ಪುತ್ತೂರು ತಾಲೂಕಿನ ವ್ಯಾಪ್ತಿಯಲ್ಲಿ ಮತ್ತೆ ಜಿಹಾದಿಗಳ ಅಟ್ಟಹಾಸ ; ಗಾಳಿಮುಖದ ಖಾದರ್, ಮಹಮ್ಮದ್ ಸೇರಿದಂತೆ ಸುಮಾರು 20 ಮಂದಿ ತಂಡದಿಂದ ಒಂಟಿ ಹಿಂದೂ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ – ಸಂತ್ರಸ್ತೆಗೆ ನೆರವಾದ ಹಿಂದೂ ಜಾಗರಣಾ ವೇದಿಕೆ – ಕಹಳೆ ನ್ಯೂಸ್
ಪುತ್ತೂರು: ತಡ ರಾತ್ರಿ ಅನ್ಯ ಕೋಮಿನ ತಂಡವೊಂದು ಮನೆಗೆ ಅಕ್ರಮವಾಗಿ ನುಗ್ಗಿ ನನ್ನ ಕೈ ಹಿಡಿದು ಎಳೆದದಲ್ಲದೆ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಸಂತ್ರಸ್ತೆಯೊಬ್ಬರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಗಾಳಿಮುಖದ ದಿ. ರಾಜು ಮಾದಿಗ ಎಂಬವರ ಪತ್ನಿ ಆಶಾ (35ವ,) ಎಂಬವರು ಸಂತ್ರಸ್ತೆಯಾಗಿದ್ದು. ಅವರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ನಾನು ಕೂಲಿ ಕೆಲಸ ಮಾಡಿ
ಜೀವನ ನಡೆಸುತ್ತಿದ್ದು ಆ.16ರ ರಾತ್ರಿ ಊಟಕ್ಕೆ ಕೂತ್ತಿದ್ದ ವೇಳೆ ಗಾಳಿಮುಖದ ಖಾದರ್, ಮಹಮ್ಮದ್, ಶಾಬೀರ್, ಶಾಪಿ, ಅಶ್ರಫ್ ಕೊಟ್ಯಾಡಿ ಸೇರಿದಂತೆ ಸುಮಾರು 20 ಮಂದಿಯ ತಂಡವೊಂದು ಅಕ್ರಮವಾಗಿ ನಮ್ಮ ಮನೆಗೆ ನುಗ್ಗಿ ನನ್ನ ಕೈ ಹಿಡಿದು ಎಳೆದಿದ್ದಾರೆ. ಈ ವೇಳೆ ಮನೆಯಲ್ಲಿದ್ದ ನನ್ನ ಮಗ ಗುರುಪ್ರಸಾದ್, ಅಕ್ಕನ ಮಗ ಸೀತಾರಾಮ, ಅಳಿಯ
ಚಂದ್ರಶೇಖರ್ ಎಂಬವರು ತಡೆಯಲು ಬಂದಾಗ ಅವರನ್ನು ದೂಡಿ ಹಾಕಿದ್ದಲ್ಲದೆ ಅವರಿಗೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಸಂತ್ರಸ್ತೆಗೆ ಆಸ್ಪತ್ರೆಗೆ ಹೋಗಲು ಹಿಂದು
ಜಾಗರಣ ವೇದಿಕೆ ಕಾರ್ಯಕರ್ತರು ನೆರವಾದರು.
ರಕ್ಷಣೆ ಮಾಡಬೇಕಾದ ಪೊಲೀಸರಿಂದಲೇ ಹಲ್ಲೆ ಆರೋಪ :
ನಮ್ಮ ಮನೆಗೆ ಅಕ್ರಮವಾಗಿ ನುಗ್ಗಿದ ಅನ್ಯಕೋಮಿನ ತಂಡ ದಾಂದಲೆ ನಡೆಸಿದಾಗ ರಕ್ಷಣೆ ಕೊಡಬೇಕಾಗಿದ್ದ ಪೊಲೀಸರೆ ನನ್ನ ಅಳಿಯನಿಗೆ ಅಲ್ಲೆ ನಡೆಸಿದ್ದಾರೆ. ಅಕ್ರಮವಾಗಿ ಮನೆಗೆ
ನುಗ್ಗಿ ನನ್ನ ಕೈ ಹಿಡಿದು ಎಳೆದ ತಂಡಕ್ಕೆ ಬೆದರಿಸಲು ಅಳಿಯ ಕತ್ತಿ ಹಿಡಿದು ಎಚ್ಚರಿಕೆ ನೀಡಿದ್ದ. ಕತ್ತಿ ಹಿಡಿದಿರುವುದನ್ನು ನೆಪವಾಗಿರಿಸಿ ಆರೋಪಿಗಳ ಪೊಲೀಸರು ನನ್ನ ಅಳಿಯನಿಗೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ನಾಯಿ ಕಚ್ಚಿದ ವಿಚಾರ :
ಆಶಾ ಅವರ ಮನೆಯ ಸಾಕು ನಾಯಿ ಬೀದಿಯಲ್ಲಿ ಓಡಾಡುತ್ತಿದ್ದವರಿಗೆ ಕಚ್ಚಿದ್ದು ಈ ಕುರಿತು ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದರು. ಈ ಕುರಿತು ಪೊಲೀಸರು ಕೂಡಾ ಆಶಾ ಅವರಿಗೆ ಸಾಕು ನಾಯಿಯನ್ನು ಬೀದಿಗೆ ಬಿಡದಂತೆ ಸೂಚಿಸಿದರೆನ್ನಲಾಗಿದೆ. ಆದರೆ
ಸಾಕು ನಾಯಿ ಮತ್ತೆ ಬೀದಿಯಲ್ಲಿ ಓಡಾಡುವ ಜನರಿಗೆ ತೊಂದರೆ ಕೊಡುತ್ತಿದೆ ಎಂಬ ಆರೋಪ ವ್ಯಕ್ತವಾಗಿತ್ತು. ಆದರೆ ನಮ್ಮ ಮನೆಯ ಸಾಕು ನಾಯಿಯನ್ನು ನಾವು ಕಟ್ಟಿ ಹಾಕಿ
ಸಾಕುತ್ತಿದ್ದೇವೆ. ಆದರೆ ಇತರ ಬೀದಿ ನಾಯಿಗಳನ್ನು ನೋಡಿ ನಮ್ಮ ನಾಯಿ ಎಂದು ತಪ್ಪು ತಿಳುವಳಿಕೆಯಿಂದ ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆಂದು ಆಶಾ ಅವರು
ತಿಳಿಸಿದ್ದಾರೆ.