ಸ್ವಾತಂತ್ರ್ಯ ರಥಕ್ಕೆ ಅಡ್ಡಿಪಡಿಸಿದ ರಾಷ್ಟ್ರದ್ರೋಹಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೋರಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಹಾಗೂ ಪರಿವಾರ ಸಂಘಟನೆ ವತಿಯಿಂದ ಮನವಿ-ಕಹಳೆ ನ್ಯೂಸ್
ಸ್ವಾತಂತ್ರದ ಅಮೃತ ಮಹೋತ್ಸವದ ಅಂಗವಾಗಿ ಆಗಸ್ಟ್ 15ರ ಭಾನುವಾರ ಪುತ್ತೂರು ತಾಲೂಕಿನ ಕಬಬ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಾತಂತ್ರ್ಯ ರಥದ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ಇಂತಹುದೊಂದು ರಥಯಾತ್ರೆಯು ನಮ್ಮ ದೇಶಾಭಿಮಾನದ ಸಂಕೇತ ಆಗಿತ್ತು .ಜನತೆ ಉತ್ಸಾಹದಿಂದ ಪಾಲ್ಗೊಂಡು ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಸಾಗುತ್ತಿದ್ದಾಗ, ಇದ್ದಕ್ಕಿದ್ದಂತೆ ಎಸ್ಡಿಪಿಐ, ಪಿಎಫ್ಐ ಸಂಘಟನೆಗೆ ಸೇರಿದ ರಾಷ್ಟ್ರದ್ರೋಹಿಗಳು ಸ್ವಾತಂತ್ರ ರಥಕ್ಕೆ ಅಡ್ಡಿ ತಂದುದಲ್ಲದೆ, ಸಾಮಾಜಿಕ ಅಶಾಂತಿಗೂ ಕಾರಣರಾಗಿದ್ದಾರೆ. ಸ್ವಾತಂತ್ರ್ಯ ದಿನದಂದು ನಡೆದ ಈ ಘಟನೆಯು ತೀರಾ ಖಂಡನೀಯವಾಗಿದೆ. ಈ ಕೃತ್ಯ ಸಮಸ್ತ ರಾಷ್ಟ್ರಭಕ್ತರ ಭಾವನೆಗಳಿಗೆ ಘಾಸಿಯುಂಟು ಮಾಡಿದೆ.
ದ.ಕ.ಜಿಲ್ಲೆಯ ವಿವಿಧೆಡೆ ಕಳೆದ ಕೆಲವು ಸಮಯಗಳಿಂದ ಇಂತಹ ಶಾಂತಿ ಭಂಜಕ ಕೃತ್ಯಗಳು ನಿರಂತರವಾಗಿ ನಡೆಯುತ್ತಲೇ ಇವೆ. ಇದರ ಹಿಂದೆ ದ.ಕ.ಜಿಲ್ಲೆಯಲ್ಲಿ ಗಲಭೆ ಎಬ್ಬಿಸುವ ಯೋಜಿತ ಷಡ್ಯಂತ್ರ ಇದೆ. ವಿವಿಧ ನೆವಗಳನ್ನು ಮುಂದಿಟ್ಟುಕೊಂಡು ಆಕ್ರಮಣ,ದಾಳಿ-ಹಲ್ಲೆ ಕೃತ್ಯಗಳನ್ನು ನಡೆಸುವುದು ನಡೆಯುತ್ತಲೇ ಇದೆ. ಪಕ್ಕದ ಕೇರಳದ ಕೆಲವು ಮತಾಂಧ ಮತ್ತು ಭಯೋತ್ಪಾದಕ ಶಕ್ತಿಗಳ ಜೊತೆ ಇಲ್ಲಿನ ಕೆಲವರಿಗೆ ಸಂಪರ್ಕ ಇದ್ದು , ಜಿಲ್ಲೆಯಲ್ಲಿ ಶಾಂತಿ, ಸಾಮರಸ್ಯವನ್ನು ಕೆಡಿಸುವುದೇ ಇದರ ಹಿಂದಿರುವ ಸಂಚಾಗಿದೆ.
ಒಂದೆಡೆ ಮತಾಂಧತೆಯನ್ನು ಹರಡುವುದು ಮತ್ತು ಮತ್ತೊಂದೆಡೆ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿರುವುದು ಕಂಡುಬಂದಿದೆ. ಗೋ ಕಳವುಗೋಕಳ್ಳಸಾಗಣೆ, ಗೋಹತ್ಯೆ, ಲವ್ ಜೆಹಾದ್, ಮತಾಂತರ, ಹಿಂದು ಪವಿತ್ರ ಕ್ಷೇತ್ರಗಳನ್ನು ಅಪವಿತ್ರಗೊಳಿಸುವುದು ಇವೇ ಮುಂತಾದ ಕೃತ್ಯಗಳು ಇದಕ್ಕೆ ತಾಜಾ ಸಾಕ್ಷಿ, ಸಾಮರಸ್ಯ ಮತ್ತು ಸಹಬಾಳ್ವೆ ಬಯಸುವ ಹಿಂದು ಸಮಾಜ ಸಂಯಮದಿಂದ ಈ ಎಲ್ಲ ಕೃತ್ಯಗಳನ್ನು ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದು, ಇದು ಮುಂದುವರಿಯುತ್ತಿರುವುದು ನಾಗರಿಕ ಸಮಾಜಕ್ಕೆ ಒಂದು ಸವಾಲೊಡ್ಡಿದಂತಾಗಿದೆ. ಇಂತಹ ಶಕ್ತಿಗಳನ್ನು ಮಟ್ಟಹಾಕದೆ ಹೋದರೆ ಇದು ಮುಂದೆ ಕೈ ಮೀರಿ ಹೋಗಲಿದೆ.ಸರಕಾರ ಈ ದುಷ್ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿ ಸ್ವಾತಂತ್ರ್ಯೋತ್ಸವಕ್ಕೆ ಅಡ್ಡಿ ಪಡಿಸಿದ ಎಸ್ಡಿಪಿಐ ಮತ್ತು ಪಿಎಫ್ಐ ಸಂಘಟನೆಗಳನ್ನು ನಿಷೇಧಿಸಬೇಕು .ಹಾಗೆಯೇ ಸ್ವಾತಂತ್ರ ರಥಯಾತ್ರೆಗೆ ಅಡ್ಡಿ ಪಡಿಸಿದವರ ಮೇಲೆ ಪೊಲೀಸ್ ಇಲಾಖೆ ರಾಷ್ಟ್ರದ್ರೋಹದ ಮೊಕದ್ದಮೆ ದಾಖಲಿಸಿ ಶಾಂತಿ ಭಂಜಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತಿದ್ದೇವೆ. ಜಿಲ್ಲೆಯಲ್ಲಿ ಪದೆ ಪದೆ ರಾಷ್ಟ್ರದ್ರೋಹಿ ಸಂಘಟನೆಗಳಿಂದ ಶಾಂತಿ, ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡುವ ದುಷ್ಕೃತ್ಯಗಳು ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ SDPI, PFI ಮೇಲೆ ಸೂಕ್ತ ಕ್ರಮ ಕೈಗೊಂಡು ಗೃಹಸಚಿವರಿಗೆ ವರದಿಯನ್ನು ಸಲ್ಲಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪುತ್ತೂರು ಪೋಲಿಸ್ ಠಾಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಬಜರಂಗದಳ ಪ್ರಾಂತ ಸಹ ಸಂಯೋಜಕ್ ಮುರಳಿ ಕೃಷ್ಣ ಹಸಂತ್ತಡ್ಕ,ವಿಶ್ವ ಹಿಂದು ಪರಿಷದ್ ಪುತ್ತೂರು ಜಿಲ್ಲಾ ಅಧ್ಯಕ್ಷರಾದ ಡಾ ಕೃಷ್ಣ ಪ್ರಸನ್ನ,ವಿಶ್ವ ಹಿಂದೂ ಪರಿಷತ್ ಜಿಲ್ಲಾ ಪ್ರಚಾರ ಪ್ರಸಾರ ಪ್ರಮುಖ್ ಶ್ರೀಧರ್ ತೆಂಕಿಲ,ಭಾರತೀಯ ಜನತಾ ಪಾರ್ಟಿಯ ನಗರ ಮಂಡಲ ಅಧ್ಯಕ್ಷರಾದ ಪಿ.ಜಿ ಜಗನ್ನಿವಾಸರಾವ್, ಬಜರಂಗದಳ ಪುತ್ತೂರು ಪ್ರಖಂಡ ಸಂಚಾಲಕ್ ಹರೀಶ್ ಕುಮಾರ್ ದೊಳ್ಪಾಡಿ,ಪ್ರಖಂಡ ಗೋರಕ್ಷಾ ಪ್ರಮುಖ್ ಕಿರಣ್ ರಾಮಕುಂಜ,ಪ್ರಮುಖರಾದ ಸೇಶಪ್ಪ ಬೆಳ್ಳಿಪ್ಪಾಡಿ,ಸೋಮನಾಥ ಬ್ರಹ್ಮ ನಗರ,ಧನರಾಜ್ ಬೆಳ್ಳಿಪ್ಪಾಡಿ, ಹರ್ಷಿತ್ ಬಲ್ನಾಡ್,ಸಂಜಯ್,ದಿನೇಶ್, ಪ್ರಜ್ವಲ್, ರಾಜ,ರವಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು