Saturday, November 23, 2024
ಪುತ್ತೂರು

ವಿವೇಕಾನಂದ ಕಾನೂನು ವಿದ್ಯಾಲಯದಲ್ಲಿ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಕಾನೂನು ಮಾಹಿತಿ ಮತ್ತು ಅಣಕು ನ್ಯಾಯಾಲಯ ಸ್ಪರ್ಧೆ-ಕಹಳೆ ನ್ಯೂಸ್

ವಿವೇಕಾನಂದ ಕಾನೂನು ವಿದ್ಯಾಲಯದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ ಪುತ್ತೂರು ಇವರ ಜಂಟಿ ಆಶ್ರಯದಲ್ಲಿ ವಕೀಲರ ಸಂಘ ಪುತ್ತೂರು(ರಿ), ವಿವೇಕಾನಂದ ಕಾನೂನು ಮಹಾ ವಿದ್ಯಾಲಯ ಹಿರಿಯ ವಿದ್ಯಾರ್ಥಿಗಳ ಸಂಘ ಮತ್ತು ವಿವೇಕಾನಂದ ಕಾನೂನು ಮಹಾವಿದ್ಯಾಲಯ ಮೂಟ್ ಕೋರ್ಟ್ ಸೊಸೈಟಿ ಇವರ ಸಹಕಾರದೊಂದಿಗೆ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಕಾನೂನು ಮಾಹಿತಿ ಮತ್ತು ಅಣಕು ನ್ಯಾಯಾಲಯ ಸ್ಪರ್ಧೆ ವಿವೇಕಾನಂದ ಕಾನೂನು ವಿದ್ಯಾಲಯದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಶ್ರೀ ಎಂ.ರಮೇಶ್, ಗೌರವಾನ್ವಿತ ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶರು ಮತ್ತು ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿಯವರು ಹಾಗೂ ಅಧ್ಯಕ್ಷರು, ತಾಲೂಕು ಕಾನೂನು ಸೇವೆಗಳ ಸಮಿತಿ ಪುತ್ತೂರು ಇವರು ದೀಪ ಬೆಳಗಿಸುವ ಉದ್ಘಾಟಿಸಿದರು. ಬಳಿಕ ಮಾತನಾಡಿದ ಶ್ರೀ ಎಂ ರಮೇಶ್ ಇವರು, ವಿದ್ಯಾರ್ಥಿಗಳು ತಾವು ಅರಿತುಕೊಳ್ಳಬೇಕಾದ ವಿಷಯಗಳನ್ನು ಮರೆತು ಶೂನ್ಯವಾಗಿ ಕುಳಿತುಕೊಳ್ಳದೆ, ಕರ್ತವ್ಯನಿರತರಾಗಿ, ಸಮಾಜಕ್ಕೆ ಭವಿಷ್ಯದಲ್ಲಿ ತಾವು ಕೊಡಬೇಕಾದ ಕೊಡುಗೆಗಳ ಬಗ್ಗೆ ಗಮನ ಹರಿಸಬೇಕು. ವಿದ್ಯಾರ್ಥಿ ದಿಸೆಯಿಂದಲೇ ಕಾನೂನು ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಲ್ಲಿ ತೊಡಗಿಸಿಕೊಂಡರೆ ಒಳ್ಳೆಯದು. ಹೆಚ್ಚೆಚ್ಚು ಮಂದಿ ನ್ಯಾಯಾಧೀಶ ಹುದ್ದೆಗಳತ್ತ ದೃಷ್ಟಿ ಹರಿಸಬೇಕು. ವಿದ್ಯಾರ್ಥಿಗಳು ವಿವೇಚನೆ, ದೂರದರ್ಶಿತ್ವದಂತಹ ಗುಣಗಳನ್ನು ತಮ್ಮಲ್ಲಿ ಬೆಳೆಸಿಕ್ಕೊಳ್ಳಬೇಕು. ನಿರಂತರ ಪರಿಶ್ರಮ, ಶ್ರದ್ಧೆಯ ಮೂಲಕ ಗುರಿ ಮುಟ್ಟಬಹುದು. ಪ್ರತಿಯೊಬ್ಬರಿಗೂ ತಮ್ಮದೇ ಆದ ಕನಸುಗಳಿರುತ್ತವೆ. ಸಾಧಿಸಬೇಕೆಂಬ ಛಲವುಳ್ಳ, ಗಮ್ಯದೆಡೆಗೆ ಸಾಗುವ ವಿದ್ಯಾಥಿಗಳಿಗೆ ಸದಾ ತಮ್ಮ ಪ್ರೋತ್ಸಾಹ, ಬೆಂಬಲವಿದೆಯೆನ್ನುತ್ತಾ ಬದುಕಿನಲ್ಲಿ ಒಳನೋಟ, ಅರಿವು, ಸ್ಪಷ್ಟತೆ ಎಷ್ಟು ಮುಖ್ಯ ಎಂಬುದನ್ನು ಪ್ರಾಯೋಗಿಕವಾಗಿ ಉದಾಹರಣೆಯೊಂದಿಗೆ ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಶ್ರೀ ಜಯಾನಂದ ಕೆ, ವಕೀಲರು ಪುತ್ತೂರು ಇವರು ನಮ್ಮ ಮೂಲಭೂತ ಹಕ್ಕುಗಳು ಹಾಗೂಕರ್ತವ್ಯಗಳ ಬಗ್ಗೆ ಅರಿವು ನೀಡಿ ಜಾಗೃತಿ ಮೂಡಿಸಿದರು. ಇದರ ಜೊತೆಗೆ ಕಾನೂನು ಸುವ್ಯವಸ್ಥೆಯ ಬಗ್ಗೆ ಸವಿವರವಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕ್ಕೊಂಡಿದ್ದ ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಮನೋಹರ್ ಕೆ.ವಿ ಮಾತನಾಡಿ, ಕೌಶಲತೆಯನ್ನು ಬೆಳೆಸಿಕ್ಕೊಳ್ಳುವುದು ಕಾನೂನು ಕ್ಷೇತ್ರದಲ್ಲಿ ತೊಡಗಿಸಿಕ್ಕೊಳ್ಳ ಬಯಸುವವರಿಗೆ ಅತ್ಯಗತ್ಯ. ಸುಮಾರು ಎರಡು ದಶಕಗಳ ಕಾಲ ವಕಾಲತ್ತು ವೃತ್ತಿಯಲ್ಲಿ ತೊಡಗಿಸಿಕ್ಕೊಂಡಿದ್ದ ಮೋಹನದಾಸ ಕರಮ ಚಂದ ಗಾಂಧಿಯವರು ತಮ್ಮ ವೃತ್ತಿ ಜೀವನದ ಪ್ರಾರಂಭದ ದಿನಗಳಲ್ಲಿ ಸಾಕಷ್ಟು ಧೈರ್ಯ ಸಾಲದೆ, ಕೈ ಚೆಲ್ಲಿ ಕೂತಿದ್ದ ದಿನಗಳನ್ನು ನೆನಪಿಸಿ, ಹೇಗವರು ತಮ್ಮ ವ್ಯಕ್ತಿಗತ ತೊಡಕುಗಳನ್ನು ನಿವಾರಿಸಿ ಆದರ್ಶ ನ್ಯಾಯವಾದಿಯಾಗಿ ಮಾರ್ಪಾಡಾದರು ಎಂದು ಹೇಳಿದರು.
ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ವಿಶ್ವೇಶ್ವರ ಭಟ್ ಬಂಗಾರಡ್ಕ ಮತ್ತು ಕಾನೂನು ಅಧ್ಯಯನ ವಿಭಾಗದ ನಿರ್ದೇಶಕರಾದ ಡಾ. ಬಿ.ಕೆ.ರವೀಂದ್ರ, ವಕೀಲರು ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಶಶಿಧರ್ ಬಿ ಎನ್, ಆಡಳಿತ ಮಂಡಳಿಯ ಸಂಚಾಲಕರಾದ ಶ್ರಿ ವಿಜಯನಾರಾಯಣ ಕೆ .ಎಂ. ಮತ್ತು ಸದಸ್ಯರು, ವಕೀಲ ವೃಂದದವರು, ಹಿರಿಯ ವಿದ್ಯಾರ್ಥಿಗಳು ಹಾಗೂ ಅಣಕು ನ್ಯಾಯಾಲಯ ಸ್ಪರ್ಧೆಗಳಿಗೆ ತೀರ್ಪುಗಾರರಾಗಿ ಆಗಮಿಸಿದ ಪತ್ತೂರಿನ ನ್ಯಾಯವಾದಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಅಕ್ಷತಾ ಎ. ಪಿ. ಸ್ವಾಗತಿಸಿದರು. ಉಪನ್ಯಾಸಕಿಯರಾದ ಕುಮಾರಿ ಶ್ರೀ ರಕ್ಷಾ ವಂದಿಸಿದರು, ಶ್ರೀಮತಿ ಸಂಧ್ಯಾ ಪಿ.ಎಂ. ಕಾರ್ಯಕ್ರಮ ನಿರೂಪಿಸಿದರು.