ಸ್ವಾತಂತ್ರ್ಯ ರಥಕ್ಕೆ ಅಡ್ಡಿ ಪಡಿಸಿದ ರಾಷ್ಟ್ರ ದ್ರೋಹಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ವಿ.ಹಿಂ.ಪ ಹಾಗೂ ಬಜರಂಗ ದಳ ಉಪ್ಪಿನಂಗಡಿ ವತಿಯಿಂದ ಮನವಿ -ಕಹಳೆ ನ್ಯೂಸ್
ಸ್ವಾತಂತ್ರ್ಯ ರಥಕ್ಕೆ ಅಡ್ಡಿ ಪಡಿಸಿದ ರಾಷ್ಟ್ರ ದ್ರೋಹಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳ ಉಪ್ಪಿನಂಗಡಿ ವತಿಯಿಂದ ಉಪ್ಪಿನಂಗಡಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಕುಮಾರ್ ಕಾಂಬ್ಳೆ. ಅವರಿಗೆ ಮನವಿ ಸಲ್ಲಿಸಿದರು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆಗಸ್ಟ್ 15ರಂದು ಪುತ್ತೂರು ತಾಲೂಕಿನ ಕಬಕ ಗ್ರಾಮ ಪಂಚಾಯತ್‍ನ ವ್ಯಾಪ್ತಿಯಲ್ಲಿ ಸ್ವಾತಂತ್ರ್ಯ ರಥದ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ಇಂತಹುದೊಂದು ರಥ ಯಾತ್ರೆಯು ನಮ್ಮ ದೇಶಾಭಿಮಾನದ ಸಂಕೇತ ಆಗಿತ್ತು, ಜನತೆ ಉತ್ಸಾಹದಿಂದ ಪಾಲ್ಗೊಂಡು ಸ್ವಾತಂತ್ರ್ಯ ಉತ್ಸವದ ಸಂಭ್ರಮದಲ್ಲಿ ಸಾಗುತ್ತಿದ್ದಾಗ ಇದ್ದಕ್ಕಿದ್ದಂತೆ ಎಸ್‍ಡಿಪಿಐ, ಪಿಎಫ್‍ಐ ಸಂಘಟನೆಯ ರಾಷ್ಟ್ರದ್ರೋಹಿಗಳು ಸ್ವಾತಂತ್ರ್ಯ ರಥಕ್ಕೆ ಅಡ್ಡಿ ತಂದುದಲ್ಲದೇ, ಸಾಮಾಜಿಕ ಅಶಾಂತಿಗೆ ಕಾರಣರಾಗಿದ್ದಾರೆ. ಸ್ವಾತಂತ್ರ್ಯ ದಿನದಂದು ನಡೆದ ಈ ಘಟನೆಯು ತೀರಾ ಖಂಡನೀಯವಾಗಿದೆ. ಈ ಕೃತ್ಯ ಸಮಸ್ತ ರಾಷ್ಟ್ರ ಭಕ್ತರ ಭಾವನೆಗಳಿಗೆ ಘಾಸಿ ಉಂಟುಮಾಡಿದೆ.
ದ.ಕ. ಜಿಲ್ಲೆಯ ವಿವಿದೆಡೆ ಕಳೆದ ಕೆಲವು ಸಮಯಗಳಿಂದ ಇಂತಹ ಶಾಂತಿ ಭಂಜಕ ಕೃತ್ಯಗಳು ನಿರಂತರವಾಗಿ ನಡೆಯುತ್ತಲೇ ಇವೆ. ಇದರ ಹಿಂದೆ ದ.ಕ. ಜಿಲ್ಲೆಯಲ್ಲಿ ಗಲಭೆ ಎಬ್ಬಸುವ ಯೋಜಿತ ಷಡ್ಯಂತ್ರ ಇದೆ. ವಿವಿಧ ನೆವಗಳನ್ನು ಮುಂದಿಟ್ಟುಕೊಂಡು ಆಕ್ರಮಣ, ದಾಳಿ, ಹಲ್ಲೆ ಕೃತ್ಯಗಳನ್ನು ನಡೆಸುವುದು ನಡೆಯುತ್ತಲೇ ಇದೆ. ಪಕ್ಕದ ಕೇರಳದ ಕೆಲವು ಮತಾಂಧ ಮತ್ತು ಭಯೋತ್ಪಾದಕ ಶಕ್ತಿಗಳ ಜೊತೆ ಇಲ್ಲಿನ ಕೆಲವರಿಗೆ ಸಂಪರ್ಕ ಇದ್ದು, ಜಿಲ್ಲೆಯಲ್ಲಿ ಶಾಂತಿ, ಸಾಮರಸ್ಯವನ್ನು ಕೆಡಿಸುವುದೇ ಇದರ ಹಿಂದಿರುವ ಸಂಚಾಗಿದೆ. ಒಂದೆಡೆ ಮತಾಂಧತೆಯನ್ನು ಹರಡುವುದು ಮತ್ತು ಮತ್ತೊಂದೆಡೆ ಭಯೋತ್ಪಾದಕ ಚಟುವಟಕೆಗಳಲ್ಲಿ ತೊಡಗಿರುವುದು ಕಂಡುಬಂದಿದೆ. ಗೋ ಕಳವು, ಗೋ ಕಳ್ಳ ಸಾಗಾಣಿ, ಗೋ ಹತ್ಯೆ, ಲವ್ ಜಿಹಾದ್, ಮತಾಂತರ, ಹಿಂದು ಪವಿತ್ರ ಕ್ಷೇತ್ರಗಳನ್ನು ಅಪವಿತ್ರಗೊಳಿಸುವುದು ಇವೇ ಮುಂತಾದ ಕೃತ್ಯಗಳು ಇದಕ್ಕೆ ತಾಜಾ ಸಾಕ್ಷಿ. ಸಾಮರಸ್ಯ ಮತ್ತು ಸಹಬಾಳ್ವೆ ಬಯಸುವ ಹಿಂದೂ ಸಮಾಜ ಸಂಯಮದಿಂದ ಈ ಎಲ್ಲ ಕೃತ್ಯಗಳನ್ನು ಶಾಂತಿಯುತವಾಗಿ ಪ್ರತಿಭಟಸುತ್ತಿದ್ದು, ಇದು ಮುಂದುವರಿಯುತ್ತಿರುವುದು ನಾಗರಿಕ ಸಮಾಜಕ್ಕೇ ಒಂದು ಸವಾಲೊಡ್ಡಿದಂತಾಗಿದೆ. ಇಂತಹ ಶಕ್ತಿಗಳನ್ನು ಮಟ್ಟಹಾಕದೆ ಹೋದರೆ ಇದು ಮುಂದೆ ಕೈ ಮೀರಿ ಹೋಗಲಿದೆ. ಸರಕಾರ ಈ ದುಷ್ಕøತ್ಯವನ್ನು ಗಂಭೀರವಾಗಿ ಪರಿಗಣಿಸಿ ಸ್ವಾತಂತ್ರೋತ್ಸವಕ್ಕೆ ಅಡ್ಡಿ ಪಡಿಸಿದ ಎಸ್‍ಡಿಪಿಐ ಮತ್ತು ಪಿಎಫ್‍ಐ ಸಂಘಟನೆಗಳನ್ನು ನಿಷೇಧಿಸಬೇಕು. ಹಾಗೆಯೇ ಸ್ವಾತಂತ್ರ್ಯ ರಥಯಾತ್ರೆಗೆ ಅಡ್ಡಿಪಡಿಸಿದವರ ಮೇಲೆ ಪೊಲೀಸ್ ಇಲಾಖೆ ರಾಷ್ಟ್ರದ್ರೋಹದ ಮೊಕದ್ದಮೆ ದಾಖಲಸಿ ಶಾಂತಿ ಭಂಜಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತಿದ್ದೇವೆ. ಜಿಲ್ಲೆಯಲ್ಲಿ ಪದೆ ಪದೆ ರಾಷ್ಟ್ರದ್ರೋಹಿ ಸಂಘಟನೆಗಳಿಂದ ಶಾಂತಿ, ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡುವ ದುಷ್ಕೃತ್ಯಗಳು ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಎಸ್‍ಡಿಪಿಐ, ಪಿಎಫ್‍ಐ ಮೇಲೆ ಸೂಕ್ತ ಕ್ರಮ ಕೈಗೊಂಡು ಗೃಹಸಚಿವರಿಗೆ ವರದಿಯನ್ನು ಸಲ್ಲಿಸಲು ಕ್ರಮ ಕೈಗೊಳ್ಳಬೇಕೆಂದು ಉಪ್ಪಿನಂಗಡಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳ ಆಗ್ರಹಿಸಿದೆ