ಬಂಟ್ವಾಳ: ಇಲ್ಲಿನ ಕೊಯಿಲ ಗ್ರಾಮೀಣ ಅಂಚೆ ಕಚೇರಿಯಲ್ಲಿ ಕಳೆದ 35 ವರ್ಷ ದುಡಿದು ನಿವೃತ್ತಿಗೊಂಡ ಅಂಚೆ ಪಾಲಕಿ ದಯಾವತಿ ವಿ. ಶೆಟ್ಟಿಯವರನ್ನು ಅಂಚೆ ಇಲಾಖೆ ಸಿಬ್ಬಂದಿಗಳು ಮತ್ತು ಸ್ಥಳೀಯ ನಾಗರಿಕರು ಮಾವಂತೂರು ಶ್ರೀ ಮಹಾಗಣಪತಿ ಸಭಾಂಗಣದಲ್ಲಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ದೇವಳದ ಆಡಳಿತ ಮೊಕ್ತೇಸರ ಎಂ. ಪದ್ಮರಾಜ ಬಲ್ಲಾಳ್ ಮಾತನಾಡಿ, ಗ್ರಾಮೀಣ ಜನತೆಗೆ ಬ್ಯಾಂಕಿ0ಗ್ ಮಾದರಿಯಲ್ಲಿ ಆರ್ಥಿಕ ವ್ಯವಹಾರ ನಡೆಸಲು ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಅಂಚೆ ಪಾಲಕರು ಸಹಿತ ಅಂಚೆ ಪೇದೆ ಮತ್ತಿತರ ಸಿಬ್ಬಂದಿಗಳಿಗೆ ಸರ್ಕಾರವು ಸೂಕ್ತ ಸೌಲಭ್ಯಗಳನ್ನು ಒದಗಿಸಬೇಕು ಎಂದರು. ಕಾರ್ಯಕ್ರಮದಲ್ಲಿ ರಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನ ಆನಂದ ಮತ್ತು ನಿವೃತ್ತ ಶಿಕ್ಷಕಿ ಜೆ.ಕೆ. ಪಾವನಾದೇವಿ, ಬಂಟ್ವಾಳ ವಲಯ ಸಹಾಯಕ ಅಧೀಕ್ಷಕ ಲೋಕನಾಥ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಜಗದೀಶ ಕೊಯಿಲ, ನಿವೃತ್ತ ಅಂಚೆ ಪೇದೆ ಕೊರಗಪ್ಪ ಪೂಜಾರಿ, ಜಯರಾಮ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.