ ಹೊಸಮನೆ, ಕೃಷ್ಣ ಪ್ರಸನ್ನ, ಸಾಜ ರಾಧಕೃಷ್ಣ ಆಳ್ವ, ನರಸಿಂಹ ಶೆಟ್ಟಿ ಮಾಣಿ, ಗಣರಾಜ್ ಭಟ್ ಸೇರಿದಂತೆ ಹಿಂದೂ ಮುಖಂಡರು ಹಾಗೂ ಹಲವಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು