Sunday, January 19, 2025
ಅಂಕಣ

‘ದಾಭೋಳ್ಕರ್ ಹತ್ಯೆ ಪ್ರಕರಣ : ವಾಸ್ತವ ಮತ್ತು ವಿಪರ್ಯಾಸ !’ ಈ ಕುರಿತು ವಿಶೇಷ ‘ಆನ್‌ಲೈನ್’ ಸಂವಾದ-ಕಹಳೆ ನ್ಯೂಸ್

ಡಾ. ದಾಭೋಳ್ಕರ್ ಹತ್ಯೆಯ ತನಿಖೆಗೆ ಉದ್ದೇಶಪೂರ್ವಕವಾಗಿ ವಿಶಿಷ್ಟವಾದ ದಿಕ್ಕನ್ನು ನೀಡಲಾಗುತ್ತಿದೆ, ಈ ಬಗ್ಗೆ ತನಿಖೆ ನಡೆಸಬೇಕು ! – ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ್

ಆಗಸ್ಟ್ 20, 2013 ರಂದು, ಪುಣೆಯಲ್ಲಿ ಡಾ. ನರೇಂದ್ರ ದಾಭೋಲ್ಕರ್ ರವರ ಹತ್ಯೆಯಾದ ನಂತರ ಪುಣೆಯ ಪೊಲೀಸರು ಖಂಡೇಲ್ವಾಲ್ ಮತ್ತು ನಾಗೋರಿಯನ್ನು ಬಂಧಿಸಿದ್ದರು. ನಂತರ, ಈ ತನಿಖೆ ‘ಸಿಬಿಐ’ ಹತ್ತಿರ ಬಂದಾಗ, ಅವರು ಈ ಪ್ರಕರಣದಲ್ಲಿ ಸಾರಂಗ್ ಅಕೋಲ್ಕರ್ ಮತ್ತು ವಿನಯ್ ಪವಾರ್ ಅವರನ್ನು ಆರೋಪಿಯನ್ನಾಗಿಸಿ ಡಾ. ವೀರೇಂದ್ರ ತಾವಡೆ ಅವರನ್ನು ಮುಖ್ಯ ಸೂತ್ರಧಾರರೆಂದು ಬಂಧಿಸಲಾಯಿತು. ಪ್ರತ್ಯಕ್ಷದರ್ಶಿ ಸಾಕ್ಷಿದಾರರನ್ನೂ ಮುಂದೆ ತರಲಾಯಿತು. ನಂತರ 2018 ರಲ್ಲಿ ಅದೇ ‘ಸಿಬಿಐ’ಯ ಅಧಿಕಾರಿಗಳು, ‘ಸಾರಂಗ್ ಅಕೋಲ್ಕರ್ ಮತ್ತು ವಿನಯ್ ಪವಾರ್ ಅಲ್ಲ, ಸಚಿನ್ ಅಂಧುರೆ ಮತ್ತು ಶರದ್ ಕಳಸ್ಕರ್ ಇವರು ದಾಭೋಳ್ಕರ್ ಅವರ ಮೇಲೆ ಗುಂಡು ಹಾರಿಸಿದರು ಎಂದು ತಮ್ಮ ಹೇಳಿಕೆಯನ್ನು ಬದಲಾಯಿಸಿದರು. ಇದಕ್ಕೆ ತನಿಖೆ ಎಂದು ಕರೆಯಬೇಕೇ ? ಈ ತನಿಖೆಯ ವಿಶ್ವಾಸಾರ್ಹತೆಯ ಬಗ್ಗೆ ಯಾರೂ ಮಾತನಾಡುವುದಿಲ್ಲ. ಈ ಪ್ರಕರಣದ ಆರೋಪಿಗಳಿಗೆ ಜಾಮೀನು ಸಿಗುತ್ತಿಲ್ಲ. ಇನ್ನೂ ಸಹ ಡಾ. ತಾವಡೆ ಜೈಲಿನಲ್ಲಿದ್ದಾರೆ. ಈ ಘಟನೆಯನ್ನು ಸರಿಯಾಗಿ ತನಿಖೆ ಮಾಡಿಲ್ಲ; ಆದರೆ ದಾಭೋಳ್ಕರ್ ಹತ್ಯೆಯ ತನಿಖೆಗೆ ವಿಶಿಷ್ಟವಾದ ದಿಕ್ಕನ್ನು ನೀಡಲಾಗುತ್ತಿದೆ, ಅದರ ಬಗ್ಗೆ ತನಿಖೆ ಆಗಬೇಕು, ಎಂದು ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷ ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ್ ಹೇಳಿದರು. ಹಿಂದೂ ಜನಜಾಗೃತಿ ಸಮಿತಿಯು ಆಯೋಜಿಸಿದ ‘ದಾಭೋಳ್ಕರ್ ಹತ್ಯೆ ಪ್ರಕರಣ: ವಾಸ್ತವ ಮತ್ತು ವಿಪರ್ಯಾಸ !’ ಎಂಬ ವಿಶೇಷ ‘ಆನ್‌ಲೈನ್’ ಸಂವಾದದಲ್ಲಿ ಅವರು ಮಾತನಾಡುತ್ತಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇಚಲಕರಂಜಿಕರ್ ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ‘ದಾಭೋಳ್ಕರ್ ಹತ್ಯೆ ಪ್ರಕರಣದಲ್ಲಿ, ಒಟ್ಟಾರೆ ತನಿಖಾ ಸಂಸ್ಥೆಗಳು ಅನುಕೂಲಕ್ಕೆ ತಕ್ಕಂತೆ ಎಲ್ಲ ವಿಷಯಗಳಲ್ಲಿ ದಾರಿ ತಪ್ಪಿಸುತ್ತಿವೆ. ಇದು ನ್ಯಾಯಾಲಯದಲ್ಲಿ ಸ್ಪಷ್ಟವಾಗಲಿದೆ. ಯಾವ ರೀತಿ, ಮಡಗಾಂವ್ ಪ್ರಕರಣದಲ್ಲಿ ಸನಾತನ ಸಂಸ್ಥೆಯ 6 ಸಾಧಕರನ್ನು ಖುಲಾಸೆಗೊಳಿಸಲಾಗಿದೆ, ಅದೇ ರೀತಿ ಈ ಪ್ರಕರಣದಲ್ಲೂ ಆಗುತ್ತದೆ, ಎಂದು ನಾವು ಭಾವಿಸುತ್ತೇವೆ’ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ರಾಜ್ಯ ಸಂಘಟಕ ಶ್ರೀ. ಸುನಿಲ್ ಘನವಟ ಅವರು ಮಾತನಾಡುತ್ತಾ, ‘ತಮ್ಮನ್ನು ವಿವೇಕವಾದಿ ಎಂದು ಕರೆಯುವ ದಾಭೋಳ್ಕರ್ ಅವರ ಟ್ರಸ್ಟ್‌ನಲ್ಲಿ ಹಣಕಾಸಿನ ಅನೇಕ ಹಗರಣಗಳನ್ನು ನಾವು ಸಾಕ್ಷಿ ಸಹಿತ ಬಹಿರಂಗಪಡಿಸಿದ್ದೇವೆ. ಇದೇ ರೀತಿಯ ಅವಲೋಕನಗಳನ್ನು ಸಾತಾರಾ ಚಾರಿಟಿ ಆಯುಕ್ತರ ಕಚೇರಿಯ ನಿರೀಕ್ಷಕರು, ಅಧೀಕ್ಷಕರು ಮತ್ತು ಸಹಾಯಕ ಆಯುಕ್ತರು ವರದಿ ಮಾಡಿದ್ದಾರೆ. ಅಷ್ಟೇ ಅಲ್ಲ, ಇದೇ ಸಂಘಟನೆಯ ಕಾರ್ಯಾಧ್ಯಕ್ಷರಾದ ಅವಿನಾಶ್ ಪಾಟೀಲ್ ಅವರು ಟ್ರಸ್ಟ್ ನ ಆಡಳಿತ, ಹಾಗೂ ಆ ಟ್ರಸ್ಟ್‌ಅನ್ನು ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸುತ್ತಿರುವ ದಾಭೋಳ್ಕರ್ ಕುಟುಂಬದ ವಿರುದ್ಧ ಬಹಿರಂಗವಾಗಿ ಆರೋಪಗಳನ್ನು ಮಾಡಿದರು. ಇದರಿಂದ ನಾವು ಮಾಡಿದ ಆರೋಪ ನಿಜವಾಗಿತ್ತು, ಎಂಬುದು ಸಾಬೀತಾಗುತ್ತದೆ. ಆದ್ದರಿಂದ ‘ಅಂ.ನಿ.ಸ’ನ ಅಕ್ರಮಗಳನ್ನು ಕೂಲಂಕಷವಾಗಿ ತನಿಖೆ ಮಾಡಬೇಕು. ‘ಅಂ.ನಿ.ಸ’ನ ಟ್ರಸ್ಟ್‌ಗೆ ತಕ್ಷಣವೇ ನಿರ್ವಾಹಕರನ್ನು ನೇಮಿಸಬೇಕು’ ಎಂದು ಹೇಳಿದರು.

ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಶ್ರೀ. ಚೇತನ ರಾಜಹಂಸ ಅವರು ಮಾತನಾಡುತ್ತಾ, ‘ಮಾನವೀಯ ನಾಸ್ತಿಕ್ ಮಂಚ್’ ಎಂದು ಹಿಂದೆ ಕರೆಯಲ್ಪಡುತ್ತಿದ್ದ ಸಂಘಟನೆಯು ಈಗ ‘ಅಂಧಶ್ರದ್ಧಾ ನಿರ್ಮಲನ ಸಮಿತಿ’ ಎಂದು ಮುದ್ದಾದ ಹೆಸರು ಇದೆ; ಆದರೆ ಅವರ ನಿಜವಾದ ಪ್ರಚಾರ ನಾಸ್ತಿಕತೆ ಬಗ್ಗೆಯಾಗಿದೆ. ಧರ್ಮವನ್ನು ಅಫೀಮಿನ ಮಾತ್ರೆ ಎಂದು ಪರಿಗಣಿಸುತ್ತಾರೆ, ಅವರು ವೈಯಕ್ತಿಕವಾಗಿ ನಾಸ್ತಿಕರಾಗಿದ್ದಾರೆ. ಅವರ ರಾಜಕೀಯ ಚಿಂತನೆ ಕಮ್ಯುನಿಸ್ಟ್ ಆಗಿದೆ. ಅವರು ಭೌತಿಕ ಮಟ್ಟದಲ್ಲಿ ಹೆಣಗಾಡುತ್ತಿರುವಾಗ ನಕ್ಸಲೀಯರು ಆಗಿರುತ್ತಾರೆ, ಸೈದ್ಧಾಂತಿಕ ಮಟ್ಟದಲ್ಲಿ ಹೋರಾಡಿದಾಗ ಅವರು ‘ಅರ್ಬನ್ ನಕ್ಸಲರು’ ಆಗುತ್ತಾರೆ. ಹಾಗಾಗಿ ಧರ್ಮವನ್ನು ಒಪ್ಪದಿರುವ ಇಂತಹ ಚಳುವಳಿಗಳಿಂದ ತಾವು ದೂರವಿರಲು ನಾವು ನಿಮಗೆ ಮನವಿ ಮಾಡಲು ಬಯಸುತ್ತೇವೆ’ ಎಂದು ಹೇಳಿದರು.

ತಮ್ಮ ಸವಿನಯ
ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು
ಹಿಂದೂ ಜನಜಾಗೃತಿ ಸಮಿತಿ ( ಸಂ :99879 66666)