Monday, January 20, 2025
ಸುದ್ದಿ

ಜಲ ಜೀವನ್ ಮಿಷನ್ ಯೋಜನೆ ಹಾಗೂ ಲೋಕೋಪಯೋಗಿ ಇಲಾಖೆ ವತಿಯಿಂದ ೨೦ ಲಕ್ಷ ಅನುದಾನದಲ್ಲಿ ಮೇಗಿನಮನೆ ರಸ್ತೆಯ ಗುದ್ದಲಿ ಪೂಜೆ-ಕಹಳೆ ನ್ಯೂಸ್

ದ.ಕ ಜಿಲ್ಲಾ ಪಂಚಾಯತ್ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮಂಗಳೂರು, ತಾಲೂಕು ಪಂಚಾಯತ್ ಮಂಗಳೂರು ಮತ್ತು ಮುತ್ತೂರು ಗ್ರಾಮ ಪಂಚಾಯತ್ ಇದರ ಸಹಯೋಗದೊಂದಿಗೆ ೧ ಕೋಟಿ ೭೨ ಲಕ್ಷ ಯೋಜನೆಯ ಜಲ ಜೀವನ್ ಮಿಷನ್ ಯೋಜನೆಯ ಹಾಗೂ ಲೋಕೋಪಯೋಗಿ ಇಲಾಖೆ ವತಿಯಿಂದ ೨೦ ಲಕ್ಷ ಅನುದಾನದ ಮೇಗಿನಮನೆ ರಸ್ತೆಯ ಗುದ್ದಲಿ ಪೂಜೆಯನ್ನು ಮಂಗಳೂರು ನಗರ ಉತ್ತರ ಶಾಸಕರಾದ ಡಾ.ವೈ ಭರತ್ ಶೆಟ್ಟಿ ಅವರು ನೆರವೇರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು


ಶಾಸಕರಾದ ಭರತ್ ಶೆಟ್ಟಿಯವರು ತಮ್ಮ ಅನುದಾನದಿಂದ ಕೊಳವೂರು ಬಲ್ಲಾಜೆ ನಿವೇಶನಕ್ಕೆ ೧೯ ಲಕ್ಷ, ಕೊಳವೂರು ಗ್ರಾಮದ ಉದಯ್ ಕುಮಾರ್ ಕಂಬಳಿ ಮನೆ ಬಳಿ ರಸ್ತೆ ಕಾಂಕ್ರೀಟಿಕರಣಕ್ಕೆ ೫ ಲಕ್ಷ, ಕೊಳವೂರು ಗ್ರಾಮದ ಹಸನಬ್ಬ ಮನೆ ಬಳಿ ರಸ್ತೆ ಕಾಂಕ್ರೀಟಿಕರಣಕ್ಕೆ ೧೦ ಲಕ್ಷ, ಕೊಳವೂರು ಗ್ರಾಮದ ಕದ್ರಡಿ ಧೂಮಾವತಿ ರಸ್ತೆಗೆ ಡಾಮಾರಿಕರಣಕ್ಕೆ ೨.೫ ಲಕ್ಷ, ಒಟ್ಟು ೨ ಕೋಟಿ ೨೮ ಲಕ್ಷದ ೫೦ ಸಾವಿರ ರೂಪಾಯಿಗಳನ್ನು ತಮ್ಮ ಅನುದಾನದಿಂದ ಮುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಮುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಸತೀಶ್ ಪೂಜಾರಿ ಬಳ್ಳಾಜೆ, ಉಪಾಧ್ಯಕ್ಷರಾದ ಶ್ರೀಮತಿ ಮಾಲತಿ, ಪಂಚಾಯತ್ ಸದಸ್ಯರಾದ ಶ್ರೀ ಪ್ರವೀಣ್ ಆಳ್ವ, ಶ್ರೀಮತಿ ಸುಶ್ಮಾ, ಶ್ರೀಮತಿ ಪುಷ್ಪಾ ನಾಯ್ಕ್, ಶ್ರೀ ಜಗದೀಶ್ ದುರ್ಗಾಕೊಡಿ, ಶ್ರೀಮತಿ ಶಶಿಕಲಾ, ಶ್ರೀ ತೋಮಸ್ ಹೆರಾಲ್ಡ್ ರೋಜಾರಿಯೋ, ಶ್ರೀ ತಾರನಾಥ್ ಕುಲಾಲ್, ಶ್ರೀಮತಿ ವನಿತಾ, ಶ್ರೀಮತಿ ರುಕ್ಮಿಣಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಶ್ರೀಮತಿ ವಸಂತಿ ಹಾಗೂ ಸಿಬ್ಬಂದಿ ವರ್ಗ, ಕಿರಿಯ ಅಭಿಯಂತರರು, ಗುತ್ತಿಗೆದಾರರು, ಟ್ಯಾಂಕ್ ನಿರ್ಮಾಣಕ್ಕೆ ಸ್ಥಳ ದಾನ ಮಾಡಿದ ನಿಲಯ ಎಮ್ ಅಗರಿ, ಎಡಪದವು ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಪ್ರಸಾದ್, ಕೊಳವೂರು ಶಕ್ತಿ ಕೇಂದ್ರದ ಅಧ್ಯಕ್ಷರಾದ ಮಹಾಬಲ ಸಾಲ್ಯಾನ್, ಬೂತ್ ಸಮಿತಿ ಅಧ್ಯಕ್ಷರಾದ ಶೇಖರ್ ನೇಲಚ್ಚಿಲ್, ಬೂತ್ ಕಾರ್ಯದರ್ಶಿಯಾದ ಸಂತೋಷ್, ಜಿಲ್ಲಾ ಎಸ್.ಸಿ ಮೋರ್ಚಾದ ಸದಸ್ಯರು, ಮಂಡಲದ ಎಸ್.ಸಿ ಮೋರ್ಚಾದ ಸದಸ್ಯರಾದ ರಮೇಶ್ ಅಟ್ಟೆಪದವು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು

ಜಾಹೀರಾತು
ಜಾಹೀರಾತು
ಜಾಹೀರಾತು