Recent Posts

Wednesday, December 18, 2024
ಸುದ್ದಿ

ಕೆದಿಲ ಗ್ರಾಮದ ಗಾಂಧಿನಗರದಲ್ಲಿರುವ ಪಾಂಚಜನ್ಯ ಸಂಕೀರ್ಣದಲ್ಲಿ ಕೆನರಾ ಬ್ಯಾಂಕ್ ವತಿಯಿಂದ 75ನೇ ಸ್ವಾತಂತ್ರ್ಯ ದಿನಾಚರಣೆ- ಕಹಳೆ ನ್ಯೂಸ್

ಕೆದಿಲ ಗ್ರಾಮದ ಗಾಂಧಿನಗರದಲ್ಲಿರುವ ಪಾಂಚಜನ್ಯ ಸಂಕೀರ್ಣದಲ್ಲಿ ಕೆನರಾ ಬ್ಯಾಂಕ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಕೆದಿಲ ಉಳ್ಳಾಕುಲು ಧೂಮಾವತಿ ಮಲರಾಯ ದೈವಸ್ಥಾನದ ಅಧ್ಯಕ್ಷರಾದ ಜೆ. ಕೃಷ್ಣ ಭಟ್ ಮಿರಾವನ ಧ್ವಜಾರೋಹಣ ನೆರವೇರಿಸಿ, ಸ್ವಾತಂತ್ರ್ಯದ ಬಗ್ಗೆ ಕೆಲವು ಅರ್ಥಪೂರ್ಣ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ಮೆನೇಜರ್ ಸಾಂಧರ್ಬಿಕ ಮಾತಾನಾಡಿದರು. ಕಾರ್ಯಕ್ರಮಕ್ಕೆ ನಿವೃತ ಶಿಕ್ಷಕ, ಶ್ರೀದೇವಿ ಭಜನಾ ಮಂದಿರದ ಸ್ಥಾಪಕ ಅಧ್ಯಕ್ಷರಾದ ಗೋಪಾಲಕೃಷ್ಣ ಭಟ್ ಪ್ರಗತಿ ವಳಂಗಜೆ ವಂದನಾರ್ಪಣೆ ಗೈದರು, ಸಭೆಯಲ್ಲಿ ಪಂಚಾಯತ್ ಅಧ್ಯಕ್ಷೆ ಜಯಂತಿ ಡಿ ಶೆಟ್ಟಿ . ಉಪಾಧ್ಯಕ್ಷ ಉಮೇಶ್ ಮುರುವ ಪಾಂಚಜನ್ಯದ ಮಾಲಿಕ ಶ್ಯಾಮ್ ಪ್ರಸಾದ್ ಒ. ಪುಂಚತೋಡಿ, ನಿವೃತ ಬ್ಯಾಂಕ್ ಉದ್ಯೋಗಿ ಪರಮೇಶ್ವರ ನಾವುಡ, ಬ್ಯಾಂಕ್ ಸಿಬ್ಬಂದಿಗಳು ಹಾಗೂ ಪಂಚಾಯತ್ ಸದಸ್ಯರು, ಊರ ಪ್ರಮುಖರು ಉಪಸ್ಥಿತರಿದ್ದರು.

 

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು