Sunday, January 19, 2025
ಕುಂದಾಪುರ

ಕುಂದಾಪುರ ಸರ್ಕಾರಿ ಆಸ್ಪತ್ರೆಯ ನೂತನ ಆಕ್ಸಿಜನ್ ಘಟಕಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ-ಕಹಳೆ ನ್ಯೂಸ್

ಕುಂದಾಪುರ: ನಿಮಿಷಕ್ಕೆ 500 ಲೀ ಆಕ್ಸಿಜನ್ ಕೊಡುವಂತಹ ಪ್ಲ್ಯಾಂಟ್ ಸಿದ್ದವಾಗಿದೆ. ಅದರ ಉದ್ಘಾಟನೆಯನ್ನು ಪೆಟ್ರೋಲಿಯಂ ಸಚಿವರು ಮಾಡಲಿದ್ದಾರೆ. ಹಾಗಾಗಿ ಸ್ವಲ್ಪ ದಿನ ಮುಂದೂಡಲಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಗುರುವಾರ ಕುಂದಾಪುರ ಸರ್ಕಾರಿ ಆಸ್ಪತ್ರೆಯ ನೂತನ ಆಕ್ಸಿಜನ್ ಘಟಕ ವೀಕ್ಷಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಹರೀಶ್ ಬಂಗೇರ ಅವರ ಬಿಡುಗಡೆ ಕಷ್ಟದಲ್ಲಾಗಿದೆ. ಅಲ್ಲಿನ ದೊರೆಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ನಿಂದನೆ ಮಾಡಿದ್ದಾರೆ ಎಂಬ ನಿಟ್ಟಿನಲ್ಲಿ ಅವರ ಬಂಧನವಾಗಿತ್ತು. ಸಾಮಾನ್ಯವಾಗಿ ಹೊರ ದೇಶದ ರಾಜ ಪರಿವಾರದ ಬಗ್ಗೆ ಯಾವುದೇ ನಿಂದನೆ ಮಾಡಿದ ಮಾಹಿತಿ ಬಂದರೆ ಅವರಿಗೆ ಕಠಿಣ ಶಿಕ್ಷೆ ಕೊಡುತ್ತಾರೆ. ಆದರೆ ಹರೀಶ್ ಬಂಗೇರ ಅವರ ಅದೃಷ್ಟ. ಇಷ್ಟು ದಿನ ಅವರು ಜೈಲಿನಲ್ಲಿ ಬದುಕಿದ್ರು ಹಾಗೂ ಅವರನ್ನು ಬಿಡುಗಡೆ ಮಾಡಲು ಸಾಕಷ್ಟು ಪ್ರಯತ್ನ ನಡೆದಿದೆ. ಸತ್ಯವನ್ನು ಸಾಭೀತು ಮಾಡಿದ ಮೇಲೆ ಅವರಿಗೆ ಬಿಡುಗಡೆ ಭಾಗ್ಯ ಸಿಕ್ಕಿದೆ. ಇದು ನಮಗೆಲ್ಲಾ ಸಂತೋಷ ತಂದಿದೆ. ಕುಂದಾಪುರ ಮೇಲ್ಸೆತುವೆ ಸಂಚಾರಕ್ಕೆ ಮುಕ್ತವಾಗಿದೆ. ಆದರೆ ಡೈವರ್ಷನ್ ಸಮಸ್ಯೆಯ ಬಗ್ಗೆ ಮನವಿ ನೀಡಿದ್ದಾರೆ. ಹೆದ್ದಾರಿ ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಕುಂದಾಪುರ ಉಪ ವಿಭಾಗಧಿಕಾರಿ ಕೆ.ರಾಜು, ಸರಕಾರಿ ಆಸ್ಪತ್ರೆಯ ವೈದ್ಯ ಡಾ| ನಾಗೇಶ್, ರಾಜ್ಯ ಆಹಾರ ನಿಗಮದ ಉಪಾಧ್ಯಕ್ಷ ಕಿರಣ್ ಕೊಡ್ಗಿ, ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು