Sunday, January 19, 2025
ಅಂಕಣ

ಕನ್ನಡ ಚಿತ್ರರಂಗದ ಯುವ ನಿರ್ದೇಶಕ ಆದರ್ಶ ಈಶ್ವರಪ್ಪ- ಕಹಳೆ ನ್ಯೂಸ್

“ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸ ಎಂಬುದು ನಿಮಗೆ ಸದಾ ಕಾಲ ಯಶಸ್ಸುನ್ನು ಗಳಿಸಿಕೊಡುತ್ತದೆ” ಎಂಬ ವಿವೇಕಾನಂದರ ಮಾತಿನಂತೆ ನಮ್ಮಲ್ಲಿರುವ ಶ್ರಮ ನಮ್ಮನ್ನು ಎಷ್ಟು ಉನ್ನತ ಸ್ಥಾನಕ್ಕೆ ಬೇಕಾದರೂ ಕೊಂಡೊಯ್ಯಲು ಸಾಧ್ಯ ಎಂಬುದಕ್ಕೆ ಆದರ್ಶ ಈಶ್ವರಪ್ಪರವರು ಒಂದು ಉದಾಹರಣೆ ಎಂದೇ ಹೇಳಬಹುದು.


ಸಾಮಾನ್ಯವಾಗಿ ಸಿನಿಮಾ ಕ್ಷೇತ್ರ ಎಂಬುದು ಅನೇಕರಿಗೆ ಅಪಾರ ಆಸಕ್ತಿ ಇರುವ ಕ್ಷೇತ್ರ ಎಂದೇ ಹೇಳಬಹುದು. ತಾನು ಸಿನಿಮಾ ಕ್ಷೇತ್ರದಲ್ಲಿ ನಟಿಸಬೇಕು ಎನ್ನುವ ಆಸೆ ಎಲ್ಲರಲ್ಲೂ ಇದ್ದೆ ಇರುತ್ತದೆ. ಹಾಗೆಯೇ ಆದರ್ಶ ಈಶ್ವರಪ್ಪರವರಿಗೂ ಬಾಲ್ಯದಿಂದಲೇ ಸಿನಿಮಾಕ್ಷೇತ್ರದಲ್ಲಿ ಅಪಾರ ಆಸಕ್ತಿಯನ್ನು ಹೊಂದಿದವರು. ಈ ನಿಟ್ಟಿನಲ್ಲಿ ಸಿನಿಮಾಕ್ಷೇತ್ರದಲ್ಲಿ ಸಂಪೂರ್ಣವಾಗಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕೆಂಬ ಆಸೆ ಇವರಲ್ಲಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಇವರು ಮೂಲತಃ ಹಾಸನದವರಾದರು ಅಲ್ಲಿ ವಾಸವಾಗಿದ್ದು ಕೇವಲ 5 ವರ್ಷ ಮಾತ್ರ ಇವರು ಬೆಂಗಳೂರಿನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿ, ನಂತರ ಡಿಪ್ಲೋಮೊ ಶಿಕ್ಷಣವನ್ನು ಏ.ಪಿ.ಎಸ್. ಆಚಾರ್ಯ ಪೊಲಿಟೆಕೆನಿಕಲ್ ಕಾಲೇಜನದಲ್ಲಿ ಶಿಕ್ಷಣವನ್ನು ಪಡೆದರು. ಬಾಲ್ಯದಿಂದಲೇ ಸಿನಿಮಾದಲ್ಲಿ ಆಸಕ್ತಿಯನ್ನು ಹೊಂದಿದ್ದ ಇವರಿಗೆ ಸಿನಿಮಾರಂಗಕ್ಕೆ ಬರಲು ಮುಖ್ಯ ವೇದಿಕೆಯಾಗಿದ್ದು ಸರ್ ಎಂ ವಿಶ್ವೇಶ್ವರ ಇಂಜಿನಿಯರಿಂಗ್ ಕಾಲೇಜು.
ಆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವಾಗಲೇ ಸಾಂಸ್ಕøತಿಕ ಕ್ಷೇತ್ರದಲ್ಲಿ ಹೆಚ್ಚಾಗಿ ಪಾಲ್ಲೋಳುತ್ತಿದ್ದರು. ಇಂಜಿನಿಯರಿಂಗ್‍ಗೆ ಬಂದ ನಂತರ ನೃತ್ಯ ಕಾರ್ಯಕ್ರಮಕ್ಕೆ ಕೊರಿಯೊಗ್ರಾಫರ್ ಮಾತ್ರವಲ್ಲದೆ ಚಿತ್ರ ಕಥೆ ಸಂಭಾಷಣೆಯಲ್ಲೂ ತನ್ನನ್ನು ತಾನು ತೊಡಗಿಸಿಕೊಂಡು ಬಹುಮುಖ ಪ್ರತಿಭೆ ಇವರು. ಅನಂತರ ಸಾಂಸ್ಕøತಿಕ ಚಟುವಟಿಕೆಯಲ್ಲಿ ಹೆಚ್ಚು ಆಸಕ್ತಿಯು ಮೂಡಿತು. ಇಂಜಿನಿಯರಿಂಗ್ ಪದವಿಯ ನಂತರ ಉದ್ಯೋಗವನ್ನು ಸೇರಿದರು. ಅದರಲ್ಲಿ ಮುಖ್ಯವಾಗಿ ಡೆಲ್, ಐ.ಬಿ.ಯಮ್, ಯುನ್.ಐ.ಸಿ.ಇ.ಸ್ ಕಂಪೆನಿಯಲ್ಲಿ ಕೆಲಸ ನಿರ್ವಹಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಿನಿಮಾರಂಗದಲ್ಲಿ ತನ್ನದೇ ಆದ ಸ್ಥಾನಮಾನವನ್ನು ಪಡೆಯಬೇಕು ಎನ್ನುವ ಉದ್ದೇಶ ಇವರದ್ದಾಗಿತ್ತು. ಇದೇ ಕಾರಣಕ್ಕೆ ನ್ಯೂಯರ್ಕ್‍ನಲ್ಲಿ 3 ತಿಂಗಳುಗಳ ಸಿನಿಮಾ ಕೋರ್ಸುನ್ನು ಮಾಡಿದರು. ಅಲ್ಲಿಂದ ಬಂದ ನಂತರ ಅನೇಕ ಕಿರುಚಿತ್ರಗಳನ್ನು ಮಾಡಲು ಪ್ರಾರಂಭಿಸಿದರು. ಸ್ನೇಹಿತರ ಸಹಾಯದಿಂದ “ಮರೆತೆನೆಂದು ಕೊಂಡೆಯ” “ದಿ ರಿಯಾಲಿಟಿ” ಎಂಬ ಕಿರು ಚಿತ್ರವನ್ನು ಚಿತ್ರಣ ಮಾಡಿ ಬಿಡುಗಡೆಗೊಳಿಸಿದರು.ಇವರ ಈ ಎಲ್ಲಾ ಚಿತ್ರದಲ್ಲೇ ನಿರೂಪಣೆ, ಕಥೆ ಹೇಳುವ ಶೈಲಿಯಿಂದ ಜನರ ಮೆಚ್ಚುಗೆಗೆ ಪಾತ್ರರಾದರು. ಕಿರುಚಿತ್ರದ ಮೂಲಕ ಪರಿಚಯವಾದ ಇವರು ನಂತರ ನಿರ್ದೇಶಕರಾಗಿ ಕನ್ನಡ ಸಿನಿಮಾರಂಗದಲ್ಲಿ ತನ್ನದೆಯಾದ ಸಾಧನೆ ಮಾಡಿ ಇಂದು ಜಗತ್ತಿಗೆ ಪ್ರಸಿದ್ದರಾದರು.

ಆದರ್ಶ ಈಶ್ವರಪ್ಪ ಅವರ ಕಲ್ಪನೆಗೆ ನಿಲುಕದ ಸಾಧನೆಯನ್ನು ಮಾಡಿದ್ದಾರೆ ಎಂದು ಹೇಳಿದರೆ ಬಹುಶಃ ತಪ್ಪಲ್ಲ ಕಾರಣ ಇವರು ಒಂದು ಉತ್ತಮ ನಿರ್ದೇಶಕರಾಗುತ್ತಾರೆ ಎನ್ನುವ ಕಲ್ಪನೆಯಲ್ಲೂ ನಿರೀಕ್ಷಿಸದ ಸಾಧನೆ ಮಾಡಲು ಕಾರಣ ಅವರಲ್ಲಿ ಇರುವ ಪರಿಶ್ರಮ. ಆ ಪರಿಶ್ರಮ ಇಂದು ಉತ್ತಮ ನಿರ್ದೇಶರಾಗಲು ಸಹಕಾರವಾಯಿತು. ಶ್ರಮ ಇದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಜ್ವಾಲಂತ ಉದಾಹರಣೆ ಆದರ್ಶ ಈಶ್ವರಪ್ಪರವರನ್ನು ಹೇಳಬಹುದು.

ಇವರ ಈ ಕಠಿಣ ಪರಿಶ್ರಮದಿಂದಾಗಿ ಕನ್ನಡದಲ್ಲಿ “ಶುದ್ಧಿ” ಸಿನೆಮಾ ತೆರೆಯ ಮೇಲೆ ತಂದರು. ಆ ಸಿನೆಮಾಕ್ಕೆ ರಾಜ್ಯ ಪ್ರಶಸ್ತಿಯು ದೊರೆಯುತು. ಹಾಗೂ ಮತ್ತೊಂದು ಸಿನಿಮಾವಾಗಿರುವ ‘ಭಿನ್ನ’ ಸಿನೆಮಾವು ಅವರ ಹಿರಿಮೆಯನ್ನು ಹೆಚ್ಚಿಸುವಂತೆ ಮಾಡಿದೆ ಎಂದು ಹೇಳಿದರೆ ಬಹುಶಃ ತಪ್ಪಲ್ಲ. ಏಕೆಂದರೆ ಈ ಸಿನೆಮಾಕ್ಕೆ ದೆಹಲಿಯಲ್ಲಿ “ದಾದಸಾಹೇಬ್ ಪಾಲ್ಕರ್” ಎಂಬ ಪ್ರಶಸ್ತಿಯು ಲಭಿಸಿದೆ. ಈ ಸಿನಿಮಾದಲ್ಲಿ ಹೊಸ ಮುಖಗಳಿಗೆ ನಟಿಸುವ ಅವಕಾಶವನ್ನು ಕೊಟ್ಟ ಸಹೃದಯ ಇವರು. ಈ ಸಿನಿಮಾದಲ್ಲಿ ಮುಖ್ಯ ಪಾತ್ರಧಾರಿಯಾಗಿ ಪಾಯಲ್ ರಾಧಾಕೃಷ್ಣ ನಟಿಸಿದ್ದು ವಿಶೇಷ. ಆದರ್ಶ ಈಶ್ವರಪ್ಪರವರ ಶ್ರಮದ ಫಲವಾಗಿ ಸಿನೆಮಾವು ತುಂಬಾನೆ ಮಹತ್ವವನ್ನು ಪಡೆದುಕೊಂಡಿದೆ. ಇವರ ಈ ಸಾಧನೆಗೆ ಇನ್ನು ಮುಂದುವರಿಯಲಿ ಎಂಬುದು ನಮ್ಮ ಆಶಯ.


ಕವಿತಾ
ತೃತೀಯ ಪತ್ರಿಕೋದ್ಯಮ
ವಿವೇಕಾನಂದ ಕಾಲೇಜು, ಪುತ್ತೂರು