
ಮಂಡ್ಯ: ಕೇಂದ್ರ ಸಂಪುಟದಲ್ಲಿ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆಯಾಗಿ ಅಧಿಕಾರ ಸ್ವೀಕರಿಸಿದ ನಂತರ ಸಚಿವೆ ಶೋಭಾ ಕರಂದ್ಲಾಜೆಯವರು ಕರ್ನಾಟಕದಲ್ಲಿ ‘ಜನಾಶೀರ್ವಾದ ಯಾತ್ರೆ’ ಕೈಗೊಂಡಿದ್ದಾರೆ. ಈ ಪ್ರಯುಕ್ತ ಮಂಡ್ಯಕ್ಕೆ ಭೇಟಿ ನೀಡಿ ಶೋಭಾ ಕರಂದ್ಲಾಜೆಯವರು ಮಂಡ್ಯ ತಾಲೂಕಿನ ಹೊನಗನಹಳ್ಳಿ ಗ್ರಾಮದಲ್ಲಿ ಭತ್ತದ ಗದ್ದೆಗಿಳಿದು ರೈತರೊಂದಿಗೆ ಭತ್ತ ನಾಟಿ ಮಾಡಿದರು. ಈ ಸಂದರ್ಭದಲ್ಲಿ ನೆರೆದಿದ್ದ ಬಿಜೆಪಿ ಕಾರ್ಯಕರ್ತರು, ‘ಶೋಭಕ್ಕಂಗೆ ಜೈ’ ಎಂದು ಜೈಕಾರ ಕೂಗಿದರು. ನಂತರ ನಾಟಿ ಯಂತ್ರ ಚಲಾಯಿಸಿದ ಸಚಿವ ಕೆ.ಸಿ.ನಾರಾಯಣಗೌಡ ಯಂತ್ರದ ಮೂಲಕ ಭತ್ತದ ನಾಟಿ ಮಾಡಿದರು. ಯಂತ್ರದ ಮೇಲೆ ನಿಂತು ಶೋಭಾ ಕರಂದ್ಲಾಜೆಯವರು ಕೆ.ಸಿ.ನಾರಾಯಣಗೌಡರಿಗೆ ಸಾಥ್ ನೀಡಿದರು.