ಮಂಗಳೂರಿನಲ್ಲಿ ಕೋವಿಡ್ ಸೋಂಕಿನ ಭಯದಿಂದ ಆತ್ಮಹತ್ಯೆ ; ” ಶರಣ್ ಪಂಪೈಲ್ ಮತ್ತು ಸತ್ಯಜಿತ್ ಸುರತ್ಕಲ್ ಅವರು ಪೊಲೀಸ್ ಆಯುಕ್ತ ಶಶಿಕುಮಾರ್ ಜೊತೆ ಸೇರಿ ಹಿಂದೂ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನಡೆಸಿ ” – ಡೆತ್ ನೋಟ್ ಬರೆದಿಟ್ಟು ದಂಪತಿ ಆತ್ಮಹತ್ಯೆಗೆ ಶರಣು – ಕಹಳೆ ನ್ಯೂಸ್
ಮಂಗಳೂರು : ಕೋವಿಡ್ ಸೋಂಕಿನ
ಭಯದಿಂದ ದಂಪತಿ ಆತ್ಮಹತ್ಯೆಗೆ ಶರಣಾದ
ದಾರುಣ ಘಟನೆ ಮಂಗಳೂರು ಸುರತ್ಕಲ್
ವ್ಯಾಪ್ತಿಯಲ್ಲಿ ಸಂಭವಿಸಿದೆ.
ಸಾವಿಗೆ ಶರಣಾಗುವ ಮುನ್ನ ದಂಪತಿ ಡೆತ್
ನೋಟನ್ನು ಬರೆದಿಟ್ಟಿದ್ದಾರೆ. ಜೊತೆಗೆ
ಮಂಗಳೂರು ನಗರ ಪೊಲೀಸ್ ಆಯುಕ್ತರಿಗೂ
ವಾಯ್ಸ್ ಮೆಸೆಜ್ ಕಳಿಸಿದ್ದಾರೆ.
ಕೂಡಲೇ ಕಾರ್ಯಪ್ರವರ್ತರಾದ ಪೊಲೀಸ್
ಆಯುಕ್ತರು ಆತ್ಮಹತ್ಯೆ ಮಾಡಿಕೊಳ್ಳದಂತೆ
ಮನವಿ ಮಾಡಿದ್ದಾರೆ. ಮತ್ತು ಇವನ ವಿಳಾಸ
ಪತ್ತೆ ಹಚ್ಚಿ ರಕ್ಷಿಸಲು ಪೋಲಿಸ್ ಸಿಬಂದಿಗಳನ್ನು
ಅಲರ್ಟ್ ಮಾಡಿದ್ದಾರೆ.
ಆದರೆ ಪೊಳಿಸರು ಅಪಾರ್ಟ್ ಹುಡುಕಿ
ತಲುಪುವಷ್ಟರಲ್ಲಿ ದಂಪತಿ ನೇಣಿಗೆ ಶರಣಾಗಿ
ಇಹಲೋಕ ತ್ಯಜಿಸಿದ್ದಾರೆ. ಮೃತರನ್ನು ಆರ್ಯಾ
ಮತ್ತು ಗಣ ಸುವರ್ಣ ಎಂದು
ಗುರುತಿಸಲಾಗಿದ್ದು, ಸುರತ್ಕಲ್ ಸಮೀಪದ
ರಜಾ ಅಪಾರ್ಟ್ ಮೆಂಟ್ ನಲ್ಲಿ ನೇಣಿಗೆ
ಶರಣಾಗಿದ್ದಾರೆ.
ದಂಪತಿ ಬರೆದ ಡೆತ್ ನೋಟ್ ಸಾರಾಂಶ ಈ
ರೀತಿ ಇದೆ :
ಕಳೆದ ಒಂದು ವಾರದಿಂದ ನಮಗೆ ಕೋವಿಡ್
ಸೋಂಕಿನ ಲಕ್ಷಣ ಕಂಡುಬಂದಿದೆ. ನನ್ನ
ಗಂಡನಿಗೂ ಅದೇ ರೀತಿಯ ಲಕ್ಷಣಗಳಿವೆ.
ಮಾದ್ಯಮಗಳಲ್ಲಿ ಬರುವ ಸುದ್ದಿಗಳನ್ನು ನೋಡಿ
ಹೆದರಿದ್ದೇವೆ.ಹಾಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ
ನಿರ್ಧಾರಕ್ಕೆ ಬಂದಿದ್ದೇವೆ. ನಮ್ಮ ಅಂತ್ಯ ಕ್ರಿಯೆಗೆ
ಒಂದು ಲಕ್ಷ ರೂ. ಇಟ್ಟಿದ್ದು ನಮ್ಮ ಅಂತ್ಯಕ್ರಿಯೆಗೆ
ಬಳಸಿಕೊಳ್ಳಿ. ಹಿಂದೂ ಸಂಪ್ರದಾಯದಂತೆ
ಅಂತ್ಯ ಸಂಸ್ಕಾರ ನಡೆಸಿ.
ಶರಣ್ ಪಂಪೈಲ್ ಮತ್ತು ಸತ್ಯಜಿತ್ ಸುರತ್ಕಲ್
ಅವರೊಂದಿಗೆ ಪೊಲೀಸ್ ಆಯುಕ್ತ
ಶಶಿಕುಮಾರ್ ಗೂ ಅಂತ್ಯಕ್ರಿಯೆಗೆ ಸಹಕರಿಸಲು
ಮನವಿ ಮಾಡಿದ್ದಾರೆ. ಮನೆಯಲ್ಲಿದ್ದ ನ
ವಸ್ತುಗಳನ್ನು ಬಡವರಿಗೆ ನೀಡಿ ಎಂದು ಪತ್ರದಲ್ಲಿ
ಬರೆಯಲಾಗಿದೆ.