Breaking News : ಒಂದೆಡೆ ದೇಶಭಕ್ತರ ಪ್ರತಿಭಟನೆ, ಇನ್ನೊಂದೆಡೆ ದೇಶದ್ರೋಹಿ ಕೃತ್ಯ ಎಸಗಿದವರಿಗೆ ಜಾಮೀನು | ವೀರ ಸಾವರ್ಕರ್ ಭಾವಚಿತ್ರ ವಿವಾದ – ಉರಿಯುವ ಬೆಂಕಿಗೆ ತುಪ್ಪಸುರಿದ ಜಾಮೀನು – ಕಹಳೆ ನ್ಯೂಸ್
ಪುತ್ತೂರು: ಆ 15: ಸ್ವಾತಂತ್ರ್ಯೋತ್ಸವದ ದಿನದಂದು ಪುತ್ತೂರು ತಾಲೂಕು ಕಬಕ ಗ್ರಾಮ ಪಂಚಾಯತ್ ಆವರಣದಲ್ಲಿ ಕೇಂದ್ರ ಸರ್ಕಾರದ ಅಜಾದಿ ಕಾ ಅಮೃತ ಮಹೋತ್ಸವದ ಆಚರಣೆ ಸಂದರ್ಭ ಸ್ವಾತಂತ್ರ್ಯ ಹೋರಾಟಗಾರರ ಚಿತ್ರ ಹಾಗೂ ಭಾರತ ಮಾತೆಯ ಭಾವಚಿತ್ರವಿರುವ ವಾಹನದ ಚಲನೆಗೆ ಅಡ್ಡಿ ಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಮೂವರಿಗೆ ನ್ಯಾಯಲಯ ಜಾಮೀನು ಮುಂಜೂರು ಮಾಡಿದೆ.ಬಂಧನಕ್ಕೆ ಒಳಗಾದ ಕೇವಲ 48 ಗಂಟೆಗಳ ಒಳಗಡೆ ಆರೋಪಿಗಳಿಗೆ ಜಾಮೀನು ದೊರೆತಿದೆ.
ಈ ಪ್ರಕರಣವೂ ಸಾರ್ವಜನಿಕ ವಲಯದಲ್ಲಿ ಭಾರೀ ಕುತೂಹಲ ಸೃಷ್ಟಿಸಿತ್ತು. ಹಾಗೂ ಘಟನೆಯ ಕುರಿತು ಕಬಕ ಹಾಗೂ ಪುತ್ತೂರಿನಲ್ಲಿ ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ,ರಥ ಜಾಥ ನಡೆಸಿದ್ದವು. ಕೃತ್ಯವೂ ಎಸ್ ಡಿ ಪಿ ಐ ಕಾರ್ಯಕರ್ತರು ನಡೆಸಿದರು ಎಂದು ಆರೋಪಿಸಿ ಆ ಪಕ್ಷವನ್ನು ನಿಷೇಧಿಸಬೇಕು ಎಂದು ಈ ಪ್ರತಿಭಟನೆ ಹಾಗೂ ಜಾಥದಲ್ಲಿ ಕೂಗು ಕೇಳಿ ಬಂದಿತ್ತು.
ಪುತ್ತೂರು ತಾಲೂಕಿನ ಕಬಕ ಗ್ರಾಮದ ವಿದ್ಯಾಪುರ ಮನೆಯ ದಿ. ಮಹಮ್ಮದ್ರವರ ಪುತ್ರ ಕೆ ಅಜೀಜ್ (43), ಕಬಕ ಗ್ರಾಮದ ಮುರ ಮನೆಯ ಉಮ್ಮರ್ ರವರ ಪುತ್ರ ಶಮೀರ್ (40 ) ಹಾಗೂ ಕೊಡಿಪ್ಪಾಡಿ ಗ್ರಾಮದ ಕೊಡಿಪ್ಪಾಡಿ ಮನೆಯ ಉಸ್ಮಾನ್ ಎಂಬವರ ಪುತ್ರ ಅಬ್ದುಲ್ ರಹಿಮಾನ್‌ರವರನ್ನು ಈ
ಪ್ರಕರಣದಲ್ಲಿ ಆರೋಪಿಗಳು ಎಂದು ಹೆಸರಿಸಿ ಪುತ್ತೂರು ನಗರ ಠಾಣೆ ಪೊಲೀಸರು ಆ 15 ರಂದು ಸಂಜೆ ಬಂಧಿಸಿದ್ದರು.
ಜಾಮೀನು ದೊರೆತ 3 ಆರೋಪಿಗಳ ಸಹಿತ ಒಟ್ಟು 7 ಜನ ಆರೋಪಿಗಳ ಹೆಸರಿನಲ್ಲಿ ಹಾಗೂ ಇತರರ ವಿರುದ್ದ ಅ 15 ರಂದು ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಬಕದ ಪಂಚಾಯತ್ ಅಬಿವೃದ್ಧಿ ಅಧಿಕಾರಿ ಆಶಾರವರು “ಆರೋಪಿಗಳು ಕೋವಿಡ್ 19 ರ ನಿಯಾಮವಳಿಯನ್ನು
ಉಲ್ಲಂಘಿಸಿ 75ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಆಚರಿಸದಂತೆ ಸಾರ್ವಜನಿಕ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಪಂಚಾಯತ್ ಅಧ್ಯಕ್ಷರನ್ನು ಕೈಯಿಂದ ದೂಡಿ, ಭಾರತ ಮಾತೆಯ ಭಾವಚಿತ್ರವನ್ನು ಹಾನಿಗೊಳಿಸಿ, ಸಾರ್ವಜನಿಕ ಆಸ್ತಿಗೆ ಹಾನಿಯನ್ನು ಉಂಟು ಮಾಡಿದ್ದಾರೆ’ ಎಂದು ನೀಡಿದ ದೂರಿನಂತೆ
ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಐಪಿಸಿ ಕಲಂ: 143,147,269,353,323,427 ಜೊತೆಗೆ 149 ಐ.ಪಿ.ಸಿ ಮತ್ತು 2(A) KPDLP ACT ರಡಿಯಲ್ಲಿ ಆರೋಪಿಗಳ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಅಜೀಜ್, ನೌಷದ್, ಶಮೀರ್, ಹಾರೀಸ್, ಅದ್ದು, ತೌಸೀಫ್, ಶಾಫಿ ಮತ್ತು ಇತರರ ವಿರುದ್ದ ಈ ಎಲ್ಲ ಸೆಕ್ಷನ್‌ಗಳಯಡಿಯಲ್ಲಿ ಪ್ರಕರಣ ದಾಖಲಾಗಿತ್ತು . ಇವರ ಪೈಕಿ ಅಝೀಜ್, ಸಮೀರ್ ಮತ್ತೂ ಅಬ್ದುಲ್ ರಹಿಮಾನ್ ರನ್ನು ಪೊಲೀಸರು ಆ 15 ರಂದೇ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ನ್ಯಾಯಾಲಯವೂ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಇದೀಗ ಈ ಮೂವರಿಗೂ ಪುತ್ತೂರು ನ್ಯಾಯಾಲಯವೂ ಜಾಮೀನು ಮಂಜೂರು ಮಾಡಿತ್ತು. ಉಳಿದ ನಾಲ್ಕು ಆರೋಪಿಗಳ ಬಂಧನವಾಗಿಲ್ಲ.ಆರೋಪಿಗಳ ಪರ ವಕೀಲರಾದ ಆಶ್ರಫ್ ಅಗ್ತಾಡಿ, ಮಜೀದ್ ಖಾನ್, ಅಬ್ದುಲ್ ರಹೀಮಾನ್
ಹಿರೇಬಂಡಾಡಿ, ಮುಸ್ತಫಾ ವಾದಿಸಿದರು