Sunday, November 24, 2024
ಸುದ್ದಿ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ-ಕಹಳೆ ನ್ಯೂಸ್

ಮಂಗಳೂರು: ಕೊವೀಡ್ ಕಾರಣದಿಂದ ಕಳೆದ ಕೆಲವು ತಿಂಗಳಿನಿಂದ ಸ್ಥಗಿತವಾಗಿದ್ದ ಮಂಗಳೂರು-ಯುಎಇ ವಿಮಾನ ಸಂಚಾರ ನಿನ್ನೆಯಿಂದ ಮತ್ತೆ ಪುನರಾಂಭವಾಗಿದೆ. ನಿನ್ನೆ ಅಪರಾಹ್ನ ಏರ್ ಇಂಡಿಯಾ ಎಕ್ಸ್ ಪ್ರೆಸ್ ಯುಎಇಗೆ ಹಾರಾಟ ಪ್ರಾರಂಭಿಸಿದೆ. ಯುಎಇಗೆ ತೆರಳುವ ಪ್ರಯಾಣಿಕರು ವಿಮಾನ ಏರುವ ಆರು ಗಂಟೆಗಳೊಳಗೆ ವಿಮಾನ ನಿಲ್ದಾಣದಲ್ಲಿ ನೆಗೆಟಿವ್ ರ್ಯಾಪಿಡ್ ಆರ್‍ಟಪಿಸಿಆರ್ ಪರೀಕ್ಷೆಗೊಳಪಡಬೇಕಿದೆ. ಅದರಂತೆ ಪರೀಕ್ಷೆಯೊಂದಿಗೆ ಪ್ರಯಾಣಿಕರು ಯುಎಇಗೆ ಪ್ರಯಾಣ ಆರಂಭಿಸಿದ್ದಾರೆ. ಏರ್‌ಪೋರ್ಟ್ ನಲ್ಲಿ ಪ್ರಯಾಣಿಕರ ಸಂಖ್ಯೆ ಹಂತ ಹಂತವಾಗಿ ಏರಿಕೆಯಾಗುತ್ತಿದ್ದು ಆ.1ರಿಂದ 15ರ ವರೆಗೆ 12,717 ಪ್ರಯಾಣಿಕರು ದೇಶೀಯ ವಿಮಾನಗಳ ಮೂಲಕ ನಿರ್ಗಮಿಸಿದ್ದಾರೆ. ಇದೇ ಸಮಯ 13,924 ಪ್ರಯಾಣಿಕರು ಮಂಗಳೂರಿಗೆ ಬಂದಿಳಿದಿದ್ದಾರೆ. ಜುಲೈ 1 ರಿಂದ 15 ರವರೆಗೆ 8,495 ಪ್ರಯಾಣಿಕರಿಗೆ ಹೋಲಿಸಿದರೆ ಶೇಕಡಾ 64 ರಷ್ಟು ಹೆಚ್ಚಳವಾಗಿದೆ. ಆಗಸ್ಟ್ ತಿಂಗಳ ಆರಂಭದಿಂದಲೇ ದೇಶೀಯ ವಿಮಾನಯಾನದಲ್ಲಿ ಕ್ಷಿಪ್ರ ಬೆಳವಣಿಗೆಯ ಜತೆಗೆ ಪ್ರಯಾಣಿಕರ ಸಂಖ್ಯೆಯಲ್ಲಿಯೂ ಏರಿಕೆಯಾಗಿದೆ ಎಂದು ಮಂಗಳೂರು ವಿಮಾನ ನಿಲ್ದಾಣದ ಪ್ರಕಟನೆ ತಿಳಿಸಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು