Sunday, November 24, 2024
ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರಿನಲ್ಲಿ ವೀರ ಸಾವರ್ಕರ್ ಗೆ ಅವಮಾನಕರ ಘೋಷಣೆ ಕೂಗಿದ ಎಸ್‌ಡಿಪಿಐ ಕಾರ್ಯಕರ್ತರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹ ; ಪೊಲೀಸರಿಗೆ ಹಿಂದೂ ಜಾಗರಣಾ ವೇದಿಕೆ ಮುಖಂಡರಿಂದ ದೂರು – ಕಹಳೆ ನ್ಯೂಸ್

ಪುತ್ತೂರು: ಎಸ್‌ಡಿಪಿಐ ವತಿಯಿಂದ ಆ.೧೮ರಂದು ದರ್ಬೆ ವೃತ್ತದ ಬಳಿ ನಡೆದ ಪ್ರತಿಭಟನಾ ಸಭೆ ನಡೆಸಿ ಸ್ವಾತಂತ್ರ್ಯ ಹೋರಾಟಗಾರರಾದ ವಿನಾಯಕ್ ದಾಮೋದರ್ ಸಾವರ್ಕರ್ ಅವರ ಕುರಿತು ಅವಹೇಳನ ಪದಗಳನ್ನು ಬಳಸಿ, ದೇಶಭಕ್ತರಿಗೆ ನಿಂದಿಸಿ, ಸ್ವಾತಂತ್ರ್ಯ ಹೋರಾಟಗಾರರಿಗೆ ಅಗೌರವ ತೋರಿ ಸಾರ್ವಜನಿಕ ಅಶಾಂತಿ ನಿರ್ಮಿಸಿದ್ದಾರೆ ಎಂದು ಆರೋಪಿಸಿ ಹಿಂಜಾವೇ ಮುಖಂಡ, ಪುರುಷರಕಟ್ಟೆಯ ಅವಿನಾಶ್ ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ವಿರುದ್ಧ ಅಪಚಾರವಾಗುವಂಥಹ ಸುಳ್ಳು ಸಂದೇಶವನ್ನು ರವಾನಿಸಿದ್ದಾರೆ. ಇದರಿಂದಾಗಿ ದೇಶ ಭಕ್ತನಾದ ನನಗೆ ಅತೀವ ನೋವುಂಟಾಗಿದೆ. ಆದುದರಿಂದ ದೇಶಭಕ್ತರಾದ ಸಾವರ್ಕರ್‌ರವರನ್ನು ದೇಶದ್ರೋಹಿ ಮತ್ತು ಹೇಡಿ ಎಂದ ಅಪಮಾನಗೊಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೇ ದೇಶ ಭಕ್ತ ಮತ್ತು ಸಾವರ್ಕರ್ ಅಭಿಮಾನಿಯಾದ ನನ್ನ ಭಾವನೆಗೆ ಮಾತ್ರವಲ್ಲದೆ ಹಿಂದು ಸಮಾಜದ ಭಾವನೆಗೆ ಧಕ್ಕೆಯಾಗಿರುತ್ತದೆ. ಇದು ಹಿಂದು ಮತ್ತು ಮುಸ್ಲಿಂ ಕೋಮು ಭಾವನೆಯನ್ನು ಕೆರಳಿಸುತ್ತದೆ. ಆದ್ದರಿಂದ ಕಾರ್ಯಕ್ರಮದ ಆಯೋಜಕರು ಮತ್ತು ಘಟನೆಗೆ ಸಬಂಧಿಸಿದ ಎಸ್‌ಡಿಪಿಐ ಕಾರ್ಯಕರ್ತರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ನನಗೆ ನ್ಯಾಯ ಒದಗಿಸಿಕೊಡಬೇಕೆಂದು ಅವರು ಮನವಿ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು