ಸಾಧನೆ ಮಾಡಲು ವಯಸ್ಸು ಅಡ್ಡಿಯಲ್ಲ ಇತರರಿಗೆ ಮಾದರಿಯಾಗುವಂತೆ ಬೆಳೆಯಬೇಕು ಡಾ. ಭಾರತಿ ಗೋಪಾಲಕೃಷ್ಣ- ಕಹಳೆ ನ್ಯೂಸ್
ಸಾಧನೆ ಮಾಡಲು ಪ್ರಾಯ ಅಡ್ಡಿಯಲ್ಲ. ಹಲವು ಸವಾಲುಗಳ ನಡುವೆಯೇ ತಮ್ಮ ಆಸಕ್ತಿಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಇತರರಿಗೆ ಮಾದರಿಯಾಗುವಂತೆ ಕಾರ್ಯನಿರ್ವಹಿಸುವುದು ಅಭಿನಂದನೀಯ ಎಂದು ಉಜಿರೆ ಬೆನಕ ಆಸ್ಪತ್ರೆಯ ವೈದ್ಯೆ ಹಾಗೂ ಆನ್ಸ್ ಕ್ಲಬ್ಬಿನ ಕಾರ್ಯದರ್ಶಿ ಡಾ. ಭಾರತಿ ಗೋಪಾಲಕೃಷ್ಣ ಅವರು ತಿಳಿಸಿದರು. ಡಾ. ಭಾರತಿ ಅವರು ಬೆಳ್ತಂಗಡಿ ರೋಟರಿ ಆನ್ಸ್ ಕ್ಲಬ್ ಆಶ್ರಯದಲ್ಲಿ ಉಜಿರೆ ಬೆನಕ ಆಸ್ಪತ್ರೆಯಲ್ಲಿ ಜಾಗತಿಕ ಛಾಯಚಿತ್ರಗಾರರ ದಿನದ ಅಂಗವಾಗಿ ಗೇರುಕಟ್ಟೆಯ ಮಹಿಳಾ ಫೊಟೋಗ್ರಾಫರ್ ಶ್ರೀಮತಿ ವಿಜಯ ಹರಿಪ್ರಸಾದ್ ಅವರನ್ನು ಅಭಿನಂದಿಸಿ ಮಾತನಾಡುತ್ತಿದ್ದರು. ಶ್ರೀಮತಿ ವಿಜಯ ಹರಿಪ್ರಸಾದ್ ಅವರು ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡುತ್ತಾ “ಈ ವಯಸ್ಸಿನಲ್ಲಿ ನಿಮ್ಮಿಂದ ಕಲಿಯಲು ಕಷ್ಟಸಾಧ್ಯ ಎಂಬ ಮಾತುಗಳನ್ನೇ ಸವಾಲಾಗಿ ಸ್ವೀಕರಿಸಿ, ಸತತ ಪ್ರಯತ್ನ, ಕುಟುಂಬದ ಸದಸ್ಯರ ಹಾಗೂ ಸ್ನೇಹಿತೆಯರ ಬೆಂಬಲ ನನ್ನ ಬೆಳವಣಿಗೆಗೆ ಪೂರಕವಾಯಿತು” ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಬೆನಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ರೊ.ಡಾ.ಗೋಪಾಲಕೃಷ್ಣ, ರೋಟರಿ ಪೂರ್ವಾಧ್ಯಕ್ಷ ಡಾ.ಎ.ಜಯಕುಮಾರ ಶೆಟ್ಟಿ, ಶ್ರೀ ವರುಣ್ಹಾ ಗೂ ಶ್ರೀಮತಿ ಅಂಜಲಿ ಉಪಸ್ಥಿತರಿದ್ದರು. ಆನ್ಸ್ ಕ್ಲಬ್ ಅಧ್ಯಕ್ಷೆ ನವೀನಾ.ಜೆ.ಕೆ ಸ್ವಾಗತಿಸಿ ಆನ್ಸ್ ಕ್ಲಬ್ ಉಪಾಧ್ಯಕ್ಷೆ ಗಾಯತ್ರಿ ಶ್ರೀಧರ್ ವಂದಿಸಿದರು.