Sunday, January 19, 2025
ಪುತ್ತೂರು

ಗುರುರಾಘವೇಂದ್ರ ಸ್ವಾಮಿಗಳ 350ನೇ ಆರಾಧನಾ ಮಹೋತ್ಸವ ಸಂದರ್ಭದಲ್ಲಿ ಮಂತ್ರಾಲಯ ದಲ್ಲಿ ಪುತ್ತೂರು ಜಗದೀಶ ಆಚಾರ್ಯ ಮತ್ತು ತಂಡದವರಿಂದ ನಡೆಯಲಿದೆ ವೈವಿಧ್ಯಮಯವಾದ ದಾಸಾಮೃತ ಸಂಗೀತ ಕಾರ್ಯಕ್ರಮ – ಹಾಗೂ 23 ರಂದು ಆರಾಧನೆ ಭಕ್ತಿ ಆರಾಧನೆ ಭಕ್ತಿಗೀತೆ ವಿಡಿಯೋ ಬಿಡುಗಡೆ. ಕಹಳೆ ನ್ಯೂಸ್

ಶ್ರೀ ಗುರುರಾಘವೇಂದ್ರ ಸ್ವಾಮಿಗಳ 350ನೇ ಆರಾಧನಾ ಮಹೋತ್ಸವ ಸಪ್ತಾಹ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ತುಳುನಾಡಿನ ಗಾನ ಮಾಂತ್ರಿಕ ವಿ|| ಜಗದೀಶ ಆಚಾರ್ಯ ಪುತ್ತೂರು ಮತ್ತು ತಂಡದವರಿಂದ ವೈವಿಧ್ಯಮಯವಾದ ದಾಸಾಮೃತ ಸಂಗೀತ ಕಾರ್ಯಕ್ರಮ, ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮುಖ್ಯ ಪ್ರಧಾನ ಸಾಂಸ್ಕøತಿಕ ವೇದಿಕೆಯಲ್ಲಿ, ಆಗಸ್ಟ್ 21 ರಂದು ಸಂಜೆ 5:30 ರಿಂದ 7-00 ಘಂಟೆಯವರೆಗೆ ನಡೆಯಲಿದೆ.


ಆಗಸ್ಟ್ 23ರಂದು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮುಖ್ಯ ಪ್ರಧಾನ ಸಾಂಸ್ಕøತಿಕ ವೇದಿಕೆಯಲ್ಲಿ, ಬೆಂಗಳೂರಿನ ಶ್ರೀ ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನ ಟ್ರಸ್ಟನ ಅಧ್ಯಕ್ಷರಾದ ಶ್ರೀಮತಿ ಗೌರಿ ನಾಗರಾಜ ನಿರ್ಮಾಣದಲ್ಲಿ, ಹಿರಿಯ ಸಾಹಿತಿ ದಿ|| ಬೆಳಗೆರೆ ಮಹಾಲಕ್ಷ್ಮಮ್ಮ ನವರು ರಚಿಸಿರುವ ಭಕ್ತಿ ಗೀತೆಗೆ, ಸಂಗೀತ ವಿ|| ಜಗದೀಶ ಪುತ್ತೂರು, ಅವರ ಸಂಗೀತ ನಿರ್ದೇಶನ ಮತ್ತು ಗಾಯನ ಇರುವ ಆರಾಧನೆ ಭಕ್ತಿ ಆರಾಧನೆ ವಿಡಿಯೋ ಧ್ವನಿ ಸುರುಳಿ ಬಿಡುಗಡೆ, ಮಂತ್ರಾಲಯ ಪೀಠಾಧಿಪತಿಗಳಾದಂತಹ ಪರಮ ಪೂಜ್ಯ ಶ್ರೀ ಶ್ರೀ ಶ್ರೀ 108 ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಅಮೃತ ಹಸ್ತದಿಂದ ನೆರವೇರಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಇದೇ ಸಂದರ್ಭದಲ್ಲಿ ಮಂತ್ರಾಲಯ ಪೀಠಾಧಿಪತಿಗಳಾದಂತಹ ಪರಮಪೂಜ್ಯ ಶ್ರೀ ಶ್ರೀ ಶ್ರೀ ಸುಬುದೇಂದ್ರ ತೀರ್ಥ ಶ್ರೀಪಾದಂಗಳವರಿಗೆ ಬೆಂಗಳೂರಿನ ಶ್ರೀ ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನದ ವತಿಯಿಂದ ಗುರುವಂದನಾ ಕಾರ್ಯಕ್ರಮ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು